ಬಿಗ್ ಬಾಸ್ ಮನೆಯಿಂದ ಚೈತ್ರಾ ವಾಸುದೇವನ್ ಹೊರಗೆ ಬಂದಿದ್ದಾರೆ. ಎರಡನೇ ವಾರಕ್ಕೆ ನಿರೂಪಕಿ ತಮ್ಮ ಪ್ರಯಾಣ ಅಂತ್ಯಗೊಳಿಸಿದ್ದಾರೆ. ಮನೆಯಿಂದ ಹೊರಗೆ ಬರುವಾಗ ಗಾಯಕ ವಾಸುಕಿ ವೈಭವ್ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಕಿರಿಕ್ ಪಾರ್ಟಿಯ ಚಂದನ್ ಆಚಾರ್ ಮತ್ತು ಚೈತ್ರಾ ವಾಸುದೇವನ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗೆ ಬರಲೇಬೇಕಿತ್ತು. ಆದರೆ ಅಂತಿಮವಾಗಿ ಶಾಕ್ ಸಿಕ್ಕಿದ್ದು ಚೈತ್ರಾ ವಾಸುದೇವನ್ ಅವರಿಗೆ.

ಬಯಲಾಯ್ತು ಚೈತ್ರಾ ವಾಸುದೇವನ್ ಮದುವೆ ಗುಟ್ಟು

ಕಳೆದ ವಾರ ಚೈತ್ರಾ ಕೊಟ್ಟೂರು ಹಾಗೂ ಚೈತ್ರ ವಾಸುದೇವನ್ ಮತ್ತೆ ನಾಮಿನೇಟ್ ಆಗಿದ್ದರು. ಇವರನ್ನ ಹೊರತುಪಡಿಸಿದ್ರೆ, ಚಂದನ್ ಆಚಾರ್, ದೀಪಿಕಾ ದಾಸ್, ಪ್ರಿಯಾಂಕ ಹಾಗೂ ಸುಜಾತ ನಾರಾಯಣ್ ನಾಮಿನೇಟ್ ಆಗಿದ್ದರೂ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಹೊರಗೆ ಬಂದ ಚೈತ್ರಾ ಅವರನ್ನು ಕಿಚ್ಚ ಸುದೀಪ್ ಪ್ರಶ್ನೆಗಳ ಬಾಣ ಎಸೆದರು.ಯಾಕೆ ಹೊರಗೆ ಬಂದ್ರಿ ಎನ್ನುವುದಕ್ಕೆ  ಉತ್ತರ ಕೇಳಿದಾಗ ನನ್ನನ್ನು ಮನೆಯಲ್ಲಿ ಎಲ್ಲರೂ ಕೊನೆಯ ಆಪ್ಶನ್ ಆಗಿ ಇಟ್ಟುಕೊಂಡಿದ್ದೆ ಹೊರಬರಲು ಕಾರಣವಾಯಿತು, ನನಗೆ ಮೈ ಹುಷಾರು ಇರಲಿಲ್ಲ. ಆರಂಭದಿಂದಲೂ ಆರೋಗ್ಯ ಸಮಸ್ಯೆ ನನಗೆ ಕಾಡುತ್ತಿತ್ತು ಎಂದು ಹೇಳಿ ಮನೆಯಿಂದ ಹೊರಬರಲು ಬೇರೆಯವರೇ ಕಾರಣ ಎಂದು ಹೇಳಿಕೊಂಡೇ ಹೋದರು. ಒಂದು ಕ್ಷಣ ಇವರ ಮಾತುಗಳನ್ನು ಕೇಳಿ ಕಿಚ್ಚ ಸುದೀಪ್ ಅವರೇ ಶಾಕ್ ಗೆ ಒಳಗಾದರು.

ಇದಕ್ಕೂ ಮೊದಲು ಮನೆಯವರ ಪಂಚಾಯಿತಿ ನಡೆಸಿದ ಕಿಚ್ಚ, ಜೈಜಗದೀಶ್ ಅವರ ಬೈಗುಳ ವಿಚಾರ, ಯೆಸ್ ಆರ್ ನೋ .. ಹೀಗೆ ಅನೇಕ ವಿಚಾರಗಳನ್ನು ಮಾತನಾಡುತ್ತ ಅಂತಿಮವಾಗಿ ನಾಮಿನೇಶನ್ ಗೆ ಬಂದಿ ನಿಂತರು.