Asianet Suvarna News Asianet Suvarna News

GHOST: ಶಿವರಾಜ್​ಕುಮಾರ್​ ಚಿತ್ರಕ್ಕೆ 'ನಾನು ನಂದಿನಿ' ವಿಕ್ಕಿ ಈ ಪರಿ ಎಂಟ್ರಿನಾ? ವಿಡಿಯೋ ನೋಡಿ ಸೂಪರ್​ ಎಂದ ಫ್ಯಾನ್ಸ್​

ನಾನು ನಂದಿನಿ ಖ್ಯಾತಿಯ ವಿಕ್ರಮ್​ ಅವರು ಶಿವರಾಜ್​ ಕುಮಾರ್​ ಅವರ ಮುಂಬರುವ ಘೋಸ್ಟ್​ ಚಿತ್ರದ ಪ್ರೋಮೋಗೆ ಸಕತ್​ ಎಂಟ್ರಿ ಕೊಟ್ಟಿದ್ದು, ಫ್ಯಾನ್​​ ಫಿದಾ ಆಗಿದ್ದಾರೆ. 
 

Vicky of Nanu Nandini fame   given  entry to the promo of Shivraj Kumars  Ghost  suc
Author
First Published Oct 12, 2023, 6:10 PM IST

 ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಂತೂ ಸೃಷ್ಟಿಸ್ತಿರೋ ಹವಾ ಅಷ್ಟಿಷ್ಟಲ್ಲ. ವಿಕಿಪೀಡಿಯಾ ಖ್ಯಾತಿಯ ವಿಕ್ರಮ್​ ಅಲಿಯಾಸ್​ ವಿಕ್ಕಿ ಅವರು ಮಾಡಿರುವ ಈ ಹಾಡಿನ ಮೋಡಿಯಂತೂ ಇನ್ನೂ ನಿಲ್ಲುತ್ತಲೇ ಇಲ್ಲ. ಇದೀಗ ವಿಕ್ಕಿ ಹಾಗೂ ಅವರ ರೀಲ್ಸ್​ ಪಾರ್ಟನಲ್​ ಅಮಿತ್​ ಸುಪಾರಿ ಕೊಟ್ಟು ಇಬ್ಬರನ್ನು ಎತ್ತಾಕಿ ನಟ ಶಿವರಾಜ್​ ಕುಮಾರ್​ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಸಕತ್​ ಎಂಜಾಯ್​ ಮಾಡುತ್ತಿದ್ದಾರೆ. ಆರಂಭದಲ್ಲಿ ವಿಕ್ಕಿ ಮತ್ತು ಅವರ ರೀಲ್ಸ್ ಪಾರ್ಟನಲ್​ ಅಮಿತ್​, ನಿರ್ದೇಶಕ ಶ್ರೀನಿ ಅವರಿಗೆ ಆವಾಜ್​ ಹಾಕುವ ಮೂಲಕ ವಿಡಿಯೋ ಶುರುವಾಗುತ್ತದೆ. ಪಾನೀಪುರಿಯಲ್ಲಿ ವಿಸ್ಕಿ ಹಾಕಿಕೊಟ್ಟು ನಮ್ಮನ್ನೇ ಯಾವಾರ್​ಸ್ತಿಯಾ ಎಂದು ವಿಕ್ಕಿ ಶ್ರೀನಿಯವರನ್ನು ಕೇಳುತ್ತಾರೆ.  ಶ್ರೀನಿ ಗುರಾಯಿಸಿ ನೋಡಿದಾಗ, ಏನು ನಮ್ಮನ್ನೇ ಗುರಾಯಿಸ್ತಿರಾ, ನಾವು ಡಬಲ್​ ಮೀಟರ್​ನವ್ರು, ಇವತ್ತು ಬೆಳಿಗ್ಗೆ ಅಷ್ಟೇ ಸುಪಾರಿ ತಗೊಂಡು ಇಬ್ಬರನ್ನು ಎತ್ತಾಕಿದೀವಿ ಎನ್ನುತ್ತಾರೆ. ಮುಂದಿನ ದೃಶ್ಯದಲ್ಲಿ ಶಿವರಾಜ್​ಕುಮಾರ್​ ಪ್ರತ್ಯಕ್ಷ! 

ಶಿವರಾಜ್​ ಕುಮಾರ್​ ಅವರು  ಟೀ ಕಪ್ ಹಿಡಿದು ಕುಳಿತಿದ್ದನ್ನು ನೋಡಬಹುದು.  ಇವರ ಎದುರು ವಿಕ್ಕಿ ಹಾಗೂ ಅಮಿತ್ ನಿಂತಿದ್ದಾರೆ.  ಈ ವೇಳೆ ಶ್ರೀನಿ ಬಂದು ‘ಬೆಳಗ್ಗೆ ನನಗೆ ಆವಾಜ್ ಹಾಕಿದ್ದು ಇವರೇ’ ಎಂದು ಕಂಪ್ಲೇಂಟ್ ಮಾಡುತ್ತಾರೆ.  ಶಿವರಾಜ್​ ಕುಮಾರ್​ ಅವರ ಗೆಟಪ್​ ನೋಡಿ  ವಿಕ್ಕಿ ಹಾಗೂ ಅಮಿತ್ ಸುಸ್ತಾಗುತ್ತಾರೆ. ಆಗ ಶಿವಣ್ಣ ಏನೋ ಸುಪಾರಿ ಕೊಟ್ರಂತೆ ಎಂದಾಗ ವಿಕ್ಕಿ ಇಲ್ಲ, ಅದು ತಿನ್ನೋ ಸುಪಾರಿ ಅಷ್ಟೇ ಎನ್ನುತ್ತಾರೆ, ಯಾರನ್ನೋ ಎತ್ತಾಕಿದ್ರಂತೆ ಎಂದಾಗ ಇಲ್ಲ, ನಮ್ಮ ಅಪಾರ್ಟ್​ಮೆಂಟ್​ನಲ್ಲಿ ಇಬ್ಬರು ಚಿಕ್ಕ ಮಕ್ಕಳು ಇದ್ದಾರೆ, ಅವರನ್ನು ಎತ್ತಿಕೊಂಡಿದ್ದೆವು ಅಷ್ಟೇ ಅಂತಾರೆ ಅಮಿತ್​. ಡಬಲ್​ ಮೀಟರ್​ ಅಂತೇನೋ ಹೇಳ್ತಿದ್ರಂತೆ ಎಂದಾಗ ವಿಕ್ಕಿ ಇಲ್ಲ, ನೈಟ್​ ಆಟೋ ಓಡಿಸಿದ್ವಿ. ಡಬಲ್​ ಮೀಟರ್​ ಹಾಕಿದ್ವಿ ಎನ್ನುತ್ತಾರೆ. ಯಾರಿಗೋ ಸ್ಕೆಚ್​ ಹಾಕಿದ್ರಂತೆ ಎಂದಾಗ ಚಿತ್ರ ಬಿಡಿಸಿದ್ದನ್ನು ತೋರಿಸಿ ಇದೇ ಅನ್ನುತ್ತಾರೆ.

GHOST: ಸಾಮಾನ್ಯವಾಗಿ ಯಾರ್​ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್​ ಪಂಚ್​
 
ಇನ್ನುಮುಂದೆ ತಾವು ಆ ರೀತಿ ಮಾಡಿಲ್ಲ ಎಂದು  ವಿವರಣೆ ನೀಡುತ್ತಾರೆ. ಆ ಸಮಯದಲ್ಲಿ ಶಿವರಾಜ್​ ಕುಮಾರ್​ ಎಚ್ಚರಿಕೆ ಕೊಟ್ಟು ಕಳುಹಿಸುತ್ತಾರೆ. ನಂತರ ನೀವು ಗ್ಯಾಂಗ್​ಸ್ಟರಾ ಎಂದು ಕೇಳಿದಾಗ ಅಲ್ಲ, ಅವ್ರು ನನ್ನನ್ನು ಓಜಿ ಎಂದು ಕರೆಯುತ್ತಾರೆ. ಅಂದ್ರೆ ಒರಿಜಿಯನಲ್​ ಗ್ಯಾಂಗ್​ಸ್ಟರ್​ ಎನ್ನುತ್ತಾರೆ. ಕೂಡಲೇ ಘೋಸ್ಟ್​ ಚಿತ್ರದ ಪೋಸ್ಟರ್​ ಬರುತ್ತದೆ. ಅಂದಹಾಗೆ ‘ಘೋಸ್ಟ್’ ಸಿನಿಮಾ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಶಿವರಾಜ್​ಕುಮಾರ್ ಅವರು ‘ಘೋಸ್ಟ್’ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಅನುಪಮ್ ಖೇರ್ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಿದ್ದಾರೆ.

ಇತ್ತೀಚೆಗೆ ಇದರ ಟ್ರೇಲರ್​ ಬಿಡುಗಡೆಯಾಗಿತ್ತು. ಎರಡು ಡಿಫರೆಂಟ್​ ಗೆಟಪ್​ನಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಈ ಟ್ರೇಲರ್​ ನೋಡಿ ಅಭಿಮಾನಿಗಳ ನಿರೀಕ್ಷೆ ಡಬಲ್​ ಆಗಿದೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುವಂತಿದೆ. ಅಕ್ಟೊಬರ್‌ 19 ರಂದು ಎಲ್ಲಡೆ ರಿಲೀಸ್ ಆಗ್ತಿರೋ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಸಿನಿಮಾ ಪ್ರಚಾರ ಕೂಡ ಜೋರಾಗಿಯೇ ಇದೆ.  ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳು, ಖಡಕ್​ ಡೈಲಾಗ್​ಗಳಿಂದಲೇ ತುಂಬಿರುವ ‘ಘೋಸ್ಟ್​’ ಟ್ರೇಲರ್​ (Ghost Movie Trailer) ಈಗ ವೈರಲ್​ ಆಗುತ್ತಿದೆ.  

ವಿವೇಕ್​ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್​ ವಾರ್​’ಗೆ ಆಸ್ಕರ್​ನಿಂದ ವಿಶೇಷ ಮನ್ನಣೆ

Follow Us:
Download App:
  • android
  • ios