Honey Rose: ಮದುವೆ ಯಾಕೆ, ರಿಲೇಷನ್​ ಓಕೆ ಎಂದು ಆಫರ್​ ಕೊಟ್ಟಿದ್ದಾರೆ ಸ್ನಿಗ್ಧ ಸುಂದರಿ

ಬಹುಭಾಷಾ ನಟಿ ಹನಿರೋಸ್​ ಸೌಂದರ್ಯಕ್ಕೆ ಹೆಸರುವಾಸಿ. ತಮ್ಮ ಮದುವೆ ಮತ್ತು ರಿಲೇಷನ್​ಷಿಪ್​ ಬಗ್ಗೆ ನಟಿ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅವರು?
 

Actress Honey Rose opens up about her marriage Not interested in getting married but likes to have a partner

ಮಲಯಾಳಂ ಬೆಡಗಿ ಹನಿರೋಸ್​ (Honey Rose)  ಬಹುಭಾಷಾ ತಾರೆ. ತನ್ನ ಸ್ನಿಗ್ಧ ಸೌಂದರ್ಯದಿಂದ ಎಂಥವರನ್ನೂ ಮರುಳು ಮಾಡುವ ನಟಿ  ತಮಿಳು, ತೆಲುಗು ಚಿತ್ರಗಳಲ್ಲಿ ಕೆಲಸ  ಮಾಡಿದ್ದಾರೆ.  14 ನೇ ವಯಸ್ಸಿನಲ್ಲಿಯೇ ಬಾಯ್ ಫ್ರೆಂಡ್ (-BoyFriend- 2005) ಜೊತೆಗೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದ ಈ ಸುಂದರಿ,  ತಮಿಳು ಚಲನಚಿತ್ರ ಮುದಲ್ ಕನವೆ (2007) ಮತ್ತು ತೆಲುಗು ಚಲನಚಿತ್ರ ಆಲಯಂ (2008) ನಲ್ಲಿ ನಟಿಸಿದರು. ಮಾಲಿವುಡ್‌ ಸಿನಿಮಾಗಳಿಗೆ ಸೀಮಿತಳಾಗಿದ್ದ ಚೆಲುವೆ ತೆಲುಗು ನಟ ಬಾಲಯ್ಯ ಅಭಿನಯದ ವೀರಸಿಂಹ ರೆಡ್ಡಿ ಸಿನಿಮಾದ ಮೂಲಕ ಸೌತ್‌ ಸಿನಿ ರಸಿಕರಿಗೆ ಪರಿಚಿತರಾದರು.  ಸೌಂಡ್ ಆಫ್ ಬೂಟ್ (2008), ಸಿಂಗಂ ಪುಲಿ (2011), ಉಪ್ಪುಕಂಡಂ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್ (2011), ಅಜಂತಾ (2012), ಹೋಟೆಲ್ ಕ್ಯಾಲಿಫೋರ್ನಿಯಾ (2013), ರಿಂಗ್ ಮಾಸ್ಟರ್ (2014), ಕುಂಬಸಾರಂ (2015), ಅವರೂಡೆ ರಾವುಕಲ್ (2017) ಅವರು ಕೆಲಸ ಮಾಡಿದ ಇತರ ಕೆಲವು ಚಿತ್ರಗಳು. ), ಚಾಲಕುಡಿಕ್ಕರನ್ ಚಂಗತಿ (2018), ಇಟ್ಟಿಮಣಿ: ಮೇಡ್ ಇನ್ ಚೀನಾ (2019), ಬಿಗ್ ಬ್ರದರ್ (2020), ಅಕ್ವೇರಿಯಂ (2022) ಮತ್ತು ವೀರ ಸಿಂಹ ರೆಡ್ಡಿ (2023)ಮುಂತಾದ ಚಿತ್ರಗಳಲ್ಲಿ ಈಕೆ ನಟಿಸಿದ್ದಾರೆ. 

ಈಕೆಯ ಚಿತ್ರಗಳು ಯಾವುದೇ ಪ್ಯಾನ್‌ ಇಂಡಿಯಾ (Pan India) ಸಿನಿಮಾ ಮಾಡಿಲ್ಲ ಅಂದ್ರೂ ಸಹ ಹನಿ ತನ್ನ ಸೌಂದರ್ಯದ ಮೂಲಕ ಚಿರಪರಿಚಿತರಾಗಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಈಕೆ ಫೋಟೋ ಶೇರ್​ ಮಾಡಿದರೆ ಕ್ಷಣಾರ್ಧದಲ್ಲಿ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತದೆ.  ಕನ್ನಡದಲ್ಲಿ ಸಿನಿಮಾ ಮಾಡಿಲ್ಲ ಅಂದ್ರೂ ಸಹ ಈಕೆ ಸೋಷಿಯಲ್‌ ಮೀಡಿಯಾ ಮೂಲಕ ನೆಟ್ಟಿಗರಿಗೆ ಚಿರಪರಿಚಿತ.  ಹನಿರೋಸ್ ಮಾಲಿವುಡ್‌ನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಆಕೆಗೆ ಸಿಕ್ಕಷ್ಟು ಕ್ರೇಜ್ ಬೇರೆ ಯಾವ ಚಿತ್ರದಲ್ಲೂ ಸಿಕ್ಕಿರಲಿಲ್ಲ.  

ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!

ಇಂತಿಪ್ಪ ನಟಿ ಮದುವೆಯಾಗುತ್ತೇನೆ ಎಂದರೆ ಸಾಕು... ಸಹಸ್ರಾರು ಯುವಕರು ತಾಮುಂದು, ನಾಮುಂದು ಎಂದು ಬರುತ್ತಾರೆ. ಆದರೆ ಇದೀಗ ನಟಿ (Actress) ತಮ್ಮ  ಮದುವೆ ಮತ್ತು ಕೌಟುಂಬಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನೆಂದರೆ, ರೋಸ್​ಗೆ  ಮದುವೆಯಾಗಲು ಆಸಕ್ತಿಯೇ ಇಲ್ಲವಂತೆ. ಆದರೆ ಜೀವನದಲ್ಲಿ ಪಾರ್ಟನರ್​ಬೇಕಂತೆ!  ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ (Interview) ಹನಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಹೌದು! ನಟಿಗೆ ಮದುವೆಯಾಗುವುದು ಬೇಡ, ಆದರೆ ರಿಲೇಷನ್​ನಲ್ಲಿ ಇರೋ ಆಸೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಮದುವೆಯಾಗುವುದಕ್ಕೆ ನನಗೆ ಸಮಸ್ಯೆಯಾಗಿರುವುದರಿಂದ ಬೇರೆಯವರ ಮದುವೆಗೆ ಹೋಗುವುದು ಇಷ್ಟವಿಲ್ಲ ಎನ್ನುತ್ತಾರೆ ಹನಿ ರೋಸ್. ಮದುವೆಗೆ ಹೋದರೆ ಎಲ್ಲರ ಕಣ್ಣು ತಮ್ಮ ಮೇಲೆ ಬಿದ್ದು ಮದುವೆಯ ಆಫರ್​ ಬಂದರೆ ಕಷ್ಟವಂತೆ. ಅದಕ್ಕಾಗಿ ಯಾರ ಮದುವೆಗೂ ಹೋಗುವುದಿಲ್ಲ ಎಂದಿದ್ದಾರೆ. 

ಇದೇ ವೇಳೆ ಮದುವೆಯ ಬಗ್ಗೂ ಮಾತನಾಡಿದ್ದಾರೆ ನಟಿ. ಮೋಜಿಗಾಗಿ ಯಾರೂ ಮದುವೆಯಾಗುವುದಿಲ್ಲ. ತಮ್ಮ ಬಳಿ ಸಾಕಷ್ಟು ಹಣವಿದೆ ಎಂದು ತೋರಿಸಲು ಮಾತ್ರ ಮದುವೆ (Marriage) ಮಾಡಲಾಗುತ್ತದೆ ಎನ್ನುವುದು ಇವರ ಮಾತು. ಕುಟುಂಬದ ಯಾರೊಂದಿಗೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಇದುವರೆಗೂ ಹನಿ ಹೇಳಿಲ್ಲವಂತೆ. ಆದರೆ ಹೊರಗಿನವರಿಗೆ ಮಾತ್ರ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು  ಹೇಳಿರುವುದಾಗಿ ರೋಸ್​ ಹೇಳಿದ್ದಾರೆ.  ನನ್ನ ಪ್ರೀತಿಯನ್ನು ಅನೇಕರಿಗೆ ಹೇಳಿದ್ದೇನೆ. ಶಾಲೆಯಲ್ಲಿ ಓದುತ್ತಿದ್ದಾಗ ಇಂಥ ಹಲವಾರು ಘಟನೆಗಳು ನಡೆದಿವೆ ಎಂದು ನಗುತ್ತಾರೆ  ರೋಸ್​.  

Twinkle Khanna: ಹೊಟ್ಟೆಯೊಳಗೆ ಫುಲ್​ ಗ್ಯಾಸ್​ ಇದ್ದಾಗ್ಲೇ ಶಾರುಖ್​ ಎತ್ತಿಕೊಂಡು ಬಿಟ್ರಪ್ಪೋ...
 

Latest Videos
Follow Us:
Download App:
  • android
  • ios