Asianet Suvarna News Asianet Suvarna News

ವರ್ಲ್ಡ್ ಕಪ್ ಫೈನಲ್ ನೋಡಲು ಡ್ಯಾಡಿ ಜತೆ ಹೊರಟ ನಟಿ ದೀಪಿಕಾ ಪಡುಕೋಣೆ; ಕ್ಯಾಮೆರಾ ಕಡೆ ತಿರುಗಿ ಮಾಡಿದ್ದೇನು?

ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ ಪ್ರಕಾಶ್ ಪಡುಕೊಣೆ ಜತೆ ಗುಜರಾತ್‌, ಅಹಮ್ಮದಾಬಾದ್‌ನಲ್ಲಿರುವ ಮೋದಿ ಸ್ಟೇಡಿಯಂಗೆ ಹೊರಟಿದ್ದು, ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜೀನ್ಸ್ ಪ್ಯಾಂಡ್ ಹಾಗೂ ಕ್ರಿಕೆಟ್ ಟೀಶರ್ಟ್ ಧರಿಸಿ, ಪಕ್ಕಾ ಫ್ಯಾನ್ಸ್‌ ಲುಕ್‌ನಲ್ಲಿ ನಟಿ ದೀಪಿಕಾ ಹೊರಟಿದ್ದಾರೆ. 

Actress Deepika Padukone going for Final Cricket match with father Prakash Padukone srb
Author
First Published Nov 19, 2023, 11:52 AM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದು (19 ನವೆಂಬರ್ 2023) ಭಾರತದ ಅಹಮ್ಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಇಂದು ನಡೆಯಲಿರುವ ಫೈನಲ್‌ ಮ್ಯಾಚ್ ಭಾರಿ ನಿರೀಕ್ಷೆಗೆ ಕಾರಣವಾಗಿದೆ. ಭಾರತ ಗೆಲ್ಲಲಿ ಎಂದು ಭಾರತೀಯರು ಬಯಸುತ್ತಿರುವುದು ಮಾತ್ರವಲ್ಲ, ಗೆಲುವನ್ನು ಕೋರಿ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಈಗಾಗಲೇ ಬಹಳಷ್ಟು ಜನರು ಸ್ಟೇಡಿಯಂನತ್ತ ಹೊರಟಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ತಂದೆ ಪ್ರಕಾಶ್ ಪಡುಕೋಣೆ ಜತೆ ಕ್ರಿಕೆಟ್ ಫೈನಲ್ ನೋಡಲು ಸ್ಟೇಡಿಯಂಗೆ ಹೊರಟಿದ್ದಾರೆ. 

ನಾನು ಸಾಯುತ್ತೇನೆ, ಜೀವಂತವಾಗಿ ಇರಲ್ಲ; ಮಗುವಿನ ತಾಯಿ ಆಲಿಯಾ ಭಟ್ ಮಾತಿಗೆ ಬಾಲಿವುಡ್ ಶಾಕ್!

ಹೌದು, ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ ಪ್ರಕಾಶ್ ಪಡುಕೊಣೆ ಜತೆ ಗುಜರಾತ್‌, ಅಹಮ್ಮದಾಬಾದ್‌ನಲ್ಲಿರುವ ಮೋದಿ ಸ್ಟೇಡಿಯಂಗೆ ಹೊರಟಿದ್ದು, ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜೀನ್ಸ್ ಪ್ಯಾಂಡ್ ಹಾಗೂ ಕ್ರಿಕೆಟ್ ಟೀಶರ್ಟ್ ಧರಿಸಿ, ಪಕ್ಕಾ ಫ್ಯಾನ್ಸ್‌ ಲುಕ್‌ನಲ್ಲಿ ನಟಿ ದೀಪಿಕಾ ಹೊರಟಿದ್ದಾರೆ. ಬಾಲಿವುಡ್‌ ನಟಿ ದೀಪಿಕಾರನ್ನು ಕೂಡ ಈ ಮೂಲಕ ಕ್ರಿಕೆಟ್ ಅಭಿಮಾನಗಳು ದರ್ಶನ ಪಡೆಯಲಿದ್ದಾರೆ ಎನ್ನಬಹುದು. ಮೋದಿ ಸ್ಟೇಡಿಯಂ ಬಳಿ ಈಗಾಗಲೇ ಕ್ರಿಕೆಟ್ ಪ್ರೇಮಿಗಳು ಕಿಕ್ಕಿರಿದು ಸೇರಿದ್ದು, ಇಡೀ ಭಾರತದ ತುಂಬಾ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಜ್ವರ ಹರಡಿದೆ. 

ಪಾರ್ಕ್ ಮಾಡಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ; ಸೌತ್ ಸಿನಿರಂಗಕ್ಕೆ ಬಿಗ್ ಶಾಕ್!

ನಟ ರಣವೀರ್ ಕಪೂರ್ ದೀಪಿಕಾ ಜತೆಯಲ್ಲಿ ಹೊರಟಿಲ್ಲ ಎಂಬುದನ್ನು ಗಮನಸಿಬಹುದು. ಆದರೆ, ಅವರು ಇಂದು ಕ್ರಿಕೆಟ್ ಮ್ಯಾಚ್ ನೋಡುತ್ತಿಲ್ಲ ಎಂದು ತಿಳಿಯಬೇಕಿಲ್ಲ. ಕಾರಣ, ಅವರು ಈಗಾಗಲೇ ಅಲ್ಲಿರಬಹುದು, ಅಥವಾ ಆ ಬಳಿಕ ತೆರಳಿರಬಹುದು. ಬೇರೆ ಕಾರ್ಯಕ್ರಮದಲ್ಲಿ ಅಥವಾ ಸಿನಿಮಾ ಶೂಟಿಂಗ್ ಶೆಡ್ಯೂಲ್‌ನಲ್ಲಿ ಬ್ಯುಸಿ ಆಗಿರಬಹುದು. ಆದರೆ, ದೀಪಿಕಾ ಹಾಗೂ ಅಪ್ಪ ಪ್ರಕಾಶ್ ಪಡುಕೋಣೆ ಒಟ್ಟಿಗೇ ಹೊರಟಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ, ಜತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. 

 

 

Follow Us:
Download App:
  • android
  • ios