Asianet Suvarna News Asianet Suvarna News

ಪಾರ್ಕ್ ಮಾಡಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ; ಸೌತ್ ಸಿನಿರಂಗಕ್ಕೆ ಬಿಗ್ ಶಾಕ್!

ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ನಟ ವಿನೋದ್ ಥಾಮಸ್ ಹೀಗೆ ದುರಂತ ಅಂತ್ಯ ಕಂಡಿದ್ದು ಮಲಯಾಳಂ ಚಿತ್ರಪ್ರೇಕ್ಷಕರಿಗೆ ಬರಸಿಡಲು ಬಡಿದಂತಾಗಿದೆ ಎನ್ನಲಾಗಿದೆ. ಬಹಳಷ್ಟು ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಅಲ್ಲಿನ ಪ್ರೇಕ್ಷಕರ ಮನೆಮನ ತಲುಪಿದ್ದ ನಟ ಹೀಗೆ ಕಾರಿನೊಳಗೆ ಶವವಾಗಿ ಮಲಗಿದ್ದಾರೆ.

Malayalam actor Vinod Thomas finds dead inside a parked car near Pampady in Kottayam srb
Author
First Published Nov 19, 2023, 10:57 AM IST

ಮಲೆಯಾಳಂ ಚಿತ್ರರಂಗದ ಜನಪ್ರಿಯ ನಟ ವಿನೋದ್ ಥಾಮ್ಸ್  ಶವ ಕಾರಿನಲ್ಲಿ ಪತ್ತೆಯಾಗಿದೆ. ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೊಟೆಲ್‌ ಬಳಿ ನಿಲ್ಲಿಸಿದ್ದ ಕಾರಿನೊಳಗೆ  ಜನಪ್ರಿಯ ನಟ ವಿನೋದ್ ಥಾಮಸ್‌ ಶವ ಪತ್ತೆಯಾಗಿದ್ದು, ಜನರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ವ್ಯಕ್ತಿಯೊಬ್ಬರು ಬಹಳ ಕಾಲದಿಂದ ಕಾರೊಂದು ಹೊಟೆಲ್ ಬಳಿ ನಿಂತಿದ್ದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 

ಪೊಲೀಸರು ಬಂದು ನೋಡಲಾಗಿ, ವ್ಯಕ್ತಿಯೊಬ್ಬರು ಕಾರಿನೊಳಗೆ ಮಲಗಿದ್ದನ್ನು ಗಮನಿಸಿದ್ದಾರೆ. ತಕ್ಷಣ ಕಾರಿನ ಡೋರ್ ಒಡೆದು ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಲ್ಲಿ ವೈದ್ಯರು ಆ ವ್ಯಕ್ತಿ ಸತ್ತಿದ್ದಾರೆ ಎಂದು ಘೋಷಿಸಿದ್ದಾರೆ ಎನ್ನಲಾಗಿದೆ. ಅವರದು ಕೊಲೆಯೋ ಆತ್ಮಹತ್ಯೆಯೋ ಎಂಬ ಮಾಹಿತಿ ಪೊಲೀಸ್ ತನಿಖೆ ಬಳಿಕ ಹೊರಬರಬೇಕಿದೆ. 

ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ನಟ ವಿನೋದ್ ಥಾಮಸ್ ಹೀಗೆ ದುರಂತ ಅಂತ್ಯ ಕಂಡಿದ್ದು ಮಲಯಾಳಂ ಚಿತ್ರಪ್ರೇಕ್ಷಕರಿಗೆ ಬರಸಿಡಲು ಬಡಿದಂತಾಗಿದೆ ಎನ್ನಲಾಗಿದೆ. ಬಹಳಷ್ಟು ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಅಲ್ಲಿನ ಪ್ರೇಕ್ಷಕರ ಮನೆಮನ ತಲುಪಿದ್ದ ನಟ ಹೀಗೆ ಕಾರಿನೊಳಗೆ ಶವವಾಗಿ ಮಲಗಿದ್ದಾರೆ ಎಂದರೆ ಪ್ರೇಕ್ಷಕರಿಗೆ ಶಾಕ್ ಆಗುವುದು ಸಹಜ. ಇದ್ದಕ್ಕಿಂದಂತೆ ಬಂದ ಇಂಥ ಶಾಕ್ ಸುದ್ದಿ ಕೇಳಿ ಮಲಯಾಳಂ ಚಿತ್ರಪ್ರೇಮಿಗಳು ಅವರ ಶವವನ್ನು ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ ಎನ್ನಲಾಗಿದೆ.

ಅಪ್ಪನ ನಂಬರ್ ಬ್ಲಾಕ್ ಮಾಡಿದ್ದ ಡ್ರೋನ್ ಪ್ರತಾಪ್, ಈಗ ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತರು!

ಅಯ್ಯಪ್ಪನುಮ್ ಕೊಶ್ಯುಮ್, ನಾಥೋಲಿ ಒರು ಚೆರಿಯ ಮೀನಲ್ಲಾ, ಒರು ಮುರೈ ವಂತ್ ಪಾಠಯಾ, ಹ್ಯಾಪಿ ವೆಡ್ಡಿಂಗ್ ಮತ್ತು ಜೂನ್ ಮುಂತಾದ ಮಲಯಾಳಂ ಸಿನಿಮಾಗಳಲ್ಲಿ ನಟ ವಿನೋದ್ ಥಾಮಸ್ ನಟಿಸಿದ್ದಾರೆ. ತಾವು ನಟಿಸಿದ್ದ ಚಿತ್ರಗಳಲ್ಲಿ ಅವರು ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ. ಈಗಲೂ ಕೂಡ ಸಾಕಷ್ಟು ಬೇಡಿಕೆ ಉಳಿಸಿಕೊಂಡಿದ್ದ ಈ ನಟ ಈಗ ಹೀಗೆ ಅನಾಥರಂತೆ ದುರಂತ ಅಂತ್ಯ ಕಂಡಿದ್ದಾರೆ. 

ಬಡ್ಡಿ ಸಮೇತ ವಿನಯ್‌ಗೆ ವಾಪಸ್ ಬರುತ್ತೆ; ಕಾರ್ತಿಕ್ ಕ್ಟಾಪ್ಟನ್‌ ಆದ್ಮೇಲೆ ಸಂಗೀತಾ ಮೈಂಡ್ ಗೇಮ್ ಶುರುನಾ?

ಒಟ್ಟಿನಲ್ಲಿಮ ನಟ ವಿನೋದ್ ಥಾಮಸ್ ನಿಧನದ ಮೂಲಕ ಮಲಯಾಳಂ ಚಿತ್ರರಂಗ ಒಬ್ಬ ಶ್ರೇಷ್ಠ ನಟನನ್ನು ಕಳೆದುಕೊಂಡಂತಾಗಿದ್ದು, ಅಲ್ಲಿನ ಚಿತ್ರಪ್ರೇಮಿಗಳು ಅವರ ಧಾರುಣ ಸಾವಿಗೆ ಮರುಗುತ್ತಿದ್ದಾರೆ ಎನ್ನಲಾಗಿದೆ. ಮಧ್ಯ ವಯಸ್ಸಿನ ನಟ ಹೀಗೆ ಇದ್ದಕ್ಕಿದ್ದಂತೆ ಈ ಪ್ರಪಂಚದಿಂದ ದೂರವಾಗಿದ್ದು, ಅವರ ಕುಟುಂಬ, ಆಪ್ತರು, ಹಿತೈಷಿಗಳು ಸೇರಿದಂತೆ ಚಿತ್ರಪ್ರೇಮಿಗಳಿಗೆ ತುಂಬಲಾಗದ ನಷ್ಟವಾಗಿ ಪರಿಣಮಿಸಿದೆ. ದೇವರು ವಿನೋದ್ ಥಾಮಸ್ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಮಲಯಾಳಂ ಚಿತ್ರರಂಗದ ಕೋರಿಕೆ ಸಲ್ಲಿಸಿದೆ. 

Follow Us:
Download App:
  • android
  • ios