ಆನ್‌ಸ್ಕ್ರೀನ್ ಫಸ್ಟ್ ಟೈಂ ಚುಂಬಿಸಿದ ನಟಿ ಇವರೇ, ಕಿಸ್ ಮಾಡಿದ ನಂತರ ಡೆಟಾಲ್‌ನಿಂದ ಬಾಯಿ ತೊಳೆದ್ರಂತೆ!
ಸಿನಿಮಾ, ಸೀರಿಯಲ್‌ನಲ್ಲಿ ಇವತ್ತು ರೋಮ್ಯಾಂಟಿಕ್ ಸೀನ್, ಕಿಸ್ಸಿಂಗ್ ಸೀನ್ ತುಂಬಾ ಸಾಮಾನ್ಯವಾಗಿದೆ. ಆದರೆ ಮೊದಲು ಹೀಗಿರಲ್ಲಿಲ್ಲ. ಕಿಸ್ಸಿಂಗ್ ಸೀನ್‌ಗಳನ್ನು ಮಾಡಲು ಎಲ್ಲಾ ನಟಿಯರು ಹಿಂಜರಿಯುತ್ತಿದ್ದರು. ಹಾಗಿದ್ರೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆನ್‌ಸ್ಕ್ರೀನ್‌ನಲ್ಲಿ ಕಿಸ್ ಮಾಡಿದ ನಟಿ ಯಾರು?

ಸಿನಿಮಾ, ಸೀರಿಯಲ್‌ನಲ್ಲಿ ಇವತ್ತು ರೋಮ್ಯಾಂಟಿಕ್ ಸೀನ್, ಕಿಸ್ಸಿಂಗ್ ಸೀನ್ ತುಂಬಾ ಸಾಮಾನ್ಯವಾಗಿದೆ. ಇಂಟಿಮೇಟ್ ಸೀನ್ ಅಥವಾ ಚುಂಬನದ ಚಿತ್ರೀಕರಣ ಮಾಮೂಲಿಯಾಗಿದೆ. ಆದರೆ ಮೊದಲು ಹೀಗಿರಲ್ಲಿಲ್ಲ. ನಟನೆ ಎಂಬುದನ್ನೇ ದೊಡ್ಡ ಅಪರಾಧವೆಂಬಂತೆ ಪರಿಗಣಿಸಲಾಗುತ್ತಿತ್ತು. ಪರಸ್ಪರ ತಬ್ಬಿಕೊಳ್ಳುವುದು, ಕಿಸ್ಸಿಂಗ್, ರೋಮ್ಯಾಂಟಿಕ್ ಸೀನ್‌ಗಳನ್ನು ಮಾಡಲು ಎಲ್ಲಾ ನಟಿಯರು ಹಿಂಜರಿಯುತ್ತಿದ್ದರು. ಅಂಥಾ ಸೀನ್‌ನ ಶೂಟಿಂಗ್ ಮಾಡಲು ಆರಾಮದಾಯಕವಲ್ಲದ ಹಲವಾರು ಕಲಾವಿದರಿದ್ದರು. ಹಾಗಿದ್ರೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆನ್‌ಸ್ಕ್ರೀನ್‌ನಲ್ಲಿ ಕಿಸ್ ಮಾಡಿದ ನಟಿ ಯಾರು?
ತೆರೆಯ ಮೇಲೆ ಮೊತ್ತ ಮೊದಲ ಬಾರಿ ಚುಂಬಿಸಿದ (Kiss) ನಟಿ ಮತ್ಯಾರೂ ಅಲ್ಲ. ಆಕೆಯ ಹೆಸರು ನೀನಾ ಗುಪ್ತಾ. ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಚಲನಚಿತ್ರಗಳಿಂದ ದೂರದರ್ಶನದವರೆಗೆ, ನೀನಾ ಪ್ರಭಾವಶಾಲಿ ಟಾಪ್ ನಟರೊಂದಿಗೆ ನಟಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಗಾಂಧಿ, ಜಾನೇ ಭಿ ದೋ ಯಾರೋನ್, ರಿಹಾಯೀ, ಮಂಡಿ, ಮತ್ತು ಸೂರಜ್ ಕಾ ಸತ್ವ ಘೋಡಾದಂತಹ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ ನಂತರ, ನೀನಾ ಟಿವಿ ಸೀರಿಯಲ್‌ಗಳಲ್ಲೂ ಅಭಿನಯಿಸಿದರು. ಖಂಡಾನ್, ಯಾತ್ರಾ, ಸಾನ್ಸ್, ಮತ್ತು ಕಾಮ್ಜೋರ್ ಕಡಿ ಕೌನ್, ಸಿಸ್ಕಿಯಿಂದ, ನೀನಾ ಕಿರುತೆರೆಯಲ್ಲಿ ಅಪಾರ ಅಭಿಮಾನಿ (Fans)ಗಳನ್ನು ಗಳಿಸಿದರು.
ಬೇರೆಯವ್ರ ಜೊತೆ ಲಿಪ್ಲಾಕ್ ಸೀನ್ಗೆ ಹೇಮಾ ಮಾಲಿನಿ ರೆಡಿ ಇದ್ದಾರಾ? ನಟಿ ಹೇಳಿದ್ದೇನು?
ತೆರೆಯ ಮೇಲೆ ಮುತ್ತು ಕೊಟ್ಟ ಮೊದಲ ನಟಿ
ಇತ್ತೀಚಿನ ಸಂದರ್ಶನವೊಂದರಲ್ಲಿ ನೀನಾ, ನಾನು ನಟನೆಯಲ್ಲಿ ಮುತ್ತು ಕೊಟ್ಟ ಮೊದಲ ನಟಿ ಎಂದು ಹೇಳಿಕೊಂಡರು. ಚಿತ್ರೀಕರಣದ ಹಿಂದಿನ ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದಾಗಿ ತಿಳಿಸಿದರು. ಲಸ್ಟ್ ಸ್ಟೋರೀಸ್ 2 ಅನ್ನು ಪ್ರಚಾರ ಮಾಡುವಾಗ, ನೀನಾ ಗುಪ್ತಾ ಅವರು ಜೀ ಟಿವಿಯ ದಿಲ್ಲಗಿಯಲ್ಲಿ ಸಹ-ನಟ ದಿಲೀಪ್ ಧವನ್ ಅವರೊಂದಿಗೆ ಚುಂಬನದ ದೃಶ್ಯವನ್ನು (Kissing scene) ಚಿತ್ರೀಕರಿಸಿದ ಸಂದರ್ಭವನ್ನು ನೆನಪಿಸಿಕೊಂಡರು.
ಬಾಲಿವುಡ್ ಬಬಲ್ ಜೊತೆ ಮಾತನಾಡುವಾಗ ಮಾತನಾಡಿದ ನೀನಾ ಗುಪ್ತಾ, 'ಪ್ರೀತಿಸದ ಯಾರನ್ನಾದರೂ ಚುಂಬಿಸುವುದು ಕೆಟ್ಟ ಅನುಭವವಾಗಿದೆ' ಎಂದು ಹೇಳಿದರು. 'ಇದು ಭಾರತೀಯ ಟಿವಿಯಲ್ಲಿ ಮೊಟ್ಟಮೊದಲ ಲಿಪ್-ಟು-ಲಿಪ್ ಚುಂಬನದ ದೃಶ್ಯವನ್ನು ಹೊಂದಿತ್ತು. ನಾನು ಹೇಗೆ ಚುಂಬಿಸುತ್ತೇನೆ ಎಂದು ಯೋಚಿಸುತ್ತಾ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ' ಎಂದು ನೀನಾ ಗುಪ್ತಾ ತಿಳಿಸಿದ್ದಾರೆ. 'ನಾವಿಬ್ಬರು ಸ್ನೇಹಿತರಾಗಿದ್ದೆವು. ಆದರೂ ನನಗೆ ಚುಂಬಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಏಕೆಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಸಿದ್ಧವಾಗಿರಲ್ಲಿಲ್ಲ. ನಾನು ತುಂಬಾ ಉದ್ವಿಗ್ನವಾಗಿದ್ದೆ. ಆದರೂ ಅದನ್ನು ಮಾಡಬೇಕೆಂದು ನನಗೆ ಅರ್ಥವಾಯಿತು' ಎಂದು ನೀನಾ ಹೇಳಿದ್ದಾರೆ.
ತೆರೆ ಮೇಲೆ ಖುಲ್ಲಂ ಖುಲ್ಲಾ ಕಿಸ್ ಮಾಡಿ ಪಶ್ಚಾತಾಪ ಪಟ್ಟ ಸೆಲೆಬ್ರಿಟಿಗಳಿವರು
ಡೆಟಾಲ್‌ನಿಂದ ಬಾಯಿ ತೊಳೆದುಕೊಂಡ ನೀನಾ ಗುಪ್ತಾ
ಬಹಳ ಕಷ್ಟಪಟ್ಟು ಕಿಸ್ಸಿಂಗ್ ಸೀನ್‌ನಲ್ಲಿ ಭಾಗಿಯಾದ ನಂತರ ಡೆಟಾಲ್ ನಿಂದ ಬಾಯಿ ತೊಳೆದಿದ್ದಾಗಿ ನೀನಾ ಗುಪ್ತಾ ತಿಳಿಸಿದರು. 'ಕಿಸ್ಸಿಂಗ್ ಸೀನ್ ಮುಗಿದ ತಕ್ಷಣ ನಾನು ಡೆಟಾಲ್‌ನಿಂದ ನನ್ನ ಬಾಯಿಯನ್ನು ತೊಳೆದುಕೊಂಡೆ. ನನಗೆ ಗೊತ್ತಿಲ್ಲದ, ನಾನು ಪ್ರೀತಿಸದ (Love) ಯಾರನ್ನಾದರೂ ಚುಂಬಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತು' ಎಂದು ನೀನಾ ಗುಪ್ತಾ ಹೇಳಿದ್ದಾರೆ. ದೃಶ್ಯವನ್ನು ಪೂರ್ಣಗೊಳಿಸಲು ನೀನಾ ತುಂಬಾ ಪ್ರಯತ್ನಪಟ್ಟರು. ಆದರೆ ಸೀನ್ ಪರ್ಫೆಕ್ಟ್ ಆಗಿ ಬಂದರೂ ಇದನ್ನು ಕೊನೆಗೆ ಕಟ್ ಮಾಡಲಾಯಿತು. ಇದು ಕುಟುಂಬ ಪ್ರೇಕ್ಷಕರಿಗೆ ಸೂಕ್ತವಲ್ಲದ ಕಾರಣ ಕಿಸ್ಸಿಂಗ್ ಸೀನ್ ಕಟ್ ಮಾಡಬೇಕಾಯಿತು ಎಂದು ನಿರ್ದೇಶಕರು ತಿಳಿಸಿದರು.
ಆದರೂ ನೀನಾ ಗುಪ್ತಾರ ಈ ಕಿಸ್ಸಿಂಗ್ ಸೀನ್‌ನ್ನು ಭಾರತೀಯ ದೂರದರ್ಶನದ 'ಮೊದಲ ಚುಂಬನದ ದೃಶ್ಯ' ಎಂದು ಪ್ರಚಾರ ಮಾಡಲಾಯಿತು. ಆ ನಂತರ ನೀನಾ ಹಲವಾರು ಸಿನಿಮಾಗಳಲ್ಲಿ ಮತ್ತ ವೆಬ್ ಸಿರೀಸ್‌ಗಳಲ್ಲಿ ನಟಿಸಿದ್ದಾರೆ.