ಇತ್ತೀಚೆಗೆ ಕನ್ನಡ ನಟಿಯೊಬ್ಬರು ಯೂಟ್ಯೂಬರ್ ಒಬ್ಬ ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಮೂರು ದಶಕಗಳ ಹಿಂದೆ ಪತ್ರಕರ್ತೆಯೊಬ್ಬರ ಪ್ರಶ್ನೆಗೆ  ಈ ಜನಪ್ರಿಯ ನಟಿ ಚಿತ್ರರಂಗವನ್ನೇ ತೊರೆದರಂತೆ. ಆಕೆ ಯಾರು? ಆ ಪತ್ರಕರ್ತೆ ಕೇಳಿದ ಪ್ರಶ್ನೆಯಾದೂ ಏನು?

ಅದು ತೊಂಭತ್ತರ ದಶಕ. ಬಾಲಿವುಡ್‌ನಲ್ಲಿ ಖಾನ್‌ಗಳದೇ ಜಮಾನ. ಒಂದಾದ ಮೇಲೊಂದರಂತೆ ಸೂಪರ್‌ ಹಿಟ್‌ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳು ಜನರ ಮನ ಗೆಲ್ಲುತ್ತಲೇ ಹೋದವು. ಇದರಲ್ಲಿ ಸಲ್ಮಾನ್ ಖಾನ್ ಸಿನಿಮಾಗಳಂತೂ ಭಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದವು. ಅವರಿಗೆ ದೊಡ್ಡ ಫ್ಯಾನ್‌ ಬಳಗ ಸೃಷ್ಟಿಯಾಯ್ತು, ಇದೆಲ್ಲ ಒಂದು ಕಡೆ ಆದರೆ ಅವರ ಅಫೇರ್‌ಗಳದ್ದೇ ಬೇರೆ ಕಥೆ. ಅದರಲ್ಲೂ ತೊಂಬತ್ತರ ದಶಕದ ಕೊನೆಯ ವೇಳೆ ಎಲ್ಲಿ ನೋಡಿದ್ರೂ ಸಲ್ಮಾನ್ ಖಾನ್, ಐಶ್ವರ್ಯಾ ರೈ ರಿಲೇಶನ್‌ಶಿಪ್‌ನದೇ ಮಾತು. ಅಷ್ಟೇ ಅಲ್ಲ, ಅಷ್ಟರಲ್ಲಾಗಲೇ ಸಲ್ಮಾನ್ ಖಾನ್ ಬಗ್ಗೆ ಇನ್ನೊಂದು ಮಾತೂ ಇತ್ತು. ಅವರ ಜೊತೆ ಸಿನಿಮಾದಲ್ಲಿ ಯಾರು ಹೀರೋಯಿನ್‌ ಆಗ್ತಾರೋ ಅವರೆಲ್ಲ ಸಲ್ಮಾನ್ ಜೊತೆಗೆ ರಿಲೇಶನ್‌ಶಿಪ್ ಇಟ್ಟುಕೊಂಡಿದ್ದಾರೆ ಅನ್ನೋ ರೂಮರ್. ಇದನ್ನು ಜರ್ನಲಿಸ್ಟ್ ಗಳೂ ಸೇರಿ ಹೆಚ್ಚಿನವರು ನಿಜವೆಂದೇ ನಂಬಿದ್ದರು. ಆ ಬಗ್ಗೆ ಬರೆದೂ ಇದ್ದರು.

ಬಾಲಿವುಡ್ ರಾಮ್‌ಕಾಮ್‌ ಸಿನಿಮಾಗಳಲ್ಲಿ ಎವರ್ ಗ್ರೀನ್ ಸಿನಿಮಾ ಅನಿಸಿಕೊಂಡಿರೋದು 'ಮೈನೆ ಪ್ಯಾರ್ ಕಿಯಾ'. ಈ ಸಿನಿಮಾ ಇಂದಿಗೂ ಪ್ರೇಮಿಗಳ ಫೇವರಿಟ್. ಸಲ್ಮಾನ್ ಖಾನ್ ಹಾಗೂ ಭಾಗ್ಯಶ್ರೀ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಆ ಸಿನಿಮಾ ಎಷ್ಟು ಹಿಟ್ ಆಯ್ತೋ.. ಭಾಗ್ಯಶ್ರೀ ಹಾಗೂ ಸಲ್ಮಾನ್ ಖಾನ್ ಜೋಡಿನೂ ಅಷ್ಟೇ ಹಿಟ್ ಆಗಿತ್ತು. ಸಲ್ಮಾನ್ ಖಾನ್ ಹಾಗೂ ಭಾಗ್ಯಶ್ರೀ ಇಬ್ಬರೂ ಬಾಲಿವುಡ್‌ನ ಬೆಸ್ಟ್ ಅಂತ ಮಾತಾಡಿಕೊಳ್ಳುತ್ತಿದ್ದರು. ಇಬ್ಬರು ಸೇರಿ ಇನ್ನೊಂದಿಷ್ಟು ಸಿನಿಮಾ ಮಾಡಬಹುದು ಎಂದು ನಿರೀಕ್ಷೆ ಮಾಡುತ್ತಿದ್ದರು. ಆದರೆ, ಭಾಗ್ಯಶ್ರೀ ವಿವಾಹವಾದರು. ಮದುವೆಯ ಬಳಿಕ ಬಾಲಿವುಡ್‌ನಿಂದ ಕೊಂಚ ದೂರವಾದರು. ಮಗುವಾದ ಮೇಲಂತೂ ಅತ್ತ ತಲೆ ಹಾಕಿಯೂ ಮಲಗಲಿಲ್ಲ. ಅದಕ್ಕೆ ಏನು ಕಾರಣ ಅನ್ನೋದನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್‌ನನ್ನು ಹಾಡಿ ಹೊಗಳಿದ ಸುಧಾ ಮೂರ್ತಿ; 'ವಾವ್' ಎಂದ ಕಪಿಲ್ ಶರ್ಮಾ

ನಟಿ ಭಾಗ್ಯಶ್ರೀ 1990ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಿಮಾಲಯ್ ದಸ್ಸಾನಿ ಎಂಬುವವರನ್ನು ಮದುವೆಯಾಗಿದ್ದರು(Marriage). ವಿವಾಹದ ಬಳಿಕ ಅವರು ಸಿನಿಮಾಗಳಲ್ಲಿ ನಟಿಸೋದು ಅಪರೂಪವಾಯ್ತು. ಬಳಿಕ ಭಾಗ್ಯಶ್ರೀ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಭಾಗ್ಯಶ್ರೀ ಆಸ್ಪತ್ರೆಯಲ್ಲಿರುವಾಗಲೇ ಅಂದಿನ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆ ಹೇಗೆ ಮುಜುಗರಕ್ಕೀಡು ಮಾಡಿದ್ದರು ಅನ್ನೋದನ್ನು ರಿವೀಲ್(Reveal) ಮಾಡಿದ್ದಾರೆ. ಸಿದ್ದಾರ್ಥ್ ಕನ್ನನ್ ಎಂಬುವವರೊಂದಿನ ಸಂದರ್ಶನದಲ್ಲಿ(Interview) ಮಾತಾಡುವಾಗ, ಭಾಗಶ್ರೀ ತನಗಾದ ಈ ಅವಮಾನದ ಬಗ್ಗೆ ಮಾತಾಡಿದ್ದಾರೆ. 'ಆಗ ತಾನೇ ನಾನು ಅಭಿಮನ್ಯು (ಪುತ್ರ)ಗೆ ಜನ್ಮ ನೀಡಿದ್ದೆ. ನನ್ನ ಅತ್ತಿಗೆ ಹೊರಗೆ ಇದ್ದಳು. ಆಗ ಪ್ರೆಸ್ ರಿಪೋರ್ಟರ್ ಒಬ್ಬರು ದೊಡ್ಡ ಹೂಗುಚ್ಚ ಹಿಡಿದುಕೊಂಡು ನನ್ನನ್ನು ಭೇಟಿ ಮಾಡಬೇಕು ಅಂತ ಬಂದಿದ್ದರು. ಅಲ್ಲೇ ನನ್ನ ಪತಿ ಹಿಮಾಲಯ್ ಸಹ ಇದ್ದರು. ಸಲ್ಮಾನ್ ಖಾನ್ ಜೊತೆ ಭಾಗ್ಯಶ್ರೀ ಅಫೇರ್ ಬಗ್ಗೆ ನಿಮಗೆ ಏನು ಅನಿಸುತ್ತೆ? ಆ ಬಳಿಕ ಅವರು ನಿಮ್ಮನ್ನ ಮದುವೆ ಆಗಿ ಈಗ ನಿಮ್ಮ ಮಗುವಿನ ತಾಯಿಯೂ ಆಗಿದ್ದಾರೆ..' ಅಂತ ಆ ಪತ್ರಕರ್ತೆ ಪ್ರಶ್ನೆ ಮಾಡಿದ್ದರಂತೆ. ಆ ಘಟನೆ ಬಳಿಕ ಈಕೆ ಸಿನಿಮಾರಂಗದ ಸಹವಾಸವೇ ಬೇಡ ಅಂತ ದೂರ ಉಳಿದುಬಿಟ್ಟರಂತೆ. ಈ ಘಟನೆ ಬಳಿಕ ಮನೆಗೆ ಸಿನಿಮಾ ಮ್ಯಾಗಜಿನ್ ಬರೋದೂ ನಿಂತು ಹೋಯ್ತಂತೆ.

ಇದರ ಜೊತೆಗೇ ಎಲ್ಲರೂ ಊಹಿಸಿದಂತೆ ಸಲ್ಮಾನ್ ಖಾನ್ ಜೊತೆಗೆ ತನಗೆ ಅಫೇರ್(Affair) ಇರಲಿಲ್ಲ. ಅವರೊಬ್ಬ ಒಳ್ಳೆ ವ್ಯಕ್ತಿತ್ವ ಎಂದಿದ್ದಾರೆ.

The Kerala Story ನೋಡಿದ ಮುಸ್ಲಿಂ ಪತಿ ರಿಯಾಕ್ಷನ್​ ಹೀಗಿತ್ತು ಎಂದ ನಟಿ ದೇವೋಲೀನಾ