The Kerala Story ನೋಡಿದ ಮುಸ್ಲಿಂ ಪತಿ ರಿಯಾಕ್ಷನ್ ಹೀಗಿತ್ತು ಎಂದ ನಟಿ ದೇವೋಲೀನಾ
ವಿವಾದ ಸೃಷ್ಟಿಸುತ್ತಿರೋ ದಿ ಕೇರಳ ಸ್ಟೋರಿ ಕುರಿತು ಪತಿ ಶನ್ವಾಜ್ ಶೇಖ್ ಹೇಳಿದ್ದೇನು ಎಂಬ ಮಾಹಿತಿ ನೀಡಿದ ನಟಿ ದೇವೋಲೀನಾ ಭಟ್ಟಾಚಾರ್ಯ.
ಸುದೀಪ್ತೋ ಸೇನ್ (Sudipto Sen) ಅವರ ನಿರ್ದೇಶನದ ಕೇರಳ ಸ್ಟೋರಿ ನೇರ ಒಂಬತ್ತು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ರೂ 100 ಕೋಟಿ ಕ್ಲಬ್ ದಾಟಿದೆ. ಈ ಸತ್ಯ ಘಟನೆಯನ್ನು ಸಹಿಸದೇ ಕೆಲವು ರಾಜ್ಯಗಳಲ್ಲಿ ಚಿತ್ರವನ್ನು ಬ್ಯಾನ್ ಮಾಡಿದ್ದರೂ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಸೇರಿದಂತೆ ಕೆಲವರು ಈ ಚಿತ್ರಕ್ಕೆ ವಿರೋಧ ಒಡ್ಡುತ್ತಿದ್ದರೂ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ನತ್ತ ದಾಪುಗಾಲು ಇರಿಸಿದೆ. ಈ ಚಿತ್ರವು ಈಗ ಇತಿಹಾಸದಲ್ಲಿ ಅತಿ ಹೆಚ್ಚು ತೆರೆಕಂಡ ಮಹಿಳಾ ನಾಯಕತ್ವದ ಬಾಲಿವುಡ್ ಚಲನಚಿತ್ರ ಎಂದೆನಿಸಿದೆ, ಅರ್ಥಾತ್, ಮಹಿಳಾ ನಾಯಕತ್ವದ ಚಿತ್ರದಲ್ಲಿ ದಿ ಕೇರಳ ಸ್ಟೋರಿ ನಂ.1 ಪಟ್ಟಕ್ಕೇರಿದೆ. ಕಂಗನಾ ರಣಾವತ್, ಆಲಿಯಾ ಭಟ್ ಮತ್ತು ವಿದ್ಯಾ ಬಾಲನ್ ಅವರಂತಹ ಹಿಟ್ ಚಿತ್ರಗಳನ್ನು ಅದಾ ಶರ್ಮಾ ಮೀರಿಸಿದ್ದಾರೆ. ಆಸೀಫಾ ಎಂಬ ಯುವತಿಯೇ ಇಲ್ಲಿ ಇಲ್ಲಿ ವಿಲನ್. ನರ್ಸಿಂಗ್ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಳ್ಳೋ ಆಸೀಫಾ, ತನ್ನ ರೂಮ್ಮೇಟ್ಸ್ಗಳ ಬ್ರೇನ್ವಾಷ್ ಮಾಡುವುದು ದಿ ಕೇರಳ ಸ್ಟೋರಿಯ ಕಥಾ ಹಂದರ. ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್ ಎಂಬ ರೂಮ್ಮೇಟ್ಸ್ಗಳ ಬ್ರೇನ್ ವಾಷ್ ಮಾಡುತ್ತಾಳೆ ಆಸೀಫಾ. ಇಸ್ಲಾಂ ಬಗ್ಗೆ ಬ್ರೇನ್ ವಾಷ್ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್ ಉಗ್ರ ಸಂಘಟನೆಗೆ ಸೇರಿಸುತ್ತಾಳೆ. ಇದು ಕೇರಳದಲ್ಲಿ ನಡೆದ ಸಹಸ್ರಾರು ಯುವತಿಯರ ಮತಾಂತರ ಭಯಾನಕ ಕಥೆಯಾದರೂ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿರುವ ನೈಜ ಚಿತ್ರಣ ಕೂಡ ಹೌದು ಎಂದಿದ್ದಾರೆ ಸುದಿಪ್ತೋ.
ಅಷ್ಟಕ್ಕೂ ಈ ಚಿತ್ರವನ್ನು ವಿರೋಧಿಸುತ್ತಿರುವವರು ಹೇಳುತ್ತಿರುವ ಕಾರಣ ಏನೆಂದರೆ ದಿ ಕೇರಳ ಸ್ಟೋರಿಯು ಮುಸ್ಲಿಂ ವಿರೋಧಿಯಾಗಿದೆ ಎನ್ನುವುದು. ಅವರನ್ನು ಭಯೋತ್ಪಾದಕರೆಂದು ಗುರುತಿಸಲಾಗಿದೆ ಎಂದು. ಆದರೆ ಈ ಚಿತ್ರತಂಡ ಮೊದಲಿನಿಂದಲೂ ಹೇಳುತ್ತಿರುವುದು ಇದು ಭಯೋತ್ಪಾದನೆಯ ವಿರುದ್ಧದ ನೈಜ ಚಿತ್ರಣವೇ ವಿನಾ ಯಾವುದೇ ಧರ್ಮದ ವಿರುದ್ಧ ಅಲ್ಲ ಎಂದು. ಇದರ ಹೊರತಾಗಿಯೂ ಇದಕ್ಕೆ ಅಪಸ್ವರ ಕೇಳಿಬರುತ್ತಲೇ ಇದೆ. ಇದರ ನಡುವೆಯೇ ಇದೀಗ ಖ್ಯಾತ ನಟಿ ದೇವೋಲೀನಾ ಭಟ್ಟಾಚಾರ್ಯ ತಮ್ಮ ಅನಿಸಿಕೆಯನ್ನು ಶೇರ್ ಮಾಡಿಕೊಂಡಿದ್ದು ಅದೀಗ ಸದ್ದು ಮಾಡುತ್ತಿದೆ.
ಬ್ಯಾನ್ ನಡುವೆಯೂ ಭರ್ಜರಿ ಕಲೆಕ್ಷನ್- The Kerala Storyಗೆ ನಂ.1 ಪಟ್ಟ!
ಅಸಲಿಗೆ ಹಿಂದೂ ಧರ್ಮಕ್ಕೆ ಸೇರಿರುವ ದೇವೋಲೀನಾ ಅವರು ಇಸ್ಲಾಂ ಧರ್ಮದ ಶನ್ವಾಜ್ ಶೇಖ್ ಅವರನ್ನು ಕಳೆದ ವರ್ಷ ವಿವಾಹವಾಗಿದ್ದಾರೆ. ಕಿರುತೆರೆ ನಟಿಯಾಗಿರು ಗುರುತಿಸಿಕೊಂಡಿರುವ ದೇವೋಲೀನಾ ಅವರು ಭರತನಾಟ್ಯ ಕಲಾವಿದೆ ಕೂಡ. ಅವರು ಸ್ಟಾರ್‌ಪ್ಲಸ್‌ನ ದೀರ್ಘಾವಧಿಯ ಜನಪ್ರಿಯ ಕಾರ್ಯಕ್ರಮ ಸಾಥ್ ನಿಭಾನ ಸಾಥಿಯಾದಲ್ಲಿ ಗೋಪಿ ಮೋದಿ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ . ಅವರು ಬಿಗ್ ಬಾಸ್ 13 , ಬಿಗ್ ಬಾಸ್ 14 ಮತ್ತು ಬಿಗ್ ಬಾಸ್ 15 ರಲ್ಲೂ ಭಾಗವಹಿಸಿದ್ದರು. ಅಸ್ಸಾಂನಲ್ಲಿ ಅಸ್ಸಾಮಿ-ಬಂಗಾಳಿ ಕುಟುಂಬದಲ್ಲಿ ಜನಿಸಿರುವ ದೇವೋಲೀನಾ ಅವರು 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ತಮ್ಮ ಗೆಳೆಯ ಶನ್ವಾಜ್ ಶೇಖ್ ಅವರನ್ನು ವಿವಾಹವಾಗಿ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ.
ನಟಿ ದೇವೋಲೀನಾ ಭಟ್ಟಾಚಾರ್ಜಿ ಅವರು ತಮ್ಮ ಪತಿಯ ಜೊತೆ ದಿ ಕೇರಳ ಸ್ಟೋರಿ ವೀಕ್ಷಣೆ ಮಾಡಿದ್ದು, ಚಿತ್ರ ವೀಕ್ಷಣೆ ಬಳಿಕ ತಮ್ಮ ಪತಿಯ ರಿಯಾಕ್ಷನ್ ಹೇಗಿತ್ತು ಎಂಬ ಬಗ್ಗೆ ಟ್ವಿಟರ್ನಲ್ಲಿ ಬರೆದಿದ್ದಾರೆ. 'ನನ್ನ ಪತಿ ಮುಸ್ಲಿಂ ಧರ್ಮಕ್ಕೆ ಸೇರಿದವರು. ಖುಷಿಯಿಂದಲೇ ಈ ಸಿನಿಮಾ ವೀಕ್ಷಿಸಲು ನನ್ನೊಂದಿಗೆ ಬಂದಿದ್ದರು. ಈ ಚಿತ್ರವನ್ನು ನೋಡಿ ಅವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಮ್ಮ ಧರ್ಮವನ್ನು ನಿಂದಿಸುವ ಯಾವುದೇ ಅಂಶಗಳು ಇಲ್ಲ ಎಂದು ಅವರು ಹೇಳಿದ್ದಾರೆ. ಈ ಚಿತ್ರವನ್ನು ವಿರೋಧಿಸುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ನನ್ನ ಪತಿ, ಈ ಚಿತ್ರದಲ್ಲಿ ಅಪರಾಧ ಎನ್ನುವಂಥ ಯಾವುದೇ ದೃಶ್ಯವೂ ಇಲ್ಲ, ಇದು ನಮ್ಮ ಧರ್ಮಕ್ಕೆ ವಿರುದ್ಧವಾಗಿ ಚಿತ್ರೀಕರಣಗೊಂಡಿದ್ದೂ ಅಲ್ಲ ಎಂದಿರುವ ನನ್ನ ಪತಿ ಶನ್ವಾಜ್ ಶೇಖ್ (Shanwaz Shaikh) , ಈ ಚಿತ್ರವನ್ನು ವಿರೋಧಿಸುವಲ್ಲಿ ಅರ್ಥವಿಲ್ಲ ಎಂದಿದ್ದಾರೆ' ಎಂದು ದೇವೋಲೀನಾ ಭಟ್ಟಾಚಾರ್ಜಿ ಹೇಳಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಹೀಗಿರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
The Kerala Story: ಮತಾಂತರದ ರೋಲ್ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'
ಈ ಟ್ವೀಟ್ಗೆ ರಿಪ್ಲೈ ಮಾಡಿರುವ ವ್ಯಕ್ತಿಯೊಬ್ಬರು, ತಮ್ಮ ಸಹೋದ್ಯೋಗಿಯ ಸ್ನೇಹಿತೆಯ ಬಗ್ಗೆ ಹೇಳಿಕೊಂಡಿದ್ದಾರೆ. “ನನ್ನ ಸಹೋದ್ಯೋಗಿಯ ಸ್ನೇಹಿತೆ ನಿಧಿ ಎಂಬಾಕೆ ಮುಸ್ಲಿಂ ಧರ್ಮದ ಯುವಕನ ಜೊತೆ ಡೇಟಿಂಗ್ ಮಾಡುತ್ತಿದ್ದಳು. ಕೇರಳ ಸ್ಟೋರಿ ಚಿತ್ರ ನೀಡಲು ಕರೆದಾಗ ಆತ ನಿರಾಕರಿಸಿದ. ಇಂಥ ಚಿತ್ರ ನೋಡಲು ನೀನು ಇಸ್ಲಾಂಫೋಬಿಯಾ ಎಂದನಂತೆ. ನಾನು ನಿನ್ನ ಜೊತೆ ಡೇಟಿಂಗ್ ಮಾಡುತ್ತಿರುವಾಗ ಇಸ್ಲಾಂಫೋಬಿಯಾ ಹೇಗೆ ಸಾಧ್ಯ ಎಂದು ನಿಧಿ ಕೇಳಿದ್ದಾಳೆ. ಆಗ ಆ ಗೆಳೆಯ ಹಾಗಿದ್ದರೆ ನೀನು ಇಸ್ಲಾಂಗೆ ಮತಾಂತರವಾಗು, ನನ್ನ ಜೊತೆ ಮದುವೆಯಾಗು ಎಂದಿದ್ದಾನೆ. ಅದಕ್ಕೆ ನಿಧಿ ಒಪ್ಪಿಕೊಂಡು ಮತಾಂತರಗೊಂಡಿದ್ದಾಳೆ. ಹೀಗಾದ ಮೇಲೂ ಸಿನಿಮಾ ನೋಡಲು ಹಂಬಲದಿಂದ ಆಕೆ ಸ್ನೇಹಿತೆ ಜೊತೆ ಹೋಗಿದ್ದಾಳೆ. ನಂತರ ಅವಳಿಗೆ ವಾಸ್ತವದ ಅರಿವಾಗಿ, ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಾಗಿ ಸ್ನೇಹಿತನ ಜೊತೆ ಸಂಬಂಧ ಮುರಿದುಕೊಂಡಿದ್ದಾಳೆ. ಇದು ದಿ ಕೇರಳ ಸ್ಟೋರಿ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ. ಎಲ್ಲರೂ ಈಗ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಸರಿ ಯಾವುದು, ತಪ್ಪು ಯಾವುದು ಎನ್ನುವುದನ್ನು ತಿಳಿಯುತ್ತಿದ್ದಾರೆ ಎಂದಿದ್ದಾರೆ.