Asianet Suvarna News Asianet Suvarna News

ಮಧ್ಯರಾತ್ರಿಯೇ KGF2 ವೀಕ್ಷಿಸಿದ ಆಶಾ ಭಟ್; ಗೆಳತಿ ಶ್ರೀನಿಧಿ ಶೆಟ್ಟಿ ಬಗ್ಗೆ ಹೇಳಿದ್ದೇನು?

KGF 2 ವೀಕ್ಷಿಸಿದ ಬಳಿಕ ನಟಿ ಆಶಾ ಭಟ್ ಮಾತನಾಡಿ, ಕೆಜಿಎಫ್-2 ಅನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಶ್ರೀನಿಧಿ ಶೆಟ್ಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಲಾವಿದೆಯಾಗಿ ಅಥವಾ ವೀಕ್ಷಕಳಾಗಿ ಹೇಗೆ ನೋಡಿದರು ಕೆಜಿಎಫ್ 2 ಅದ್ಭುತವಾಗಿದೆ. ಇದು ನನ್ನ ಸ್ನೇಹಿತೆ ಶ್ರೀನಿಧಿ ಶೆಟ್ಟಿ ಚಿತ್ರ. ಹಾಗಾಗಿ ಮೊದಲ ದಿನ ಮಿಸ್ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಮಧ್ಯರಾತ್ರಿಯೇ ಚಿತ್ರ ವೀಕ್ಷಿಸಿದ್ದೇನೆ ಎಂದು ಹೇಳಿದರು.

Actress Asha Bhatt reacts after watching KGF2 movie
Author
Bengaluru, First Published Apr 14, 2022, 11:10 AM IST

ಸಿನಿ ಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ಕೆಜಿಎಫ್ 2 (KGF 2) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ವಿಶ್ವದಾದ್ಯಂತ 10ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ರಾರಾಜಿಸುತ್ತಿದೆ. ಏಪ್ರಿಲ್ 14ರಂದು ತೆರೆಗೆ ಬಂದ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳು ಮತ್ತು ಅನೇಕ ಸಿನಿಮಾ ಗಣ್ಯರು ಸಹ ಚಿತ್ರ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಕೆಜಿಎಫ್-2 ಸಿನಿಮಾತಂಡದವರಾದ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಗರುಡ, ಅಯ್ಯಪ್ಪ, ಅರ್ಚನಾ ಇಂದು ಬೆಳಗ್ಗೆ ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ಶೋ ವೀಕ್ಷಿಸಿದ್ದಾರೆ. ಇವರ ಜೊತೆಯೇ ನಟಿ ಆಶಾ ಭಟ್, ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿದಂತೆ ಅನೇಕರು ಕೆಜಿಎಫ್-2 ನೋಡಿ ಕಣ್ತುಂಬಿಕೊಂಡಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ಮಾತಾಡಿದ ನಟಿ ಆಶಾ ಭಟ್, ಕೆಜಿಎಫ್-2 ಅನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ಶ್ರೀನಿಧಿ ಶೆಟ್ಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಕಲಾವಿದೆಯಾಗಿ ಅಥವಾ ವೀಕ್ಷಕಳಾಗಿ ಹೇಗೆ ನೋಡಿದರು ಕೆಜಿಎಫ್ 2 ಅದ್ಭುತವಾಗಿದೆ. ಇದು ನನ್ನ ಸ್ನೇಹಿತೆ ಶ್ರೀನಿಧಿ ಶೆಟ್ಟಿ ಚಿತ್ರ. ಹಾಗಾಗಿ ಮೊದಲ ದಿನ ಮಿಸ್ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಮಧ್ಯರಾತ್ರಿಯೇ ಚಿತ್ರ ವೀಕ್ಷಿಸಿದ್ದೇನೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಅದ್ಭುತವಾಗಿ ತೋರಿಸಿದ್ದಾರೆ. ಇದು ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಕಲಾವಿದರಾಗಿ ನಮ್ಮ ಚಿತ್ರರಂಗದ ಮೇಲೆ ಹೆಮ್ಮೆ ಮತ್ತು ಖುಷಿ ತರುವ ವಿಚಾರವಾಗಿದೆ. ದೊಡ್ಡ ಭರವಸೆ, ಅವಕಾಶಗಳನ್ನೂ ಇದು ಸೃಷ್ಟಿಸುತ್ತದೆ' ಎಂದು ಆಶಾ ಭಟ್ ಹೇಳಿದ್ದಾರೆ.

KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್‌ ಏನು?

ಕೆಜಿಎಫ್-2 ವೀಕ್ಷಿಸಿದ ಪ್ರತಿಯೊಬ್ಬರು ಹಾಡಿಹೊಗಳುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಅನೇಕ ಸಿನಿ ಗಣ್ಯರು ಸಹ ಚಿತ್ರ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ನಟನೆ, ಸಂಜಯ್ ದತ್ ಪಾತ್ರ ಪ್ರತಿಯೊಂದು ಸಹ ಸಿನಿ ರಸಿಕರ ಹೃದಯ ಗೆದ್ದಿದೆ. ಕೆಜಿಎಫ್-2 ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ದಾಖಲೆ ಮಟ್ಟದಲ್ಲಿ ರಿಲೀಸ್ ಆಗಿರುವುದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಮ್ಮೆಯಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಕೆಜಿಎಫ್-2 ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

KGF2; Yash ಜೊತೆಗೆ ನಿಹಾರಿಕಾ I'M The Violence ವೀಡಿಯೋ ವೈರಲ್! ನಗಿಸಿ ಹೊಟ್ಟೆಹುಣ್ಣಾಗಿಸೋ Reels ಇದು

ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್ ಸೇರಿದಂತೆ ರಾಜ್ಯದ ಹಲವು ಥಿಯೇಟರ್‌ನಲ್ಲಿ (Theatre) ಕೆಜಿಎಫ್-2 (KGF 2) ಸಿನಿಮಾ ಬುಧವಾರ ರಾತ್ರಿ 12 ಗಂಟೆಗೆ ಮೊದಲೇ ಪ್ರದರ್ಶನ ಕಂಡಿದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ರಾಕಿಂಗ್ ಸ್ಟಾರ್‌ ಯಶ್ ಅವರ ಬೃಹತ್‌ ಕಟೌಟ್ ಗಳು ರಾರಾಜಿಸುತ್ತಿವೆ. ಡೊಳ್ಳು ಕುಣಿತ, ಹೂವಿನ ಹಾರಗಳ ಅಲಂಕಾರದಿಂದ ಚಿತ್ರಮಂದಿರಗಳನ್ನು ಸಿಂಗರಿಸಲಾಗಿದೆ. ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ.

 

Latest Videos
Follow Us:
Download App:
  • android
  • ios