Asianet Suvarna News Asianet Suvarna News

ಮಾಲ್ಡೀವ್ಸ್‌ನಲ್ಲಿ ಬಾಯ್ ಫ್ರೆಂಡ್ ಜೊತೆ ರೊಮ್ಯಾನ್ಸ್ ಮಾಡ್ತಿರೋ ತಾಪ್ಸಿ

ಪಿಂಕ್ ಬೆಡಗಿ ತಾಪ್ಸಿ ಪನ್ನು ಭೂಲೋಕದ ಸ್ವರ್ಗದಲ್ಲಿದ್ದಾರೆ, ಐ ಮೀನ್ ತಿಳಿ ನೀಲ ಸಮುದ್ರದಲ್ಲಿ ಟೂ ಪೀಸ್ ತೊಟ್ಟು ಅಪ್ಸರೆ ಥರ ವಿಹರಿಸ್ತಾ ಇದ್ದಾರೆ, ಈ ಖುಷಿಗೆ ಈಕೆಯ ಬಾಯ್ ಫ್ರೆಂಡ್ ಜೊತೆಯಾಗಿದ್ದಾನೆ. ಈಗಷ್ಟೇ ವೆಕೇಶನ್ ಮುಗಿಸಿ ಮುಂಬೈಗೆ ಹೊರಟಿದ್ದಾರೆ.

 

What Tapsee pannu doing in maldives with her boyfriend
Author
Bengaluru, First Published Oct 14, 2020, 5:55 PM IST
  • Facebook
  • Twitter
  • Whatsapp

ಕಳೆದ ಒಂದು ವಾರದಿಂದ ತಾಪ್ಸಿ ಸೋಷಿಯಲ್ ಮೀಡಿಯಾದಲ್ಲಿ ಮಾಲ್ಡೀವ್ಸ್ ನ ಕ್ಷಣಗಳನ್ನು ಫ್ಯಾನ್ಸ್ ಎದುರು ಬಿಚ್ಚಿಡುತ್ತಿದ್ದಾರೆ. ಅಷ್ಟೇ ಆದ್ರೆ ಓಕೆ ಅಂತ ಫ್ಯಾನ್ಸ್ ಸುಮ್ನಾಗ್ತಿದ್ರೋ ಏನೋ, ಆದರೆ ಈಕೆಯ ಈ ಪ್ರವಾಸಕ್ಕೆ ಮಥಾಯಿಸ್ ಬೋ ಎಂಬ ಬ್ಯಾಡ್ಮಿಂಟನ್ ಆಟಗಾರ ಜೊತೆಯಾಗಿದ್ದಾನೆ. ಆತನ ಜೊತೆಗೆ ತಾಪ್ಸಿ ಹಿಂದೆಯೇ ಓಡಾಡುತ್ತಿದ್ದರು. ಆತನೇ ತಾಪ್ಸಿಯ ಬಾಯ್ ಫ್ರೆಂಡ್ಸ್ ಅಂತ ರೂಮರ್ಸ್ ಇತ್ತು. ಆದರೆ ಈ ಕುರಿತ ಪ್ರಶ್ನೆಗೆ ತಾಪ್ಸಿ ಎಸ್ ಅಥವಾ ನೋ ಅಂದಿರಲಿಲ್ಲ. ಈಗ ಆ ಗಾಳಿಸುದ್ದಿ ನಿಜವಾಗಿರೋ ಎಲ್ಲ ಸೂಚನೆ ಸ್ಪಷ್ಟವಾಗಿ ಗೋಚರಿಸುತ್ತಾ ಇದೆ. ತಾಪ್ಸಿಯ ಜೊತೆಗೆ ತಾನೂ ಮಾಲ್ಡೀವ್ಸ್ ವೆಕೇಶನ್ ಎನ್ ಜಾಯ್ ಮಾಡ್ತಿರೋದಾಗಿ ಸ್ವತಃ ಮಥಾಯಿಸ್ ಹೇಳಿದ್ದಾರೆ.

ಒಬ್ಬ ಹುಡುಗಿಯ ಜೊತೆಗೆ ಹೀಗೆಲ್ಲ ವಿದೇಶಿ ಪ್ರವಾಸ ಮಾಡ್ತಿದ್ರೆ ಇವ್ರಿಬ್ರನ್ನು ಜಸ್ಟ್ ಫ್ರೆಂಡ್ಸ್ ಅನ್ನಲಿಕ್ಕೆ ನಾವೇನೂ ಮುಠಾಳರಲ್ಲ ಅನ್ನೋದು ನೆಟಿಜನ್ಸ್ ಮಾತು. ಜೊತೆಗೆ ಹಿಂದೊಮ್ಮೆ ತಾಪ್ಸಿ ಪನ್ನು ಬರ್ತ್ ಡೇ ಗೆ ಈತ ವಿಷ್ ಮಾಡಿದ ರೀತಿಯೂ ಹಲವರ ಹುಬ್ಬೇರುವಂತೆ ಮಾಡಿತ್ತು. ತಾಪ್ಸಿ ಜೊತೆಗೆ ಹಾಸಿಗೆ ಮೇಲೆ ಬಿದ್ದುಕೊಂಡಿರುವ ಫೋಟೋ ಶೇರ್ ಮಾಡಿ, 'ಹ್ಯಾಪಿ ಬರ್ತ್ ಡೇ ಕ್ರೇಜಿ ಲಿಟಲ್ ಕ್ರೀಚರ್, ನನ್ನಿಂದ ಕಿರಿಕಿರಿಗೊಳಗಾಗದೇ, ನಾನು ಹೇಳೋ ಸಿಲ್ಲಿ ಜೋಕ್ಸ್ ಗೂ ನಗುತ್ತಾ ಇರುವ ನಿನ್ನನ್ನು ಪಡೆದ ನಾನು ಅದೃಷ್ಟವಂತ. ನೀನ್ಯಾವತ್ತೂ ನಗು ನಗುತ್ತಾ ಇರೋ ಹಾಗೆ ನೋಡಿಕೊಳ್ತೀನಿ ಅನ್ನೋ ಅರ್ಥದಲ್ಲಿ ಮಥಾಯಿಸ್ ವಿಶ್ ಮಾಡಿದ್ರು. ಆಗ ಒಂದಿಷ್ಟು ಜನಕ್ಕೆ ಇವರಿಬ್ಬರ ನಡುವೆ ಇರೋದು ಬರೀ ಫ್ರೆಂಡ್‌ಶಿಪ್ ಮಾತ್ರ ಅಲ್ಲ ಅಂತ ಅರ್ಥ ಆಗಿತ್ತು. ಈಗ ಇಬ್ಬರೂ ಮಾಲ್ಡೀವ್ಸ್ ನಲ್ಲಿ ಮಜಾ ಉಡಾಯಿಸ್ತಿರೋದು ಅವರ ಗುಮಾನಿಯನ್ನು ನಿಜ ಮಾಡಿದೆ.

ಚಿನ್ನು, ಸನ್ನಿಧಿಗೆ ಕೆಲಸ ಇಲ್ವಾ..? ಹಿಟ್ ಸೀರಿಯಲ್ ಕೊಟ್ಟೋವ್ರು ಈಗೆಲ್ಲಿ ಹೋದ್ರು..? ...

ಮೂಲಗಳ ಪ್ರಕಾರ ತಾಪ್ಸಿ ಮತ್ತು ಮಥಾಯಿಸ್ ಬಹಳ ಕಾಲದಿಂದ ತಮ್ಮಿಬ್ಬರ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದಾರೆ. ಅಷ್ಟಕ್ಕೂ ಈ ಮಥಾಯಿಸ್ ಯಾರು ಅಂದರೆ ಆತ ಬ್ಯಾಡ್ಮಿಂಟನ್ ಪ್ಲೇಯರ್ ಅಂತ ಈತನ ಇನ್ ಸ್ಟಾ ಪ್ರೊಫೈಲ್ ಹೇಳುತ್ತೆ. ತಾನು ಮೂಲತಃ ಡೆನ್ಮಾರ್ಕ್ ನವನು, ಭಾರತ ಮತ್ತು ಯುಎಇ ಗಳಲ್ಲಿ ವಾಸಿಸುತ್ತಿದ್ದೇನೆ' ಅಂತಿದೆ. ಇವರಿಬ್ಬರೂ ಎಲ್ಲಿ ಹೇಗೆ ಪರಿಚಯವಾದ್ರು, ಸಂಬಂಧ ಹೇಗೆ ಶುರುವಾಯ್ತು ಅನ್ನೋದೆಲ್ಲ ಇನ್ನಷ್ಟೇ ಹೊರಬರಬೇಕಿದೆ.

 

 
 
 
 
 
 
 
 
 
 
 
 
 

Waking up after a week long dream.... Back to reality now .... #HolidayOver #MaldivesToMumbai

A post shared by Taapsee Pannu (@taapsee) on Oct 13, 2020 at 7:08am PDT

 

ಅಂದ ಹಾಗೆ ತಾಪ್ಸಿ ಪ್ರವಾಸ ಮುಗಿದಿದೆ. ಆಕೆ ಮತ್ತೆ ಮುಂಬೈಯತ್ತ ಮುಖ ಮಾಡಿದ್ದಾರೆ.

ನಿಮಗೆ ಗೊತ್ತಾ ತಾಪ್ಸಿ ಪನ್ನುಗೆ ಒಬ್ಬಳು ತಂಗಿ ಇದ್ದಾಳೆ! 

ತಾಪ್ಸಿ ಎನ್ ಜಾಯ್ ಮಾಡ್ತಿರುವ ಮಾಲ್ಡೀವ್ಸ್ ಹೇಗಿದೆ?

ಇದೊಂದು ಬಹಳ ಸುಂದರವಾದ ದ್ವೀಪ. ತಳವೂ ಗೋಚರಿಸುವಂಥಾ ಕಡು ನೀಲಿ ಬಣ್ಣದ ಸಮುದ್ರ, ಹವಳದ ದಂಡೆಗಳಿಗೂ ಫೇಮಸ್. ಮಾಲೆ ಇಲ್ಲಿನ ದೊಡ್ಡ ಸಿಟಿ. ಬಹಳ ಹಿಂದೆ ಇಲ್ಲಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಧಿಕಾ ಜೊತೆಗೆ ಪ್ರಯಾಣಿಸುವಾಗ ಮೀಡಿಯಾ ಕಣ್ಣಿಗೆ ಸಿಕ್ಕಿಬಿದ್ದು ಫಚೀತಿಯಾದದ್ದು ನಿಮಗೆ ನೆನಪಿರಬಹುದು. ಈ ದ್ವೀಪದಲ್ಲಿ ಅನೇಕ ಸ್ಪಾಗಳು, ಸ್ಟಾರ್ ಹೊಟೇಲ್‌ಗಳೆಲ್ಲ ಇವೆ. ತಾಪ್ಸಿ ಇದ್ದಿದ್ದು ಐಷಾರಾಮಿ ತಾಜ್ ಎಕ್ಸಾಟಿಕ್ ರಾಸಾರ್ಟ್ ಆಂಡ್ ಸ್ಪಾದಲ್ಲಿ. ಸಮುದ್ರಕ್ಕೇ ತೆರೆದಂತಿರುವ ಈ ರೆಸಾರ್ಟ್ ನ ದರ ದಿನಕ್ಕೆ ೪೫ ಸಾವಿರದಿಂದ ಆರಂಭವಾಗುತ್ತೆ. ಸಮುದ್ರದ ಸೌಂದರ್ಯವನ್ನು ಸಖತ್ತಾಗಿ ಸವಿಯೋ ಅವಕಾಶ ಇಲ್ಲಿದೆ. ಲಕ್ಸೂರಿಯಲ್ಲೂ ಇದು ಟಾಪ್. ಬಿಕಿನಿ ತೊಟ್ಟು ಸ್ವಿಮ್ ಮಾಡಲು ರೆಡಿಯಾಗಿ ನಿಂತಿರೋ ತಾಪ್ಸಿಯ ಬ್ಯಾಗ್ರೌಂಡ್ ನಲ್ಲಿ ಈ ಪರಿಸರವೂ ಸ್ವರ್ಗದಂತೆ ಕಾಣೋದು ಸುಳ್ಳಲ್ಲ. ತಾಪ್ಸಿ ಇದನ್ನು ಕನಸಿನ ಹಾಗಿತ್ತು ಅಂದಿದ್ದು ಎಗ್ಸಾಗರೇಶನ್ ಖಂಡಿತಾ ಅಲ್ಲ.

ಮನಾಲಿ ಸೇಬಿನ ತೋಟದಲ್ಲಿ ಶಿಲ್ಪಾ ಶೆಟ್ಟಿ..! ಫೋಟೋಸ್ ನೋಡಿ 

"

Follow Us:
Download App:
  • android
  • ios