ನಟಿ ಕಾಜೋಲ್ ಅಗರ್‌ವಾಲ್ ಎಂಗೇಜ್ಮೇಂಟ್ ಫೋಟೋಸ್ ವೈರಲ್!
ಟಾಲಿವುಡ್ ಬ್ಯುಟಿ ಕಾಜಲ್ ಅಗರ್‌ವಾಲ್ ಸಡನ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ. ನಟಿ ಕಾಜಲ್ ಈ ಬಗ್ಗೆ ಟ್ವೀಟ್ ಮಾಡಿ ವಿವಾಹದ ಮಾಹಿತಿ ನೀಡಿದ್ದರು. ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸುತ್ತಿದ್ದಾರೆ ಈ ಮಗಧೀರ ನಟಿ. ಈಗ ಗೌತಮ್ ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್ಮೆಂಟ್‌ನ ಅಪರೂಪದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಟಿಯ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದೆ.
ಈ ದಿನಗಳಲ್ಲಿ ನಟಿ ಕಾಜಲ್ ಅಗರ್‌ವಾಲ್ ಸಖತ್ ಸುದ್ದಿಯಲ್ಲಿದ್ದಾರೆ.
ಸಿಂಗಮ್ ನಟಿ 2020 ರ ಇತ್ತೀಚೆಗೆ ಉದ್ಯಮಿ ಗೌತಮ್ ಅವರೊಂದಿಗೆ ಸಡನ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು, ಫ್ಯಾನ್ಸ್‌ಗೆ ಶಾಕ್ ನೀಡಿದ್ದರು.
ಕಾಜಲ್ ಅಗ್ರವಾಲ್ ಮತ್ತು ಗೌತಮ್ ಕಿಚ್ಲು.
ಇತ್ತೀಚೆಗೆ ಗೌತಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಂಗೇಜ್ಮೇಂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ನಟಿ ಸ್ವಲ್ಪ ಸಮಯದ ಹಿಂದೆ ತಮ್ಮ ಮದುವೆ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಇದರ ಬಗ್ಗೆ ಕನ್ಫರ್ಮ್ ಮಾಡಿದ್ದರು.
ಸರಳ ಖಾಸಗಿ ಸಮಾರಂಭದಲ್ಲಿ ಇದೇ ತಿಂಗಳ 30ರಂದು ಮುಂಬೈನಲ್ಲಿ ವಿವಾಹವಾಗುವ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದರು ನಟಿ ಕಾಜೋಲ್ ಅಗರ್‌ವಾಲ್.
ಇತ್ತೀಚೆಗೆ ತನ್ನ ಗೆಳತಿಯರೊಂದಿನ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದರು.
ಖ್ಯಾತ ಬ್ಯುಸಿನೆನ್ ಮ್ಯಾನ್ ಗೌಮತ್ ಇಂಟೀರಿಯರ್ ಡಿಸೈನರ್ ಕೂಡಾ ಹೌದು.
ಇವರ ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ ಇಂಡಿಯನ್ 2 ಹಾಗೂ ದುಲ್ಖರ್ ಸಲ್ಮಾನ್ ಜೊತೆಗೆ ಹೇ ಸಿನಮಿಕಾ ಸಿನಿಮಾವನ್ನು ಮಾಡ್ತಿದ್ದಾರೆ.