ಶೇವಿಂಗ್​ ಟಿಪ್ಸ್​ ನೀಡುತ್ತಲೇ ಮದುಮಗಳಾಗಿ ಮಿಂಚಿದ ಅದಿತಿ ಪ್ರಭುದೇವ: ಕ್ಯೂಟ್​ ಫೋಟೋಶೂಟ್​ ವೈರಲ್​ 

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಕಳೆದ ನವೆಂಬರ್​ನಲ್ಲಿ ಮದುವೆಯಾಗಿರುವ ನಟಿಯ ಮೊದಲ ವಾರ್ಷಿಕೋತ್ಸವ ಹತ್ತಿರ ಬರುತ್ತಿದೆ. ಇದೇ ಸಮಯದಲ್ಲಿ ಮತ್ತೊಮ್ಮೆ ಮದುಮಗಳಾಗಿ ಮಿಂಚಲು ರೆಡಿ ಎಂದ ನಟಿ ತಮ್ಮ ಮದುಮಗಳ ಫೋಟೋಶೂಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆ ಒಂದಿಷ್ಟು ಹೆಲ್ದಿ ಟಿಪ್ಸ್​ ಕೂಡ ನೀಡಿದ್ದಾರೆ. ಮಾತ್ರವಲ್ಲದೇ ಮದುಮಗಳಾಗಿ ಅಥವಾ ಇನ್ನಾವುದೇ ಫಂಕ್ಷನ್​ಗಳಿಗೆ ರೆಡಿಯಾಗುವ ಸಮಯದಲ್ಲಿ ಮೈಮೇಲೆ ಇರುವ ಕೂದಲುಗಳನ್ನು ಹೇಗೆ ತೆಗೆಯಬೇಕು ಎಂಬ ಬಗ್ಗೆಯೂ ನಟಿ ಟಿಪ್ಸ್​ ಕೊಟ್ಟಿದ್ದಾರೆ. ನಂತರ ಐಸ್​ಕ್ಯೂಬ್​ನಿಂದ ಮುಖಕ್ಕೆ ಮಸಾಜ್ ಮಾಡಿಕೊಂಡಿದ್ದಾರೆ. 

ಮಿಕ್ಕಿರೋ ಇಡ್ಲಿಯಿಂದ ನಟಿ ಅದಿತಿ ಮಾಡಿದ್ರು ಯಮ್ಮಿ ಬ್ರೇಕ್​ಫಾಸ್ಟ್​, ಸುಲಭದ ಟೊಮ್ಯಾಟೊ ಚಟ್ನಿ!

ಆರಂಭದಲ್ಲಿ ಬೆಳಗಿನ ಜಾವ ಬಾದಾಮಿ ಹಾಲನ್ನು ಮಾಡುವ ಬಗೆಯನ್ನು ನಟಿ ತಿಳಿಸಿದ್ದಾರೆ. ಕೆಲವೊಂದು ನೆನೆಸಿಟ್ಟ ಬಾದಾಮಿ ಬೀಜಗಳ ಸಿಪ್ಪೆ ತೆಗೆದು ಅಥವಾ ಸಿಪ್ಪೆ ಸಹಿತವಾಗಿ ನೀರು ಸೇರಿಸಿ ಮಿಕ್ಸಿ ಮಾಡಿಕೊಂಡು ಕುಡಿಯುವಂತೆ ಸಲಹೆ ನೀಡಿದ್ದಾರೆ. ಕೊನೆಯ ಪಕ್ಷ ವಾರಕ್ಕೊಮ್ಮೆಯಾದರೂ ಹೀಗೆ ಮಾಡಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಇದಾದ ಬಳಿಕ ಮದುಮಗಳಾಗಿ ರೆಡಿಯಾಗಿದ್ದಾರೆ. ನಾಲ್ಕು ಮಂದಿ ಮೇಕಪ್​ ವಿಮೆನ್​ಗಳನ್ನು ಒಳಗೊಂಡ ತಂಡ ನಟಿಗೆ ಮೇಕ್​ ಓವರ್​ ಮಾಡಿದೆ. ಇದಾದ ಬಳಿಕ ನಟಿ, ನೈಟ್​ ಸುಲಭದಲ್ಲಿ ಬ್ರೆಡ್​ ಸ್ನಾಕ್ಸ್​ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಇನ್ನು ನಟಿಯ ಸಿನಿಮಾದ ಬಗ್ಗೆ ಹೇಳುವುದಾದರೆ ಇವರ ನಟನೆಗೆ ಅಲೆಕ್ಸಾ ಇತ್ತೀಚೆಗೆ ಬಿಡುಗಡೆಯಾಗಿದೆ.

ನಂತರ ಬೆಂಗಳೂರು ಮೂವಿ ಸ್ಟೂಡಿಯೋದಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಕೆಲವೊಂದು ಸಿನಿಮಾಗಳು ಹಾಗೂ ತಮ್ಮ ನಾಗಕನ್ನಿಕೆ ಧಾರಾವಾಹಿಯನ್ನೂ ಇಲ್ಲಿಯೇ ಶೂಟ್​ ಮಾಡಿರುವುದಾಗಿ ನಟಿ ಹೇಳಿದ್ದಾರೆ. ಗುಲಾಬಿ ಸೀರೆಯಲ್ಲಿ ಆಭೂಷಣ್​ ಮಳಿಗೆಯ ಆಭರಣಗಳನ್ನು ಧರಿಸಿ ನಟಿ ಅದಿತಿ ಸಕತ್​ ಕ್ಯೂಟ್​ ಆಗಿ ಕಂಗೊಳಿಸುತ್ತಿದ್ದಾರೆ. ಇದನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​

YouTube video player