ತಂದೆ ಕ್ರಿಶ್ಚಿಯನ್,ತಾಯಿ ಸಿಖ್, ಸೋದರ ಮುಸ್ಲಿಂ, ಪತ್ನಿ ಹಿಂದೂ; ಸಾಲು ಸಾಲು ಸೂಪರ್‌ಹಿಟ್ ಸಿನಿಮಾ ಕೊಟ್ಟ ನಟನ ಖಾಸಗಿ ಬದುಕು

ವಿವಿಧ ಧರ್ಮಗಳನ್ನು ಅಪ್ಪಿಕೊಂಡಿರುವ ನಟನ ಕುಟುಂಬದ ಕುರಿತು ಒಂದು ನೋಟ. ಕ್ರಿಶ್ಚಿಯನ್ ತಂದೆ, ಸಿಖ್ ತಾಯಿ, ಮುಸ್ಲಿಂ ಸಹೋದರ ಮತ್ತು ಹಿಂದೂ ಪತ್ನಿ - ಈ ವೈವಿಧ್ಯಮಯ ಹಿನ್ನೆಲೆಯ ನಟನ ಜೀವನದ ಕುತೂಹಲಕಾರಿ ವಿವರಗಳು.

Actor Vikrant Massey father is Christian mother is Sikh wife is Hindu brother is Muslim mrq

ಮುಂಬೈ: ಈ ನಟ ಬಾಲಿವುಡ್ ಅಂಗಳದಲ್ಲಿ ಭದ್ರವಾಗಿ ನೆಲೆಯೂರಲು ಸಂಭಾವನೆ ಕಡಿಮೆಯಾದ್ರೂ ಚಿಕ್ಕ ಪಾತ್ರಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದರು. ಇಂದು ಸಿನಿ ಅಂಗಳದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿರುವ ಇವರು, ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗೆ ಹಲವು ರಾಜ್ಯ ಸರ್ಕಾರಗಳು ತೆರಿಗೆ ವಿನಾಯ್ತಿ ನೀಡಿವೆ.  ಓಟಿಟಿ ಸಿನಿಮಾ, ವೆಬ್‌ ಸಿರೀಸ್‌ಗಳಲ್ಲಿ ನಟಿಸುವ ಮೂಲಕ ದೇಶದ ಎಲ್ಲಾ ಭಾಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಗೆ ಈ ನಟನ ಸಂದರ್ಶನದಲ್ಲಿ ನಟ ತನ್ನ ಕುಟುಂಬದ ಮಾಹಿತಿಯನ್ನು ನೀಡಿದ್ದರು. ಈ ವಿಡಿಯೋ ಕ್ಲಿಪ್  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಈ ನಟ ಕೇವಲ 24 ವರ್ಷದಲ್ಲಿಯೇ  ಮುಂಬೈನಂತಹ ಮಹಾನಗರದಲ್ಲಿ ಸ್ವಂತ  ಮನೆ ಮಾಡಿಕೊಂಡಿದ್ದರು. ಆರಂಭದ ಸಿನಿ ಜೀವನದಲ್ಲಿ ಪತ್ನಿ ನೀಡಿದ ಹಣದಿಂದಲ ಆಡಿಷನಲ್ ನೀಡಲು ತೆರಳುತ್ತಿದ್ದರು. ಇಂದು ಬಿಗ್ ಸ್ಟಾರ್ ಆದ್ರೂ ಎಂದಿಗೂ ಹೆಗ್ಗಳಿಕೆಯನ್ನು ತಲೆಗೆ ಏರಿಸಿಕೊಂಡವರಲ್ಲ ಎಂದು ಆಪ್ತರು ಹೇಳುತ್ತಾರೆ. ನಾವು ಹೇಳುತ್ತಿರೋದು 12th ಫೇಲ್, ದಿ ಸಾರಾಬಾಯಿ ರಿಪೋರ್ಟ್‌ ಸಿನಿಮಾ  ಖ್ಯಾತಿಯ ವಿಕ್ರಾಂತ್ ಮೆಸ್ಸಿ ಜೀವನ ಕಥೆ.  37 ವರ್ಷದ ವಿಕ್ರಾಂತ್ ಮೆಸ್ಸಿ ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾಗಳಿಂದ ವೃತ್ತಿ ಪಡೆಯುತಯ್ತಿರೋದನ್ನು  ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. 

ಇದನ್ನೂ ಓದಿ:  4 ಗಂಟೆ 15 ನಿಮಿಷದ ಸಿನಿಮಾ: 14 ಹೀರೋ, 10 ಹೀರೋಯಿನ್, ಆದರೂ ಫ್ಲಾಪ್?

ದಿ ಸಾರಾಬಾಯಿ ರಿಪೋರ್ಟ್‌ ಸಿನಿಮಾ ಬಿಡುಗಡೆ ಮುನ್ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ವಿಕ್ರಾಂತ್ ಮೆಸ್ಸಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದರು.  ನಮ್ಮದು ಸೆಕ್ಯೂಲರ್ ಫ್ಯಾಮಿಲಿ. ನನ್ನ ಪೋಷಕರು ಅಂತರ್ಜಾತಿ ವಿವಾಹವಾಗಿದ್ದರು. ತಂದೆ ಕ್ರೈಸ್ತ ಧರ್ಮದವರಾಗಿದ್ರೆ ತಾಯಿ ಸಿಖ್ ಧರ್ಮದವರು. ಇನ್ನು ಸೋದರ ಮೋಯಿನ್ ಇಸ್ಲಾಂಗೆ ಮತಾಂತರವಾಗಿದ್ದು, ರಂಜಾನ್ ಮತ್ತು ಬಕ್ರಿದ್ ಆಚರಣೆಗೆ ನಾವೆಲ್ಲರೂ ಆತನ ಮನೆಗೆ ಹೋಗುತ್ತೇವೆ. ದೀಪಾವಳಿ, ಗಣೇಶೋತ್ಸವದ ಸಂದರ್ಭದಲ್ಲಿ ಅವರೆಲ್ಲರೂ ನಮ್ಮ ಮನೆಗೆ ಬರುತ್ತಾರೆ ಎಂದು ವಿಕ್ರಾಂತ್ ಮೆಸ್ಸಿ ಹೇಳಿಕೊಂಡಿದ್ದರು. ಇನ್ನ  ಶೀತಲ್ ಠಾಕೂರ್ ಎಂಬ ಹಿಂದೂ ಯುವತಿಯನ್ನು ವಿಕ್ರಾಂತ್ ಮೆಸ್ಸಿ ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾಗಿ ನಮ್ಮ ಕುಟುಂಬ ಎಲ್ಲಾ ಧರ್ಮಗಳನ್ನು ಪಾಲಿಸುತ್ತಾ ಬಂದಿದೆ ಎಂದು ಹೇಳಿದ್ದರು.

ವಿಕ್ರಾಂತ್ ಮೆಸ್ಸಿ ಆರಂಭದಲ್ಲಿ ಲೂಟೆರ (2013), ದಿಲ್ ಧಡ್ಕನೇ ದೋ (2015) ಸಿನಿಮಾಗಳಲ್ಲಿನ ಚಿತ್ರ ಪಾತ್ರಗಳಿಗೆ ಜೀವ ತುಂಬಿದ್ದರು. 2017ರಲ್ಲಿ ಬಿಡುಗಡೆಯಾದ 'ಎ ಡೆತ್  ಇನ್ ದಿ ಗಂಜ್' ( A Death in the Gunj) ಚಿತ್ರ ವಿಕ್ರಾಂತ್ ಮೆಸ್ಸಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ನಂತರ ಬಂದ ಛಪಾಕ್ ,ಹಸೀನಾ ದಿಲ್‌ರುಬಾ,  12th ಫೇಲ್, ಸೆಕ್ಟರ್ 36 ಸಿನಿಮಾಗಳು ಹೆಸರು ತಂದುಕೊಟ್ಟವು. ಇನ್ನು ಸೂಪರ್ ಹಿಟ್ ವೆಬ್‌ಸಿರೀಸ್ ಪಟ್ಟಿಯಲ್ಲಿರೂ ಮಿರ್ಜಾಪುರದಲ್ಲಯೂ ವಿಕ್ರಾಂತ್ ಮೆಸ್ಸಿ ನಟನೆ ಎಲ್ಲರಿಗೂ ಇಷ್ಟವಾಗಿತ್ತು.

ಇದನ್ನೂ ಓದಿ: ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್

Latest Videos
Follow Us:
Download App:
  • android
  • ios