4 ಗಂಟೆ 15 ನಿಮಿಷದ ಸಿನಿಮಾ: 14 ಹೀರೋ, 10 ಹೀರೋಯಿನ್, ಆದರೂ ಫ್ಲಾಪ್?

4 ಗಂಟೆ 15 ನಿಮಿಷ ಅವಧಿಯ ಸಿನಿಮಾ 14 ನಾಯಕರು ಮತ್ತು 10 ನಾಯಕಿಯರ ದೊಡ್ಡ ತಾರಾಗಣವನ್ನು ಹೊಂದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು. 

Bollywood Longest Film LOC Kargil Flop in Box Office Collection mrq

ಮುಂಬೈ: ಎರಡು ದಶಕಗಳ ಹಿಂದೆ ಬಾಲಿವುಡ್‌ನಲ್ಲಿ 3 ಗಂಟೆಗೂ ಅಧಿಕ ಸಮಯವಿರೋ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಆದರೆ ಕಾಲನಂತರ ಬಾಲಿವುಡ್ ಸಿನಿಮಾಗಳು 2  ರಿಂದ 2.30 ಗಂಟೆಯವರೆಗೆ ಸೀಮಿತವಾಗುತ್ತಿವೆ. ಎರಡೂವರೆ ಗಂಟೆಯಲ್ಲಿಯೇ ತಮ್ಮ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ನಿರ್ದೇಶಕರು ಪ್ರಯತ್ನಿಸುತ್ತಾರೆ.  ದೀರ್ಘ ಸಮಯದವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಅಸಾಧ್ಯ ಎಂಬ ಕಾರಣಕ್ಕೆ ಚಿತ್ರದ ಅವಧಿ ಕಡಿಮೆಯಾಗುತ್ತಿದೆ. ಒಂದಿಷ್ಟು ಸಿನಿಮಾಗಳು ಕೇವಲ 2 ಗಂಟೆಗೆ ಮಾತ್ರ ಸೀಮಿತವಾಗಿವೆ.  

ಇಂದು ನಾವು ನಿಮಗೆ 4  ಗಂಟೆ 15 ನಿಮಿಷ ಹೊಂದಿದ್ದ ಅತಿ ದೊಡ್ಡ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ಈ ಸಿನಿಮಾದಲ್ಲಿ ಒಂದಲ್ಲ ಇಬ್ಬರಲ್ಲ ಬರೋಬ್ಬರಿ 14 ಹೀರೋ ಮತ್ತು 10 ನಟಿಯರು ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿತ್ತು. ಇಷ್ಟು ದೊಡ್ಡ ಸ್ಟಾರ್ ಬಳಗವನ್ನು ಹೊಂದಿದ್ದರೂ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಹಣ ಗಳಿಸುವಲ್ಲಿ ಸಂಪೂರ್ಣ ವಿಫಲವಾಯ್ತು. ಕೆಲ ವರದಿಗಳ ಪ್ರಕಾರ ನಿರ್ಮಾಪಕರಿಗೆ ಹಾಕಿದ ಬಂಡವಾಳವೂ ಬಂದಿಲ್ಲ.

ನಾವು ಹೇಳುತ್ತಿರೋದು ಬಾಲಿವುಡ್‌ನ ಎಲ್‌ಓಸಿ ಕಾರ್ಗಿಲ್ ಸಿನಿಮಾ ಬಗ್ಗೆ.  ಮಲ್ಟಿಸ್ಟಾರ್ ಹೊಂದಿದ್ದರೂ ಸಿನಿಮಾಗೆ ನಿರೀಕ್ಷಿತ ಗೆಲುವು ಸಿಗಲಿಲ್ಲ. 2003ರಲ್ಲಿ  ಬಿಡುಗಡೆಯಾದ ಈ ಸಿನಿಮಾದಲ್ಲಿ  ಅಜಯ್ ದೇವಗನ್, ಸಂಜಯ್ ದತ್, ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಮನೋಜ್ ಬಾಜ್ಪೇಯಿ, ಸುನೀಲ್ ಶೆಟ್ಟಿ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.  ಹಲವು ಸ್ಟಾರ್‌ ಕಲಾವಿದರನ್ನು ಹೊಂದಿರುವ ಕಾರಣ ಸಿನಿಮಾ ದೊಡ್ಡ ಹಿಟ್ ಕಾಣಲಿದೆ ಎಂದು ಎಲ್ಲರೂ ಅಂದಾಜಿಸಿದ್ದರು.  ಆದ್ರೆ ಸಿನಿಮಾ ಬಿಡುಗಡೆ ಬಳಿಕ ನೆಗಟಿವ್ ಅಭಿಪ್ರಾಯಗಳು ಬಂದ ಹಿನ್ನೆಲೆ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡಲಿಲ್ಲ.  

ಇದನ್ನೂ ಓದಿ: ಸೋಲಿನ ಪಟ್ಟಿಯತ್ತ ಕಂಗುವಾ; 11 ವರ್ಷದಲ್ಲಿ ಸೂರ್ಯ ನಟನೆಯ ಸೋತ ಸಿನಿಮಾಗಳ ಪಟ್ಟಿ ಇಲ್ಲಿದೆ

ಚಿತ್ರ 4 ಗಂಟೆ 15 ನಿಮಿಷ ಇರೋದರಿಂದ ಚಿತ್ರದ ಸೋಲಿಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಯ್ತು.  ಇಷ್ಟು ದೊಡ್ಡ ಸಿನಿಮಾ ಅಂತಾನೇ ಜನರು ಥಿಯೇಟರ್‌ಗೆ ಬರಲು ಹಿಂದೇಟು ಹಾಕಿದ್ರು ಎನ್ನಲಾಗಿದೆ. 

ಎಲ್‌ಓಸಿ ಕಾರ್ಗಿಲ್ ಸಿನಿಮಾ ಬರೋಬ್ಬರಿ 33 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಅಂತಿಮವಾಗಿ ನಿರ್ಮಾಪಕರ ಜೇಬಿಗೆ 31.67 ಕೋಟಿ ರೂಪಾಯಿ ಸೇರಿದ್ದು, 1.33 ಕೋಟಿ ರೂಪಾಯಿ ನಷ್ಟ  ಅನುಭವಿಸಿದ್ದಾರೆ.  ಈ ಸಿನಿಮಾ ಓಟಿಟಿ ಪ್ಲಾಟ್‌ಫಾರಂ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.  ಸಿನಿಮಾ ಬಿಡುಗಡೆಯಾಗಿ 21 ವರ್ಷ ಕಳೆದಿದ್ದು, ಕಲಾವಿದರು ಈ ಚಿತ್ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಸಿನಿಮಾ ಬಿಡುಗಡೆಯಾದ  ದಿನದಂದು ಪ್ರತಿವರ್ಷ ಚಿತ್ರದ ಕಲಾವಿದರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ  ಈ ಬಗ್ಗೆ ಪೋಸ್ಟ್  ಮಾಡಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ:ಈ ವರ್ಷ ಮಕಾಡೆ ಮಲಗಿದ 6 ಬಿಗ್ ಬಜೆಟ್ ಸಿನಿಮಾಗಳು; ಹಾಕಿದ ಹಣ ಬಂದ್ರೆ ಸಾಕು ಅಂತಿದ್ರು ನಿರ್ಮಾಪಕರು

Latest Videos
Follow Us:
Download App:
  • android
  • ios