ಬಾಲಿವುಡ್ ಪ್ರಸಿದ್ಧ ನಟ ವಿಕ್ರಮ್ ಗೋಖಲೆ ನಿಧನ ಹೊಂದಿದ್ದಾರೆ. ವಿಕ್ರಮ್ ಗೋಖಲೆ ಅವರಿಗೆ 77 ವರ್ಷ ವಯಸ್ಸಾಗಿತ್ತು.

ಬಾಲಿವುಡ್ ಪ್ರಸಿದ್ಧ ನಟ ವಿಕ್ರಮ್ ಗೋಖಲೆ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿಕ್ರಮ್ ಅವರನ್ನು ಕಳೆದ ಕೆಲವು ದಿನ ಹಿಂದೆ ಪುಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ನವೆಂಬರ್ 26) ವಿಕ್ರಮ್ ಗೋಖಲೆ ಇಹಲೋಕ ತ್ಯಜಿಸಿದರು. ವಿಕ್ರಮ್ ಗೋಖಲೆ ಅವರಿಗೆ 77 ವರ್ಷ ವಯಸ್ಸಾಗಿತ್ತು. ವಿಕ್ರಮ್ ಗೋಖಲೆ ನಿಧನದ ಸುದ್ದಿಯನ್ನು ಅವರ ಕುಟುಂಬದವರು ಅಧಿಕೃತ ಗೊಳಿಸಿದ್ದಾರೆ. ಕಳೆದ 15 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿಕ್ರಮ್ ನಿಧನದ ಸುದ್ದಿ ಅವರ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ದುಃಖ ತಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ವಿಕ್ರಮ್ ಗೋಖಲೆ ಅವರ ಪಾರ್ಥಿವ ಶರೀರವನ್ನು ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದು ಎಂದು ಕುಟಂಬದವರು ಮಾಹಿತಿ ನೀಡಿದ್ದಾರೆ. ಅವರ ಅಂತಿಮ ಸಂಸ್ಕಾರ ಇಂದು ಸಂಜೆಯೇ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ಸಂಜೆ 6 ಗಂಟೆಗೆ ಪುಣೆಯ ವೈಕುಂಠ ಸಂಶಾನ್ ಭೂಮಿಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ವಿಕ್ರಮ್ ಗೋಖಲೆ ಅವರು ಪತ್ನಿ ವೃಶಾಲಿ ಗೋಖಲೆ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

ವಿಕ್ರಮ್ ಗೋಖಲೆ 40 ವರ್ಷಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದರು. ಚಂದ್ರಕಾಂತ್ ಗೋಖಲೆಯವರ ಮಗ ವಿಕ್ರಮ್ ಗೋಖಲೆ ತಮ್ಮ ವೃತ್ತಿಜೀವನವನ್ನು 1960ರಲ್ಲಿ ಪ್ರಾರಂಭಿಸಿದರು. ಮರಾಠಿಯ ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವ ಆರಂಭಿಸಿದರು. ಬಳಿಕ ವಿಕ್ರಮ್ ಗೋಖಲೆ ಅವರು 1971ರಲ್ಲಿ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಅಮಿತಾಭ್ ಬಚ್ಚನ್ ಅವರ ಪರ್ವಾನ್ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳೆ ಪರದೆ ಮೇಲೆ ಮಿಂಚಿದರು. ರಂಗಭೂಮಿ ಕಲಾವಿದ, ನಟ ಮತ್ತು ನಿರ್ದೇಶಕರಾಗಿಯೂ ಸೇವೆ ಸಲ್ಲಸಿದ್ದಾರೆ. 2010ರಲ್ಲಿ ಮರಾಠಿಯ ಆಘಾತ್ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿಯು ಹೊರಹೊಮ್ಮಿದರು.

ಸ್ವಾತಂತ್ರ್ಯ ಪಡೆದದ್ದಲ್ಲ, ಬ್ರಿಟೀಷರು ಕೊಟ್ಟಿದ್ದು : ಕಂಗನಾ ಹೇಳಿಕೆ ಸರಿ ಎಂದ ಚಿತ್ರನಟ!

 ಹಿಂದಿ ಮತ್ತು ಮರಾಠಿ ಎರಡೂ ಸಿನಿಮಾರಂಗದಲ್ಲಿ ವಿಕ್ರಮ್ ಗೋಖಲೆ ಸಕ್ರೀಯರಾಗಿದ್ದರು. 1990ರಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದ ಅಗ್ನಿಪಥ್ ಮತ್ತು 1999ರಲ್ಲಿ ಬಂದ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಟನೆಯ ಹಮ್ ದಿಲ್ ಚುಕೆ ಸನಮ್ ಸೇರಿದಂತೆ ಅನೇಕ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ವಿಕ್ರಮ್ ನಿಕಮ್ಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

Mahesh Babu: ತಂದೆ ಸೂಪರ್ ಸ್ಟಾರ್ ಕೃಷ್ಣ ಬಗ್ಗೆ ಭಾವುಕ ಸಾಲು ಹಂಚಿಕೊಂಡ ನಟ ಮಹೇಶ್ ಬಾಬು

ಮರಾಠಿಯ 'ಅನುಮತಿ' ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದು ಬೀಗಿದರು. ಇನ್ನೂ ವಿಶೇಷ ಎಂದರೆ ಸಂಗೀತ ನಾಟಕ ಅಕಾಡೆಮಿ ಅವಾರ್ಡ್ ಅನ್ನು ನೀಡಿ ಗೌರವಿಸಲಾಗಿದೆ. ಇದು ರಂಗಭೂಮಿ ಕಲಾವಿದರಿಗೆ ಸಮರ್ಪಿತವಾದ ಶ್ರೇಷ್ಠ ಗೌರವವಾಗಿದೆ.