Asianet Suvarna News Asianet Suvarna News

ಸ್ವಾತಂತ್ರ್ಯ ಪಡೆದದ್ದಲ್ಲ, ಬ್ರಿಟೀಷರು ಕೊಟ್ಟಿದ್ದು : ಕಂಗನಾ ಹೇಳಿಕೆ ಸರಿ ಎಂದ ಚಿತ್ರನಟ!

*ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ
*ಹಲವು ರಾಜಕೀಯ ನಾಯಕರಿಂದ ಕ್ಷಮೆ ಕೇಳುವಂತೆ ಆಗ್ರಹ
*'ಹೋರಾಟಗಾರರನ್ನು ಗಲ್ಲಿಗೇರಿಸಿದಾಗ ಅನೇಕರು ಮೂಕ ಪ್ರೇಕ್ಷಕರಾಗಿದ್ದರು‌'
*ಕಂಗನಾ ಹೇಳಿಕೆ ಸರಿ ಎಂದ ಮರಾಠಿ ಚಿತ್ರ ನಟ ವಿಕ್ರಮ್ ಗೋಖಲೆ

we were given freedom I agree with Kangana Ranaut statement said Marathi Actor Vikram Gokhale mnj
Author
Bengaluru, First Published Nov 14, 2021, 9:55 PM IST
  • Facebook
  • Twitter
  • Whatsapp

ಮಹಾರಾಷ್ಟ್ರ(ನ.14): ಖ್ಯಾತ ಮರಾಠಿ (Marathi) ಚಿತ್ರನಟ ಬಾಲಿವುಡ್‌ ನಟಿ ಕಂಗನಾ ರಣಾವತ್‌ರ ಸ್ವಾತಂತ್ರ್ಯ ಕುರಿತ ಹೇಳಿಕೆ ಸರಿ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಸಿರುವ ಕಂಗನಾ ಬೆನ್ನಿಗೆ ನಿಂತಿದ್ದಾರೆ ಮರಾಠಿ ಚಿತ್ರನಟ ವಿಕ್ರಮ ಗೋಖಲೆ (Vikram Gokhale). ಪದ್ಮಶ್ರೀ ಪುರಸ್ಕೃತ  ನಟಿ ಕಂಗನಾ ರಾಣಾವತ್‌ (Kangana Ranaut) ಅವರ ‘ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ, 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ’ ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪಕ್ಷ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಕಂಗನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. .

ಪುಣೆಯಲ್ಲಿ (Pune) ನಡೆದ ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ ಗೋಖಲೆ, “ನಾನು ಕಂಗನಾ ಹೇಳಿಕೆಯನ್ನು ಒಪ್ಪುತ್ತೇನೆ. ನಮಗೆ ಸ್ವಾತಂತ್ರ್ಯ ನೀಡಲಾಯಿತು. ಸ್ವಾತಂತ್ರ್ಯ ಹೋರಾಟಗಾರರನ್ನು (Freedom Fighters) ಗಲ್ಲಿಗೇರಿಸಿದಾಗ (ಬ್ರಿಟಿಷರ ಆಳ್ವಿಕೆಯಲ್ಲಿ) ಅನೇಕ ಜನರು ಮೂಕ ಪ್ರೇಕ್ಷಕರಾಗಿದ್ದರು. ಈ ಮೂಕ ಪ್ರೇಕ್ಷಕರಲ್ಲಿ ಅನೇಕ ಹಿರಿಯ ನಾಯಕರು ಕೂಡ ಇದ್ದರು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಉಳಿಸಲಿಲ್ಲ," ಎಂದು ಗೋಖಲೆ ಹೇಳಿದರು. ಜತೆಗ ಬಿಜೆಪಿ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳು ವಿವಾದಗಳಿಂದ (Contravercy) ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

ಈವೊಂದು ವಿಷಯ ಯಾರಾದರೂ ಸ್ಪಷ್ಟಪಡಿಸಿದರೆ ಪದ್ಮಶ್ರೀ ಹಿಂದಿರುಗಿಸುತ್ತಾರಂತೆ ಕಂಗನಾ!

ತ್ರಿಪುರಾದಲ್ಲಿನ ಕೋಮುಗಲಭೆ (Tripura Ambush) ಮತ್ತು ಇದೆ ಬೆನ್ನಲ್ಲೇ ಅಮರಾವತಿ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ ಕಲ್ಲು ತೂರಾಟದ ಘಟನೆಗಳ ಬಗ್ಗೆ ಕೇಳಿದಾಗ, ಕೋಮುಗಲಭೆಗಳು ವೋಟ್ ಬ್ಯಾಂಕ್ ರಾಜಕೀಯದ ಪರಿಣಾಮವಾಗಿದೆ ಎಂದು ಹೇಳಿದರು. "ಪ್ರತಿಯೊಂದು ರಾಜಕೀಯ ಪಕ್ಷವೂ ವೋಟ್ ಬ್ಯಾಂಕ್ ರಾಜಕೀಯ (Vote Bank politics) ಆಟವಾಡುತ್ತದೆ" ಎಂದು ಅವರು ಹೇಳಿದರು. ಮಹಾರಾಷ್ಟ್ರದ ರಾಜಕೀಯ ಸನ್ನಿವೇಶದ ಕುರಿತು ಮಾತನಾಡಿದ ಗೋಖಲೆ, ದೇಶದ ಒಳಿತಿಗಾಗಿ ಮಾಜಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ಮತ್ತೆ ಒಂದಾಗಬೇಕು ಎಂದು ಹೇಳಿದರು. 

ಕಂಗನಾ ಪದ್ಮಶ್ರೀ ಹಿಂಪಡೆಯುವಂತೆ ರಾಷ್ಟ್ರಪತಿಗೆ ಮಹಿಳಾ ಆಯೋಗ ಪತ್ರ!

ದೆಹಲಿ ಮಹಿಳಾ ಆಯೋಗದ (Delhi Commission of Women ) ಅಧ್ಯಕ್ಷೆ ಸ್ವಾತಿ ಮಲಿವಾಲ್ (Swati Maliwal) ಅವರು ಭಾರತದ ಸ್ವಾತಂತ್ರ್ಯದ ಬಗ್ಗೆ ಮಾತನಡಿದ್ದ ನಟಿ ಕಂಗನಾ ರನೌತ್ ಅವರಿಗೆ ನೀಡಲಾದ ಪದ್ಮಶ್ರೀಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿರುವುದಾಗಿ ಭಾನುವಾರ ಹೇಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ  ಚಿಕಿತ್ಸೆಗೆ ಅವಶ್ಯಕತೆಯಿದೆ ಹೊರತು ಮಹಾತ್ಮ ಗಾಂಧಿ (Mahatma Gandhi) ಮತ್ತು ಭಗತ್ ಸಿಂಗ್ (Bhagat Singh) ಅವರ ತ್ಯಾಗ ಮತ್ತು ಸಾವಿರಾರು ಇತರರ ತ್ಯಾಗದ ಮೂಲಕ ಸಾಧಿಸಿದ ಸ್ವಾತಂತ್ರ್ಯವನ್ನು ಅಗೌರವಿಸಿದ್ದಕ್ಕಾಗಿ ಪ್ರಶಸ್ತಿಯಲ್ಲ ಎಂದು ಮಲಿವಾಲ್ ಹೇಳಿದ್ದಾರೆ.

Uttar Pradesh: Azamgarh ಹೆಸರು ಬದಲಾವಣೆಯತ್ತ ಯೋಗಿ ಚಿತ್ತ!

1947 ರಲ್ಲಿ ಭಾರತದ ಸ್ವಾತಂತ್ರ್ಯವು ಸ್ವಾತಂತ್ರ್ಯವಲ್ಲ ಆದರೆ "ಭಿಕ್ಷೆ"  ಮತ್ತು ರಾಷ್ಟ್ರಕ್ಕೆ "2014 ರಲ್ಲಿ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿತು" ಎಂದು ರನೌತ್ ಅವರು ಕಳೆದ ವಾರ ದೊಡ್ಡ ವಿವಾದವನ್ನು ಹುಟ್ಟುಹಾಕಿದರು. 1857 ರ ದಂಗೆ, ಖಿಲಾಫತ್ ಚಳವಳಿ, ಚಂಪಾರಣ್ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ದೇಶದ ಸ್ವಾತಂತ್ರ್ಯ ಹೋರಾಟದ ಹಲವಾರು ಅಧ್ಯಾಯಗಳನ್ನು ನೆನಪಿಸಿಕೊಂಡ ಮಲಿವಾಲ್, ಬಾಲಿವುಡ್ ನಟಿಗೆ ಇನ್ನೂ ಅನೇಕ ಐತಿಹಾಸಿಕ ಘಟನೆಗಳ ತಿಳಿವಳಿಕೆ ಇಲ್ಲ ಎಂದು  ಹೇಳಿದ್ದಾರೆ. "ಬ್ರಿಟಿಷ್ ಆಳ್ವಿಕೆ ಮತ್ತು ನಂತರದ ಹತ್ಯಾಕಾಂಡವನ್ನು ಪ್ರತಿಭಟಿಸಲು ಜಲಿಯನ್ ವಾಲಾಬಾಗ್‌ನಲ್ಲಿ (Jallianwala Bagh massacre) ನೆರೆದಿದ್ದ ಸಾವಿರಾರು ಜನರನ್ನು ನಾವು ಹೇಗೆ ಮರೆಯಲು ಸಾಧ್ಯ? ನಮ್ಮ ಇತಿಹಾಸದಲ್ಲಿ ಆ ಅಧ್ಯಾಯಗಳು ಭಿಕ್ಷೆಯೇ?" ಎಂದು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ಮಲಿವಾಲ್ ಉಲ್ಲೇಖಿಸಿದ್ದಾರೆ.

Follow Us:
Download App:
  • android
  • ios