ಚಿತ್ರತಂಡದ ಯುವತಿ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಅರೆಸ್ಟ್ ಆಗಿದ್ದ ಬಾಲಿವುಡ್ ನಟನಿಗೆ ಬೇಲ್ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಗೋಂಡಿಯಾ ಜಿಲ್ಲೆಯಲ್ಲಿ ಅರೆಸ್ಟ್ ಆದ ನಟ ವಿಜಯ್ ರಾಝ್ ವಿರುದ್ಧ ಸಿನಿಮಾ ತಂಡದ ಯುವತಿ ಮೇಲೆ ದೌರ್ಜನ್ಯ ಮಾಡಿದ ಆರೋಪವಿತ್ತು.

ಯುವತಿ ಸೋಮವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಶೇರ್ನಿ ಸಿನಿಮಾ ಶೂಟಿಂಗ್ ಮಧ್ಯೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಯುವತಿ ಆರೋಪಿಸಿದ್ದರು.

ಇನ್‌ಸ್ಟಾಗ್ರಾಂನಲ್ಲಿ ಅತ್ಯಧಿಕ ಫಾಲೋವರ್ಸ್ ಇರೋ ಭಾರತದ ಸೆಲೆಬ್ರಟಿಗಳಿವರು

ಐಪಿಸಿ 354ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಗೋಡಿಯಾದಲ್ಲಿ ಹೋಟೆಲ್‌ನಲ್ಲಿ ತಂಗಿದ್ದ ನಟನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ಜಾಮೀನು ಸಿಕ್ಕಿದೆ