Asianet Suvarna News Asianet Suvarna News

ಮದುವೆಗೂ ಮುನ್ನವೇ ಇದೇ ಮಗು ಬೇಕು ಎಂದಿದ್ದ ವರುಣ್​ ಧವನ್​: ಅಪ್ಪ-ಅಮ್ಮನಾದ ಸೆಲೆಬ್ರಿಟಿ ಸ್ಟಾರ್ಸ್​!

ಮದುವೆಗೂ ಮುನ್ನವೇ ತಮಗೆ ಇಂಥದ್ದೇ ಮಗು ಬೇಕು ಎಂದಿದ್ದರು ಬಾಲಿವುಡ್​ ನಟ ವರುಣ್​ ಧವನ್​. ಅವರ ಆಸೆ ಈಗ ಇಡೇರಿದ್ದು, ಮಗುವಿನ ಜನನವಾಗಿದೆ. 
 

Actor Varun Dhawan and Natasha Dalal Welcome Baby Girl Father David Dhawan Confirms suc
Author
First Published Jun 4, 2024, 11:35 AM IST

ಬಾಲಿವುಡ್​ನ ಸೆಲೆಬ್ರಿಟಿ ಜೋಡಿ ವರುಣ್ ಧವನ್ ಹಾಗೂ ನತಾಶಾ ದಲಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರದಿಯ ಪ್ರಕಾರ ನಿನ್ನೆ ಅಂದರೆ ಮೇ 3ರಂದು ಇವರಿಗೆ ಹೆಣ್ಣು ಮಗು ಜನಿಸಿದೆ. ಕೆಲ ವರ್ಷಗಳ ಹಿಂದೆ ನಿರ್ಮಾಪಕ ಕರಣ್ ಜೋಹರ್ ಅವರ ಚಾಟ್ ಷೋನಲ್ಲಿ ವರುಣ್​ ಧವನ್​ ಮತ್ತು ಶಾಹಿದ್​ ಕಪೂರ್​ ಕಾಣಿಸಿಕೊಂಡಿದ್ದರು. ಆಗಿನ್ನೂ ವರುಣ್​ ಅವರಿಗೆ ಮದುವೆಯಾಗಿರಲಿಲ್ಲ. ಕರಣ್​ ಅವರು ಶಾಹಿದ್​ ಅವರಲ್ಲಿ ಇರುವುದು ನಿಮ್ಮಲ್ಲಿ ಏನು ಇಲ್ಲ ಎಂದು ಪ್ರಶ್ನಿಸಿದ್ದರು. ಆಗ ವರುಣ್​ ಅವರು ಕೂಡಲೇ ಅವರ ಬಳಿ ಮಗಳು ಇದ್ದಾಳೆ. ಆದರೆ ಅವರ ಮಗಳ ನನಗೆ ಬೇಡ. ನನಗೆ ನನ್ನದೇ ಆದ ಮಗಳು ಬೇಕು ಎಂದಿದ್ದರು. ಈ ಮೂಲಕ ತಮಗೆ ಪುತ್ರಿಯೇ ಆಗಬೇಕೆಂದು ಹೇಳಿದ್ದರು. ಆ ಆಸೆ ಕೊನೆಗೂ ಈಡೇರಿದೆ. 
 
ವರುಣ್ ಧವನ್ ತಂದೆ ಡೇವಿಡ್ ಧವನ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು. ವರುಣ್​ಗೆ ಹೆಣ್ಣು ಮಗುವಾಗಿದೆಯೇ ಎಂದು ಪ್ರಶ್ನಿಸಿದಾಗ ಅವರು ಹೌದು ಎಂದು ಹೇಳಿದ್ದಾರೆ. ಈ ಮೂಲಕ ಮಗು ಜನನವಾಗಿರುವುದು ಬೆಳಕಿಗೆ ಬಂದಿದೆ.  ನತಾಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಈ ಮೊದಲು ವರದಿ ಆಗಿತ್ತು. ಅವರಿಗೆ ಇದೇ ವಾರ ಮಗು ಜನಿಸಲಿದೆ ಎನ್ನಲಾಗಿತ್ತು. ಪತ್ನಿಯನ್ನು ನೋಡಿಕೊಳ್ಳಲು  ವರುಣ್ ಧವನ್  ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿದ್ದಾರೆ ಎನ್ನಲಾಗಿತ್ತು. ಇದೀಗ ವರದಿ ನಿಜವಾಗಿದ್ದು, ಮಗಳ ಆಗಮನವಾಗಿದೆ ಎನ್ನಲಾಗಿದೆ.

ರೊಮಾನ್ಸ್​ ವಿಷ್ಯದಲ್ಲಿ ಮೂರೂ ಬಿಟ್ಟವರಾ ಬಾಲಿವುಡ್​​ ನಟರು? ವಿಜಯ್​ ಸೇತುಪತಿ ಹೇಳಿಕೆಯಿಂದ ಭಾರಿ ಚರ್ಚೆ
 
  ಎಲ್ಲರಿಗೂ ತಿಳಿದಿರುವಂತೆ ವರುಣ್ ಧವನ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್​ ಸ್ಟಾರ್​ಗಳಲ್ಲಿ ಒಬ್ಬರು. ಫ್ಯಾಷನ್ ಡಿಸೈನರ್ ಆಗಿರುವ ನತಾಶಾ ದಲಾಲ್ ಜೊತೆ 2021ರಲ್ಲಿ ಅಲಿಭಾಗ್​ನಲ್ಲಿ ಮದುವೆ ನೆರವೇರಿತ್ತು.  ಕಳೆದ ಫೆಬ್ರವರಿ 18ರಂದು ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದರು. ನತಾಶಾ ಅವರ ಬೇಬಿ ಬಂಪ್‌ಗೆ ಮುತ್ತು ಕೊಡುವ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡುವ ಮೂಲಕ ವರುಣ್ ಧವನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.   
 
ದಂಪತಿಯ ಮೊದಲ ಮಗುವಿನ ಆಗಮನದ ಸುದ್ದಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಸಂತಸವನ್ನು ಹೊರಹಾಕಿದೆ. ದಂಪತಿಗಳು ಅಧಿಕೃತ ಹೇಳಿಕೆಯನ್ನು ನೀಡದಿದ್ದರೂ, ನತಾಶಾ ಮತ್ತು ಮಗು ಆರೋಗ್ಯವಾಗಿದ್ದಾರೆ  ಎಂದು ಕುಟುಂಬದ ನಿಕಟ ಮೂಲಗಳು ಖಚಿತಪಡಿಸಿವೆ. ಸದ್ಯ ವರುಣ್ ಧವನ್ ಅವರು ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ. ಕಲೀಶ್ವರನ್ ಅವರು ಇದನ್ನು ನಿರ್ದೇಶಿಸುತ್ತಿದ್ದ, ಮುರದ್ ಖೇತಾನಿ ಇದನ್ನು ನಿರ್ಮಿಸುತ್ತಿದ್ದಾರೆ. ಪ್ರಿಯಾ ಅಟ್ಲೀ ಹಾಗೂ ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಮೀ ಟು ಅಭಿಯಾನದಿಂದ ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಬದಲಾವಣೆ: ಶ್ರುತಿ ಹರಿಹರನ್​ ಓಪನ್​ ಮಾತು​...

 

Latest Videos
Follow Us:
Download App:
  • android
  • ios