Asianet Suvarna News Asianet Suvarna News

ಚೇತರಿಸಿಕೊಂಡು ಮನೆಗೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್‌

* ಆಸ್ಪತ್ರೆಯಿಂದ ಮನೆಗೆ ಮರಳಿದ ರಜನೀಕಾಂತ್
* ನಿಯಮಿತ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು
* ಇತ್ತೀಚೆಗಷ್ಟೇ  ರಜನಿ ಸಣ್ಣ ಶಸ್ತ್ರಚಿಕಿತ್ಸೆ  ಒಂದಕ್ಕೆ ಒಳಗಾಗಿದ್ದರು
* ದಾದಾಸಾಹೇಬ್ ಗೌರವಕ್ಕೆ ಪಾತ್ರವಾಗಿದ್ದ ರಜನಿ

Actor Super Star Rajinikanth Discharged From Chennai Hospital mah
Author
Bengaluru, First Published Nov 1, 2021, 2:15 AM IST

ಚೆನ್ನೈ(. 01) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ

ಅಕ್ಟೋಬರ್‌ 28ರಂದು ನಿಯಮಿತ ಆರೋಗ್ಯ ತಪಾಸಣೆಗಾಗಿ (Chennai Hospital) ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎದೆಯ ಭಾಗದಲ್ಲಿ ನೋವು ಮತ್ತು ಸುಸ್ತು ಕಾಣಿಸಿಕೊಂಡ ಪರಿಣಾಮ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಇತ್ತೀಚೆಗಷ್ಟೇ  ರಜನಿ ಸಣ್ಣ ಶಸ್ತ್ರಚಿಕಿತ್ಸೆ  ಒಂದಕ್ಕೆ ಒಳಗಾಗಿದ್ದರು.  ಬಳಿಕ ಸೂಪರ್‌ಸ್ಟಾರ್‌ ರಜನಿಕಾಂತ್‌ ಚೇತರಿಸಿಕೊಂಡಿದ್ದರು. ಆದರೆ ನಿಯಮಿತ ತಪಾಸೆಣೆಗೆಂದು ಬಂದಾಗ ಆಸ್ಪತ್ರೆಗೆ ದಾಖಲಾಗಿದ್ದರು.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರು ರಜನಿಕಾಂತ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.  ಆತಂಕ ಪಡುವ ಯಾವ ಅಗತ್ಯವೂ ಇಲ್ಲ  ಎಂದು ವೈದ್ಯರು ತಿಳಿಸಿದ್ದರು.  67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಜನಿಕಾಂತ್‌ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕಾರದ ಗೌರವ ನೀಡಲಾಗಿತ್ತು. 

ಮಹೋನ್ನತ ಗೌರವಕ್ಕೆ ಪಾತ್ರವಾದ ರಜನಿಕಾಂತ್
 
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ಘೋಷಿಸಿದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೂಪರ್ ಸ್ಟಾರ್(Superstar) ರಜನಿಕಾಂತ್(Rajinikanth) ಮುಡಿಗೇರಿದೆ. ಕನ್ನಡ ಮಣ್ಣಿನ ಮಗ ರಜನಿಕಾಂತ್  ಸೂಪರ್ ಸ್ಟಾರ್ ಆಗಿದ್ದು ತಮಿಳು(Tamil) ನೆಲದಲ್ಲಿ. ಆದ್ರೆ ಇಂದಿಗೂ ಸೂಪರ್ ಸ್ಟಾರ್  ಕನ್ನಡ, ಕನ್ನಡಿಗರ ಮೇಲಿನ ಪ್ರೀತಿ ಹೆಚ್ಚಿದೆ ಅನ್ನೋದಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಾಗ ರಜನಿ ಕಾಂತ್ ಆಡಿದ ಮಾತೆ ಸಾಕ್ಷಿಯಾಗಿತ್ತು.

ಸೂಪರ್ ಸ್ಟಾರ್ ಈ ಪ್ರಶಸ್ತಿಯನ್ನ ತಮ್ಮ ಸಿನಿಮಾ ಗುರುಗಳಾದ ಖ್ಯಾತ ನಿರ್ದೇಶಕ ದಿ. ಕೆ ಬಾಲಚಂದರ್ ಅವರಿಗೆ ಅರ್ಪಿಸಿದ್ದರು. ಅಷ್ಟೆ ಅಲ್ಲ ಇದರ ಜೊತೆ ಬೆಂಗಳೂರಿನಲ್ಲಿ ಬಿಟಿಎಸ್ ಸಾರಿಗೆ ಸಂಸ್ತೆ ಇದ್ದಾಗ ಸಿನಿಮಾ ಹೀರೋ ಅಲ್ಲದ ರಜನಿಕಾಂತ್ ಬೆಂಗಳೂರು ನಿರ್ವಾಹಕರಾಗಿ ಆಗಿ ಕೆಲಸ ಮಾಡುತ್ತಿದ್ರು. ಆಗ ನೀನು ಸಿನಿಮಾ ನಟ ಆಗಬೇಕು ಅಂತ ರಜನಿಗೆ ಬೆನ್ನೆಲುಬಾಗಿ ನಿಂತಿದ್ದ ಬಿಟಿಎಸ್ ಬಸ್ ಟ್ರೈವರ್ ಆಗಿದ್ದ ಸಹೋದ್ಯೋಗಿ ಮತ್ತು ಸ್ನೇಹಿತ ರಾಜ್ ಬಹದ್ದೂರ್ ಗೆ ರಜನಿಕಾಂತ್ ಪ್ರಶಸ್ತಿ ಅರ್ಪಿಸಿದ್ದರು. 

 

Follow Us:
Download App:
  • android
  • ios