Asianet Suvarna News Asianet Suvarna News

2 ಕಾರಣಕ್ಕೆ ಸೋಮವಾರ ರಜನಿಕಾಂತ್‌ಗೆ ವಿಶೇಷ: ಫಾಲ್ಕೆ ಪ್ರಶಸ್ತಿ ಸ್ವೀಕಾರ, ಮತ್ತೊಂದು?

ಇಂದು ದಾದಾ ಸಾಹೇಬ್ ಫಾಲ್ಕೇ ಪ್ರಶಸ್ತಿ ಸ್ವೀಕರಿಸುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿ ಟ್ಟೀಟ್ ಮಾಡಿದ ತಲೈವಾ ರಜನಿಕಾಂತ್.

Thalaiva Tamil Rajinikanth express gratitude for Dadasaheb Phalke honor announce daughter app launch  vcs
Author
Bangalore, First Published Oct 25, 2021, 9:43 AM IST

ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ರಂಗದವರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke award).51ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಏಪ್ರಿಲ್ (April) ತಿಂಗಳಲ್ಲಿ ಪ್ರಕಟವಾಗಿದ್ದು, ದಕ್ಷಿಣ ಭಾರತೀಯ ಸೂಪರ್ ಸ್ಟಾರ್ ರಜನಿಕಾಂತ್‌ (Rajinikanth) ಅವರಿಗೆ ಈ ಬಾರಿ ಪ್ರಶಸ್ತಿ ಒಲಿದು ಬಂದಿದೆ. ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಪ್ರಕಾಶ್ ಜಾವಡೇಕರ್ ಟ್ಟೀಟ್ ಮಾಡಿದ್ದರು. 

ನಿನ್ನೆ ಟ್ಟಿಟರ್ (Twitter) ಖಾತೆಯಲ್ಲಿ ಈ ಸಂತೋಷ ಹಂಚಿಕೊಂಡು ಪೋಸ್ ಮಾಡಿರುವ ರಜನಿಕಾಂತ್ ಅವರು, 'ನಾಳೆ ಎರಡು ಪ್ರಮುಖ ಕಾರಣಗಳಿಗೆ ನನಗೆ ತುಂಬಾ ವಿಶೇಷವಾದ ದಿನ. ಒಂದು Government of India ನನಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿದೆ. ಇದಕ್ಕೆ ಕಾರಣವೇ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹ. ಎರಡನೇ ವಿಚಾರ, ನನ್ನ ಎರಡನೇ ಪುತ್ರಿ ಸೌಂದರ್ಯ (Soundarya). ಆಕೆಯ ಸ್ವ ಶ್ರಮದಿಂದಲೇ ಜನರಿಗೆ ಉಪಯೋಗ ಆಗುವ ಆ್ಯಪ್ ಬಿಡುಗಡೆ ಮಾಡುತ್ತಿದ್ದಾರೆ. ಅದುವೇ  HOOTE ಎಂದು. ಭಾರತದಿಂದ ಇಡೀ ವಿಶ್ವಕ್ಕೇ ಈ ಆ್ಯಪ್ ಲಾಂಚ್ ಮಾಡುತ್ತಿದ್ದಾಳೆ. ತಮ್ಮ ಧ್ವನಿ (Voice) ಮೂಲಕ ಜನರು ಅವರ ಆಲೋಚನೆ, ಶುಭಾಶಯ, ಐಡಿಯಾಗಳನ್ನು ಹಂಚಿಕೊಳ್ಳಬಹುದು. ನಿಮಗೆ ಬೇಕಾದ ಭಾಷೆಯಲ್ಲಿ ಹೇಗೆ ಬರೆಯುತ್ತೀರೋ ಹಾಗೆ ಇಲ್ಲಿ ಬೇಕಾದ ಭಾಷೆಯಲ್ಲಿ ಮಾತನಾಡಬಹುದು.  ಈ ಹೊಸ ಇನೋವೇಶನ್‌ (Innovation) ಬಿಡುಗಡೆ ಮಾಡುವುದಕ್ಕೆ ಖುಷಿಯಾಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ. 

Thalaiva Tamil Rajinikanth express gratitude for Dadasaheb Phalke honor announce daughter app launch  vcs

'ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ನಟ ರಜನಿಕಾಂತ್ ಜಿ ಅವರಿಗೆ 2020ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ್ನು ಘೋಷಿಸುವುದಕ್ಕೆ ಸಂತೋಷವಾಗುತ್ತಿದೆ. ನಟ, ನಿರ್ದೇಶ, ನಿರ್ಮಾಪಕ ಅವರ ಕೊಡುಗೆ ಅಪ್ರತಿಮವಾಗಿದೆ', ಎಂದು ಜಾವಡೇಕರ್ (Prakash Javadekar)ಟ್ಟೀಟ್ ಮಾಡಿದ್ದರು. 

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆವಾಗ ಹಸಿರು ಸೀರೆಯಲ್ಲಿ ನೋರಾ

ಈ ಅತ್ಯುನ್ನತ ಪ್ರಶಸ್ತಿಗೆ ನಮ್ಮ ಕನ್ನಡದ ವರನಟ ಡಾ.ರಾಜ್‌ಕುಮಾರ್ ಸೇರಿದಂತೆ ಅಮಿತಾಭ್ ಬಚ್ಚನ್, ವಿನೋದ್ ಕನ್ನಾ, ಕಾಶಿನಾಥುನಿ ವಿಶ್ವನಾಥ, ಮನೋಜ್ ಕುಮಾರ್. ಶಶಿ ಕಪೂರ್, ಗುಲ್ಜಾರ್, ಪ್ರಾಣ್ ಸೇರಿದಂತೆ ಹಲವು ನಟರು ಪಡೆದುಕೊಂಡಿದ್ದಾರೆ. ಈ ವರ್ಷ ತಲೈವಾ ಅವರಿಗೆ ಸಿಕ್ಕಿರುವುದಕ್ಕೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಸಂಭ್ರಮಿಸುತ್ತಿದೆ. 

ಚಿತ್ರಗಳ: ಹೊಸ ಅವಾತಾರದಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸ್ವೀಕರಿಸಿದ ಕಿಚ್ಚ..!

ದಾದಾ ಸಾಹೇಖ್ ಫಾಲ್ಕೆ ಪ್ರಶಸ್ತಿ ಹೊರತು ಪಡಿಸಿದರೆ ರಜನಿಕಾಂತ್ ತಮಿಳು ನಾಡು ಸರ್ಕಾರ ನೀಡುವ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ನೀಡಿದೆ. 2000ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯೂ ಒಲಿದಿತ್ತು. 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 45ನೇ ಆವೃತ್ತಿಯಲ್ಲಿ ವರ್ಷದ ಭಾರತೀಯ ಚಲನಚಿತ್ರ ರಂಗದಲ್ಲಿ ವೈಯಕ್ತಿಕ ಸಾಧನೆಗಾಗಿ ರಜನಿಕಾಂತ್ ಅವರಿಗೆ ಶತಮಾನೋತ್ಸವ ಪ್ರಶಸ್ತಿ ನೀಡಲಾಯಿತು.

ದಾದಾ ಸಾಹೇಬ್ ಪ್ರಶಸ್ತಿ ಪಡೆದಿರುವ ನಟ,ನಟಿಯರ ಪಟ್ಟಿ:

2018ರಲ್ಲಿ ಅಮಿತಾಭ ಬಚ್ಚನ್ (ಹಿಂದಿ)
2017ರಲ್ಲಿ ವಿನೋದ್ ಖನ್ನಾ (ಹಿಂದಿ)
2016ರಲ್ಲಿ ಕಾಶಿನಾಥುನಿ ವಿಶ್ವನಾಥ (ತೆಲುಗು)
2015ರಲ್ಲಿ ಮನೋಜ್ ಕುಮಾರ್ (ಹಿಂದಿ)
2014ರಲ್ಲಿ ಶಶಿ ಕಪೂರ್ (ಹಿಂದಿ)
2013ರಲ್ಲಿ ಗುಲ್ಜಾರ್ (ಹಿಂದಿ)
2012ರಲ್ಲಿ ಪ್ರಾಣ್ (ಹಿಂದಿ)
1995ರಲ್ಲಿ ಡಾ.ರಾಜ್‌ಕುಮಾರ್ (ಕನ್ನಡ)

"

Follow Us:
Download App:
  • android
  • ios