ಹಣೆಬರಹ ನಂಬಿ ಬಾಳಬೇಡಿ; ಮಂಗಳೂರು ವಿದ್ಯಾರ್ಥಿಗಳ ಜೊತೆ ಸೋನು ಸೂದ್ ಸಂವಾದ
ಬಾಲಿವುಡ್ ನಟ, ನಿರ್ಮಾಪಕ, ಮಾಡೆಲ್, ರಿಯಲ್ ಹೀರೋ ಸೋನು ಸೂದ್ (Sonu Sood) ಉಲ್ಲಾಳದ ಮುಡಿಪುವಿನಲ್ಲಿರುವ (Ullal Mudipu) ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರಿಗೆ (Pragna skin centre) ಭೇಟಿ ನಿನ್ನೆ ಬುಧವಾರ (ಜುಲೈ 6) ಭೇಟಿ ನೀಡಿದ್ದರು. ಅಲ್ಲಿನ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದರು.
ಬಾಲಿವುಡ್ ನಟ, ನಿರ್ಮಾಪಕ, ಮಾಡೆಲ್, ರಿಯಲ್ ಹೀರೋ ಸೋನು ಸೂದ್ (Sonu Sood) ಉಲ್ಲಾಳದ ಮುಡಿಪುವಿನಲ್ಲಿರುವ (Ullal Mudipu) ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರಿಗೆ (Pragna skin centre) ಭೇಟಿ ನಿನ್ನೆ ಬುಧವಾರ (ಜುಲೈ 6) ಭೇಟಿ ನೀಡಿದ್ದರು. ಅಲ್ಲಿನ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದರು. ಅಲ್ಲಿ ಮಾತನಾಡಿದ ಸೋನು ಸೋದ್, 'ತಾಯಿ ತವರೂರು ಪಂಜಾಬ್ ಹೋಗುವಾಗ ತಂದೆ ಜತೆಗೂಡಿ ನೊಂದವರಿಗೆ ಆಹಾರವನ್ನು ಒದಗಿಸುತ್ತಿದ್ದೆವು. ಈ ವೇಳೆ ಅವರ ಮುಖದಲ್ಲಿನ ಮಂದಹಾಸ ಬಹಳಷ್ಟು ಸಂತಸವನ್ನು ಕೊಡುತಿತ್ತು' ಎಂದರು.
'ಅಶಕ್ತ ವಿದ್ಯಾರ್ಥಿಗಳಿಗೂ ಸಹಕಾರವನ್ನು ಹೆತ್ತವರು ಮಾಡಿದ್ದರು. ತಾಯಿ ನಡೆಸಿದ ಸೇವೆಯ ಫಲವಾಗಿ ಅಂದು ಸಹಕಾರ ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದುಕೊಂಡು ನಮ್ಮನ್ನು ಗುರುತಿಸುತ್ತಾರೆ. ತಾಯಿ ಜೊತೆಗೆ ಅಶಕ್ತ ವಿದ್ಯಾರ್ಥಿಗಳೇ ನನಗೆ ಸ್ಫೂರ್ತಿಯಾಗಿದ್ದುಕೊಂಡು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ' ಎಂದು ಸೋನು ಸೂದ್ ಹೇಳಿದರು.
'ಕೈ ಮುಷ್ಠಿ ತೆರೆದರೆ ಇನ್ನೊಬ್ಬರಿಗೆ ಸಹಕಾರವಾಗುವಂತೆ ಇರಬೇಕೇ ಹೊರತು ಯಾರಿಗೂ ತೊಂದರೆಯಾಗಬಾರದು ಎಂದು ತಾಯಿ ಹೇಳಿದ ಮಾತುಗಳು ಇನ್ನೂ ಮನದಲ್ಲಿದೆ. ಹಣೆಬರಹವನ್ನು ನಂಬಿಕೊಂಡು ಬಾಳಬೇಡಿ. ಕಷ್ಟಪಟ್ಟು ಕೆಲಸ ಮಾಡಿ ಸಂಸ್ಥೆಯಿಂದ ಪಡೆದ ತರಬೇತಿಯೊಂದಿಗೆ ಹತ್ತು ಪಟ್ಟು ಕೌಶಲ್ಯವನ್ನು ತಾವಾಗಿಯೇ ಬೆಳೆಸಿ ಮುಂದುವರಿಯಬೇಕು. ಕೌಶಲ್ಯಾಭಿವೃದ್ಧಿ ತರಬೇತಿಯಿಂದ ಭವಿಷ್ಯದಲ್ಲಿ ಸ್ವಂತ ಕಾಲಿನಲ್ಲಿ ಎಲ್ಲರೂ ನಿಲ್ಲುವಂತಾಗಬಹುದು. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡಿ ಸಹಕರಿಸಲಿದ್ದೇನೆ. ತನ್ನ ಚಾರಿಟಿಯ ಭಾಗವಾಗಿ ಮಂಗಳೂರಿಗೆ ಹೆಚ್ಚಿನ ಒತ್ತು ನೀಡಿದ್ದು, ಆಕ್ಸಿಜನ್ ಪ್ಲಾಂಟ್ ಈಗಾಗಲೇ ಕೊಡುಗೆಯಾಗಿ ನೀಡಿದ್ದೇನೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ವಿದ್ಯಾರ್ಥಿಗಳನ್ನು ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ತರಬೇತುದಾರರಿದ್ದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ' ತಿಳಿಸಿದರು.
4 ಕೈಕಾಲಿದ್ದ ಮಗುವಿನ ಚಿಕಿತ್ಸೆಗೆ ನೆರವಾದ ಸೋನು ಸೂದ್: ರಿಯಲ್ ಹೀರೋ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರ
ಪ್ರಜ್ಞಾ ಒಕೇಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಡಿನೇಟರ್ ದೀಪ್ತಿ ಮಾತನಾಡಿ, ಜರ್ಮನಿಯ ಕೆಕೆಎಸ್ ಫಂಡಿಂಗ್ ನಡಿ ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರ್ ಅತಿ ಕಡಿಮೆ ದರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳಾದ ಟೈಲರಿಂಗ್, ಡ್ರೈವಿಂಗ್, ಕಂಪ್ಯೂಟರ್, ತರಬೇತಿಯನ್ನು ನೀಡುತ್ತಿದೆ. ತರಬೇತಿ ಜೊತೆಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಇಂಗ್ಲೀಷ್ ಭಾಷಾ ತರಬೇತಿ, ಜೀವನದ ಕೌಶಲ್ಯವನ್ನು ಹೇಳಿಕೊಡಲಾಗುತ್ತಿದೆ. ಎಲ್ಲರ ಮುಂದೆ ಮಾತನಾಡುವಂತೆ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ.
ಇದನ್ನು ಸ್ಥಾಪಿಸಿದ ಹಿಲ್ಡಾ ರಾಯಪ್ಪ ಅವರ ಕುರಿತು ತಿಳಿದುಕೊಂಡು ನಟ ಸೋನು ಸೂದ್ ಭೇಟಿ ನೀಡಿದ್ದಾರೆ. ಹೆಚ್ಚಾಗಿ ಡ್ರಾಪ್ ಔಟ್ಸ್ ವಿದ್ಯಾರ್ಥಿಗಳೇ ಇದದು, ಅವರ ಆರ್ಥಿಕ ಬಲವನ್ನು ವೃದ್ಧಿಸುವ ಉದ್ದೇಶದಿಂದಲೇ ತರಬೇತಿಯನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದೆ.
ಸಹಾಯ ಮಾಡಲು ಹಣ ಎಲ್ಲಿಂದ ಬರುತ್ತೆ ಎಂದು ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿದ ನಟ ಸೋನು ಸೂದ್
ಪ್ರಜ್ಞಾ ಸ್ಕಿಲ್ ಟ್ರೈನಿಂಗ್ ಸೆಂಟರಿಗೆ ಕಾಮಗಾರಿ ನಿರತ ಕಟ್ಟಡವನ್ನು ನಟ ಸೋನು ಸೂದ್ ವೀಕ್ಷಿಸಿ, ತರಬೇತುದಾರರಿಂದ ಮಾಹಿತಿ ಪಡೆದರು. ಅಲ್ಲದೆ ವಿದ್ಯಾರ್ಥಿಗಳ ಜೊತೆಗೆ ತಾವಾಗಿಯೇ ಸೆಲ್ಫೀಯನ್ನು ಕ್ಲಿಕ್ಕಿಸಿ, ಸಮೂಹ ಭಾವಚಿತ್ರವನ್ನು ತೆಗೆಸಿಕೊಂಡರು.