ನಟ ಸಿದ್ಧಾರ್ಥ್ ಹೇಳಿಕೆ: ನಾನು ಬೆತ್ತಲೆ ಆಗಿದ್ದಾಗ ನರ್ಸ್‌ಗಳು, ವೈದ್ಯರು ಫೋಟೋ, ವಿಡಿಯೋ ಮಾಡಿಕೊಂಡಿದ್ರು..!
'ನೀವು ಕಲಾವಿದರು, ನೀವು ಎಲ್ಲಿ ಹೇಗೇ ಇದ್ದರೂ ಜನರೊಟ್ಟಿಗೆ ಬೆರೆಯಬೇಕು; ಫೋಟೋ ತೆಗಿಸಿಕೊಳ್ಳಬೇಕು ಎಂದು ಕೆಲವರು ಉಪದೇಶ ಮಾಡುತ್ತಾರೆ. ಆದರೆ ಅದು ತಪ್ಪ ಅಭಿಪ್ರಾಯ ಎಂಬುದು ನನ್ನ ಭಾವನೆ. ಇಂತಹ ಫೋಟೋಗಳನ್ನೆಲ್ಲ ಬಳಸಿಕೊಂಡು ಕೆಲವರು ಬ್ಯುಸಿನೆಸ್ ಮಾಡುತ್ತಾರೆ.
ತಮಿಳು ನಟ ಸಿದ್ಧಾರ್ಥ ತಮ್ಮ ಚಿಕ್ಕು ಚಿತ್ರದ ಪ್ರಮೋಶನ್ ನಡೆಸುತ್ತಿದ್ದು, ಇಡೀ ಸೌತ್ ಇಂಡಿಯಾ ಮೇನ್ ಸಿಟಿಗಳನ್ನು ಸುತ್ತಾಡುತ್ತಿದ್ದಾರೆ. ಕಳೆದ ತಿಂಗಳು ಚಿಕ್ಕು ಚಿತ್ರದ ಪ್ರಚಾರಕ್ಕೆ ಮಲ್ಲೇಶ್ವರಂನಲ್ಲಿ ನಟ ಸಿದ್ಧಾರ್ಥ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಆ ವೇಳೆ ಕರ್ನಾಟಕ ಬಂದ್ ನಡೆಯುತ್ತಿತ್ತು. ಈ ಕಾರಣಕ್ಕೆ ಕೋಪಗೊಂಡ ಕನ್ನಡಪರ ಸಂಘಟನೆಗಳು ಸಿದ್ಧಾರ್ಥ್ ಪ್ರೆಸ್‌ಮೀಟ್ ನಿಲ್ಲಿಸಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.
ಇತ್ತೀಚೆಗೆ ಹೈದರಾಬಾದ್‌ಗೆ ಹೋಗಿದ್ದ ನಟ ಸಿದ್ಧಾರ್ಥ ತಮ್ಮ 'ಚಿಕ್ಕು' ಚಿತ್ರದ ಪತ್ರಿಕಾಗೋಷ್ಠಿ ವೇಳೆ, ತಮ್ಮ ಜೀವನದಲ್ಲಿ ನಡೆದಿದ್ದ ಹಳೆಯ ಘಟನೆಯೊಂದನ್ನು ಹೇಳಿದ್ದಾರೆ. "ನಾನು ಆಸ್ಪತ್ರೆಯಲ್ಲಿ ಎಕ್ಸರೇಗಾಗಿ ಬೆತ್ತಲಾಗಿದ್ದಾಗ ಆ ಸಮಯದಲ್ಲಿ ಆಸ್ಪತ್ರೆ ವೈದ್ಯರು, ನರ್ಸ್‌ಗಳು ನನ್ನ ಫೋಟೋ ತೆಗೆದುಕೊಂಡಿದ್ದಾರೆ. ಸರ್ ಒಂದು ಫೋಟೋ ಪ್ಲೀಸ್ ಅಂತ ಬರುತ್ತಾರೆ. ನಾನು ಬಟ್ಟೆ ಬಿಚ್ಚಿಟ್ಟು ಎಕ್ಸರೆ ತೆಗೆಸುತ್ತಿದ್ದರೆ ಅಲ್ಲಿರುವವರೇ ನನ್ನ ಬೆತ್ತಲೇ ಫೋಟೋ ತೆಗೆದುಕೊಂಡಿದ್ದಾರೆ. ನರ್ಸ್‌ಗಳೂ ಕೂಡ ವಿಡಿಯೋ ಮಾಡಿಕೊಂಡಿದ್ದಾರೆ.
'ಇದೇನು ಮಾಡ್ತಿದ್ದೀರಾ ನೀವು?' ಅಂತ ಕೇಳಿದ್ದೆ ನಾನು. ನನಗೆ ಇಂತಹ ವಿಷಯಗಳು ತೀವ್ರ ಕೋಪ ತರಿಸುತ್ತವೆ ಎಂದಿದ್ದಾರೆ ಸಿದ್ಧಾರ್ಥ್. 'ನೀವು ಕಲಾವಿದರು, ನೀವು ಎಲ್ಲಿ ಹೇಗೇ ಇದ್ದರೂ ಜನರೊಟ್ಟಿಗೆ ಬೆರೆಯಬೇಕು; ಫೋಟೋ ತೆಗಿಸಿಕೊಳ್ಳಬೇಕು ಎಂದು ಕೆಲವರು ಉಪದೇಶ ಮಾಡುತ್ತಾರೆ. ಆದರೆ ಅದು ತಪ್ಪ ಅಭಿಪ್ರಾಯ ಎಂಬುದು ನನ್ನ ಭಾವನೆ. ಇಂತಹ ಫೋಟೋಗಳನ್ನೆಲ್ಲ ಬಳಸಿಕೊಂಡು ಕೆಲವರು ಬ್ಯುಸಿನೆಸ್ ಮಾಡುತ್ತಾರೆ.
ಸಾವಿನ ಸೂಚನೆ ಸಿಗ್ತಿದ್ದಂತೆಯೇ ರಾಮ ಮಂದಿರದ ಉದ್ಘಾಟನೆಗಾಗಿ ಭಜನೆ ರೆಕಾರ್ಡ್ ಮಾಡಿದ ಲತಾ ದೀದಿ!
ಸರಿಯಾಗಿ ಫೋನು ಬಳಸಲು ಗೊತ್ತಿಲ್ಲದವರ ಕೈನಲ್ಲಿ ಮೊಬೈಲ್ ಕೊಟ್ಟರೆ ಅದು ಕೆಟ್ಟದಾಗಿಯೇ ಬಳಕೆ ಆಗುತ್ತದೆ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದ್ದೇ ದರ್ಬಾರು. ನನಗಂತೂ ಈ ಸಾಮಾಜಿಕ ಮಾಧ್ಯಮಗಳು ಅಂದ್ರೇನೇ ಭಯ. ಯಾರದ್ದಾದರೂ ಅಂತ್ಯಕ್ರಿಯೆಗೆ ಹೋದಾಗಲೂ ಫೋಟೋ, ವಿಡಿಯೋ ಮಾಡುತ್ತಾರೆ. ಅದು ತುಂಬಾ ವಿಚಿತ್ರ ಮತ್ತು ಭಯವನ್ನು ಉಂಟು ಮಾಡುತ್ತದೆ." ಎಂದಿದ್ದಾರೆ ನಟ ಸಿದ್ಧಾರ್ಥ.
ಆಡು ಸ್ವಾಮಿಯ ಮಹಿಮೆ ಸಾರುವ ಆಡೇ ನಮ್ God; ವಿಭಿನ್ನ ಪ್ರಯತ್ನಕ್ಕೆ ಚಪ್ಪಾಳೆ ಸುರಿಮಳೆ!