ಆಡು ಸ್ವಾಮಿಯ ಮಹಿಮೆ ಸಾರುವ ಆಡೇ ನಮ್ God; ವಿಭಿನ್ನ ಪ್ರಯತ್ನಕ್ಕೆ ಚಪ್ಪಾಳೆ ಸುರಿಮಳೆ!
ಸಾಮಾನ್ಯ ವರ್ಗದ ನಾಲ್ಕು ಜನ ಯುವಕರ ಬದುಕಲ್ಲಿ ಒಂದು ಆಡು ಬಂದಾಗ ಲೈಫ್ ಹೇಗೆ ಟ್ವಿಸ್ಟ್ ಅಂಡ್ ಟರ್ನ್ ಪಡೆದುಕೊಳ್ಳುತ್ತದೆ, ಆ ಆಡಿನ ಜತೆ ಯುವಕರ ಬದುಕು ಹೇಗೆ ಸಾಗುತ್ತದೆ, ಎನ್ನವುದು ಸಿನಿಮಾದ ಒನ್ಲೈನ್ ಸ್ಟೋರಿ. 'ಸುವರ್ಣ ನ್ಯೂಸ್ ಪ್ರೋಗ್ರಾಂ ಪ್ರೊಡ್ಯೂಸರ್ 'ಅಜಿತ್ ಬೊಪ್ಪನಳ್ಳಿ' ನಾಲ್ಕು ಜನ ಯುವಕರಲ್ಲಿ ಒಬ್ಬರಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ ಲೋಕದಲ್ಲಿ ಹೊಸತನ ಸಾರುವ ಚಿತ್ರವೊಂದು ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. 'ಆಡು ಸ್ವಾಮಿ' ಮಹಿಮೆ ಸಾರುವ 'ಆಡೇ ನಮ್ ಗಾಡ್' ಹೆಸರಿನ ಈ ಚಿತ್ರದಲ್ಲಿ ನಟ ಅಜಿತ್ ಬೊಪ್ಪನಳ್ಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ (07 ಅಕ್ಟೋಬರ್ 2023) ಆಡೇ ನಮ್ ಗಾಡ್ ಚಿತ್ರ ಕರ್ನಾಟಕದಾದ್ಯಂತ ರಿಲೀಸ್ ಆಗಿದ್ದು, ಹಾಸ್ಯದ ಹೊನಲು ಹರಿಸುತ್ತಿದೆ. Aade Nam God'ಒಂದು ವಿಭಿನ್ನ ಪ್ರಯತ್ನ ಎನ್ನಬಹುದು.
ಕನ್ನಡ ಚಿತ್ರರಂಗದಲ್ಲಿ ಈ ಮೊದಲು 'ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ಅಂಡಮಾನ್ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಪಿ ಹೆಚ್ ವಿಶ್ವನಾಥ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಹಳ ವರ್ಷಗಳ ಬಳಿಕ ಈ ನಿರ್ದೇಶಕರ ಹೊಸ ಚಿತ್ರವೊಂದು ಬಿಡುಗಡೆಯಾಗಿ ಗಮನಸೆಳೆಯುತ್ತಿದೆ. ಆಡು ಸ್ವಾಮಿಯ ಮಹಿಮೆ ಸಾರುವ ಚಿತ್ರವಾಗಿ ಆಡೇ ನಮ್ God ಹಾಸ್ಯ ಪ್ರಿಯರಿಂದ ಮೆಚ್ಚುಗೆ ಪಡೆಯುತ್ತಿದೆ.
ಸಾಮಾನ್ಯ ವರ್ಗದ ಕುಟುಂಬದ ನಾಲ್ಕು ಜನ ಯುವಕರ ಬದುಕಲ್ಲಿ ಒಂದು ಆಡು ಬಂದಾಗ ಲೈಫ್ ಹೇಗೆ ಟ್ವಿಸ್ಟ್ ಅಂಡ್ ಟರ್ನ್ ಪಡೆದುಕೊಳ್ಳುತ್ತದೆ, ಆ ಆಡಿನ ಜತೆ ಯುವಕರ ಬದುಕು ಹೇಗೆ ಸಾಗುತ್ತದೆ, ಎನ್ನವುದು ಸಿನಿಮಾದ ಒನ್ಲೈನ್ ಸ್ಟೋರಿ. 'ಸುವರ್ಣ ನ್ಯೂಸ್ ಪ್ರೋಗ್ರಾಂ ಪ್ರೊಡ್ಯೂಸರ್ 'ಅಜಿತ್ ಬೊಪ್ಪನಳ್ಳಿ' ನಾಲ್ಕು ಜನ ಯುವಕರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಜಿತ್ ಬೊಪ್ಪನಳ್ಳಿ ಸೇರದಂತೆ, ನಟರಾಜ್ ಭಟ್, ಮಂಜುನಾಥ್ ಜಂಬೆ, ಅನೂಪ್ ಶೂನ್ಯ, ಸಾರಿಕಾ ರಾವ್ ಮತ್ತು ಹಿರಿಯ ನಟ ಬಿ ಸುರೇಶ್ ನಟಿಸಿದ್ದಾರೆ. ತೆರೆಯ ಮೇಲೆ ಅಜಿತ್ ಹಾಗೂ ಉಳಿದವರೆಲ್ಲರ ನಟನೆ ವೀಕ್ಷಕರ ಭಾವನೆಗೆ ಕಚಗುಳಿ ಇಡುವಂತಿದ್ದು, ಸಖತ್ ಮೆಚ್ಚುಗೆ ಪಡೆದಿವೆ.
ಅಯ್ಯಯ್ಯೋ ತಪ್ಪು ಮಾಡಿಬಿಟ್ಟೆ; ವಿಡಿಯೋ ಹರಿಬಿಟ್ಟ ಸನ್ನಿ ಲಿಯೋನ್..!
ಆಡೇ ನಮ್ ಗಾಡು ಒಂದು 'ಔಟ್ ಅಂಡ್ ಔಟ್' ಕಾಮಿಡಿ ಚಿತ್ರವಾಗಿದ್ದು, ಚಿತ್ರವನ್ನು ತೆರೆಯ ಮೇಲೆ ನೋಡುತ್ತಿದ್ದರೆ ಹಾಸ್ಯದ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಆರ್ ಕೆ ಸ್ವಾಮಿ ನಾಥನ್ ಸಂಗೀತ ಚಿತ್ರಕ್ಕಿದ್ದು, ಪ್ರೊ. ಬಿ ಬಸವರಾಜು ಸಿನಿಮಾವನ್ನು ನಿರ್ಮಿಸಿದ್ದಾರೆ. ಸ್ಯಾಂಡಲ್‌ವುಡ್ ಸಿನಿಮಾ ಪ್ರಿಯರು ಈ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದು, ಥಿಯೇಟರ್‌ನಲ್ಲಿ ಸಿಳ್ಳೆ-ಚಪ್ಪಾಳೆ ಸುರಿಮಳೆಯನ್ನು ಅನುಭವಿಸಲು ಚಿತ್ರಮಂದಿರಕ್ಕೆ ಹೋಗುವುದೊಂದೇ ದಾರಿ..!
ಬಿಗ್ ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!