ನಟ ಶಾರುಖ್‌ ಖಾನ್‌ ಅವರು ಎರಡು ನೂರು ಕೋಟಿ ರೂಪಾಯಿ ಬೆಲೆಯ ಮನ್ನತ್‌ ಬಂಗಲೆಯಿಂದ ಹೊರಬೀಳಲಿದ್ದಾರಂತೆ. ಹೌದು, ಯಾಕೆ ಈ ನಿರ್ಧಾರ ಮಾಡಿದ್ದಾರೆ?  

ನಿತ್ಯವೂ ಮುಂಬೈನ ಕೇಂದ್ರಸ್ಥಳದಲ್ಲಿರೋ ಮನ್ನತ್‌ನ ಮುಂದೆ ಜನಸಾಗರ ನೆರೆದಿರುತ್ತದೆ, ಶಾರುಖ್‌ ಖಾನ್‌ ಅವರು ಆ ಜನಸಮೂಹ ನೋಡಿ ಹಾಯ್‌ ಹೇಳಿ ಹೋಗುತ್ತಾರೆ. ಆದರೆ ಇನ್ನು ಎರಡು ವರ್ಷಗಳ ಕಾಲ ಈ ಗಳಿಗೆ ಸಿಗೋದು ಅಪರೂಪ ಎನ್ನಬಹುದು.

ಮನ್ನತ್‌ ಬಿಡೋದು ಯಾಕೆ? 
ಹೌದು, ಎರಡು ವರ್ಷಗಳ ಕಾಲ ಮನ್ನತ್‌ ಮನೆಯಲ್ಲಿ ಶಾರುಖ್‌ ಖಾನ್‌ ಕುಟುಂಬ ವಾಸ ಮಾಡೋದಿಲ್ಲ. ಮನ್ನತ್‌ನಲ್ಲಿ ಒಂದಷ್ಟು ರಿನೋವೇಶನ್‌ ಕೆಲಸ ನಡೆಯಲಿದೆಯಂತೆ. ಹೀಗಾಗಿ ಶಾರುಖ್‌ ಕುಟುಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡಲಿದೆಯಂತೆ. 

ಐಷಾರಾಮಿ ಬಂಗಲೆ ಇದ್ದರೂ ಬಾಡಿಗೆ ಮನೆ ಮೊರೆ ಹೋದ Actor Shahrukh Khan

ಎರಡು ಅಪಾರ್ಟ್‌ಮೆಂಟ್‌ಗಳು 
ಮುಂಬೈನಲ್ಲಿ ನಟ ಶಾರುಖ್‌ ಖಾನ್ ಅವರು ಎರಡು ಲಕ್ಷುರಿ ಡುಪ್ಲೆಕ್ಷ್‌ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ 2 ಅಪಾರ್ಟ್‌ಮೆಂಟ್‌ಗಳಿಗೆ 3 ವರ್ಷಕ್ಕೆ 8.67 ಕೋಟಿ ರೂಪಾಯಿ ಬಾಡಿಗೆ ಎಂಬ ಮಾಹಿತಿ ಸಿಕ್ಕಿದೆ. ನಿರ್ಮಾಪಕ ಜಾಕಿ ಭಗ್ನಾನಿ ಕಡೆಯಿಂದ ಒಂದು ಅಪಾರ್ಟ್‌ಮೆಂಟ್‌ ಪಡೆದಿದ್ದಾರೆ. ಇದಕ್ಕೆ ಪ್ರತಿ ತಿಂಗಳು 11.5 ಲಕ್ಷ ರೂಪಾಯಿ ಬಾಡಿಗೆ ಕೊಡಬೇಕು. ಇನ್ನೊಂದು ಅಪಾರ್ಟ್‌ಮೆಂಟ್‌ನ್ನು ವಶು ಭಗ್ನಾನಿ ಕಡೆಯಿಂದ ಪಡೆದಿದ್ದು, ಪ್ರತಿ ತಿಂಗಳು 12.61 ಲಕ್ಷ ರೂಪಾಯಿ ಬಾಡಿಗೆ ಹಣ ಕೊಡಬೇಕಂತೆ. ಇದಕ್ಕೆ 3 ವರ್ಷಗಳಿಗೆ 32.97 ಲಕ್ಷ ರೂಪಾಯಿ ಅಡ್ವಾನ್ಸ್‌ ಹಣ ನೀಡಲಾಗಿದೆ.

ಮನ್ನತ್‌ ಇಂದಿನ ಬೆಲೆ ಎಷ್ಟು? 
ಶಾರುಖ್‌ ಖಾನ್‌ ಎಂದಕೂಡಲೇ ಅವರ ʼಮನ್ನತ್ʼ‌ ಕೂಡ ನೆನಪಿಗೆ ಬರುತ್ತದೆ. ಈ ಮನೆ 27000 square foot ಇದೆ ಎನ್ನಲಾಗಿದೆ. 2001ರಲ್ಲಿ ಶಾರುಖ್‌ ಖಾನ್‌ ಅವರು ತುಂಬ ಕಷ್ಟಪಟ್ಟು ಈ ಮನೆ ಖರೀದಿಸಿದ್ದರಂತೆ. ಅಂದು ಅವರು 13 ಕೋಟಿಗೆ ಈ ಬಂಗಲೆಯನ್ನು ಖರೀದಿಸಿದ್ದರು, ಈಗ ಮನ್ನತ್ ಬೆಲೆ 200 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 

Shah Rukh Khan: 58 ಪ್ರಶಸ್ತಿ ಬಾಚಿಕೊಂಡ ಆ ಫಿಲಂ ಶೂಟಿಂಗ್‌ಗೆ ಶಾರುಖ್‌ ಖಾನ್‌ ಕುಡಿದೇ ಬರುತ್ತಿದ್ದ!

ಮುಂಬೈನ ಕೇಂದ್ರ ಸ್ಥಳದಲ್ಲಿ ಮನ್ನತ್‌ ಇದೆ. ಇನ್ನು ಶಾರುಖ್‌ ಪತ್ನಿ ಗೌರಿ ಖಾನ್‌ ಅವರು ಇಂಟಿರಿಯರ್‌ ಡಿಸೈನರ್‌ ಆಗಿದ್ದು, ಈ ಮನೆಯನ್ನು ತಮ್ಮ ಫ್ಯಾಮಿಲಿಗೆ ಬೇಕಾದಂತೆ ಡಿಸೈನ್‌ ಮಾಡಿಸುತ್ತಿದ್ದಾರಂತೆ. ಶಾರುಖ್‌ ಖಾನ್‌ ಅವರು Bai Khorshed Bhanu Sanjana Trust ಕಡೆಯಿಂದ ಈ ಮನೆ ಖರೀದಿಸಿದ್ದರು. ಈ ಬಂಗಲೆಗೆ ಆರಂಭದಲ್ಲಿ ʼvilla viennaʼ ಎಂಬ ಹೆಸರಿತ್ತು. 2005ರಲ್ಲಿ ಶಾರುಖ್‌ ಖಾನ್‌ ಅವರು ʼಮನ್ನತ್ʼ‌ ಎಂದು ಹೆಸರಿಟ್ಟರು. ಮನ್ನತ್‌ ಅಂದರೆ ಪ್ರಾರ್ಥನೆ ಎಂದರ್ಥ.