ನಟ ಜಯಂ ರವಿ ಹಾಗೂ ಕೆನಿಷಾ ಅವರು ಒಟ್ಟಿಗೆ ಸುತ್ತಾಡಿದ್ದಾರೆ. ಆಮೇಲೆ ಜಯಂ ರವಿ ಪತ್ನಿ ಆರತಿ ಪ್ರತಿಕ್ರಿಯೆ ನೀಡಿದ್ದಾರೆ. 

ಗಾಯಕಿ ಕೆನಿಶಾ ಜೊತೆ ರವಿ ಮೋಹನ್‌, ( ಜಯಂ ರವಿ ) ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರತಿ ಆರೋಪ ಮಾಡಿದ್ದರು. ಆಗ ರವಿ, ಕೆನಿಶಾ ಕೂಡ ಈ ಆರೋಪವನ್ನು ತಳ್ಳಿ ಹಾಕಿದ್ದರು. “ಆರತಿ ಮತ್ತು ಅವರ ಕುಟುಂಬವು ನನಗೆ ಭಾವನಾತ್ಮಕವಾಗಿ ದೌರ್ಜನ್ಯ ಮಾಡಿದ್ದಾರೆ. ನನ್ನ ಹೆತ್ತ ತಂದೆ-ತಾಯಿಯನ್ನು ಕಳೆದುಕೊಂಡಾಗ ಎಷ್ಟು ನೋವಾಗಿತ್ತೋ ಈ ಆರೋಪ ಇನ್ನಷ್ಟು ನೋವು ಉಂಟುಮಾಡಿದೆ” ಎಂದು ಹೇಳಿದ್ದರು. ಇದಾಗಿ ಕೆಲ ತಿಂಗಳುಗಳು ಉರುಳುತ್ತಿದ್ದಂತೆ ಕೆನಿಷಾ, ರವಿ ಅವರು ಕೈ ಕೈ ಹಿಡಿದುಕೊಂಡು ಜೋಡಿಯಂತೆ ಒಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈಗ ರವಿ ಪತ್ನಿ ಆರತಿ ಅವರು ಇಷ್ಟುದಿನ ಯಾಕೆ ಮೌನವಾಗಿದ್ದೆ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. 

ರವಿ ಪತ್ನಿ ಆರತಿ ಹೇಳಿಕೆ!
ವರ್ಷದಿಂದ ನಾನು ಮೌನವಾಗಿದ್ದೇನೆ, ದೌರ್ಬಲ್ಯದಿಂದ ಅಲ್ಲ, ಆದರೆ ನಾನು ಮಾತಾಡೋದಕ್ಕಿಂತ ಹೆಚ್ಚು, ನನ್ನ ಮಕ್ಕಳಿಗೆ ಶಾಂತಿ ಹೆಚ್ಚು ಮುಖ್ಯ. ನನ್ನ ಮೇಲೆ ಮಾಡಿದ ಪ್ರತಿಯೊಂದು ಆರೋಪ, ಆಪಾದನೆ, ಕ್ರೂರವಾದ ಮಾತುಗಳನ್ನು ನಾನು ಸಹಿಸಿಕೊಂಡಿದ್ದೇನೆ. ನನ್ನ ಬಳಿ ಸತ್ಯ ಇತ್ತು, ಆದರೆ ನಾನು ಏನೂ ಹೇಳಲಿಲ್ಲ. ಆದರೆ ನನ್ನ ಮಕ್ಕಳು ಮಾತ್ರ ತಂದೆ-ತಾಯಿಯರ ನಡುವೆ ಒಂದನ್ನು ಆಯ್ಕೆ ಮಾಡುವ ಭಾರವನ್ನು ಹೊರಬೇಕು ಎನ್ನುವ ಸಮಯ ಬರೋದು ನನಗೆ ಇಷ್ಟ ಇರಲಿಲ್ಲ. 

ಇಂದು, ಜಗತ್ತು ನೋಡುತ್ತಿರುವುದಕ್ಕೂ, ನಮ್ಮ ವಾಸ್ತವ ಜೀವನವು ತುಂಬಾ ಭಿನ್ನವಾಗಿದೆ. ನನ್ನ ಡಿವೋರ್ಸ್‌ ಪ್ರಕರಣ ಇನ್ನೂ ಮುಂದುವರಿಯುತ್ತಿದೆ. ಆದರೆ 18 ವರ್ಷಗಳ ಕಾಲ ನಾನು ಪ್ರೀತಿ, ನಿಷ್ಠೆ, ನಂಬಿಕೆಯೊಂದಿಗೆ ನಿಂತಿದ್ದ ವ್ಯಕ್ತಿ ಈಗ ನನ್ನನ್ನು ಒಂದೇ ಅಲ್ಲ. ಗಂಡನ ಜಗತ್ತಿನ ಭಾರವನ್ನು ನಾನೊಬ್ಬಳೇ ಹೊತ್ತಿದ್ದೇನೆ.

ನಾನೊಬ್ಬಳೇ ನೋವು ಅನುಭವಿಸುತ್ತಿದ್ದೇನೆ. ನನ್ನ ಹೆಮ್ಮೆ ಎಂದು ಯಾರನ್ನೋ ಕರೆದನೋ ಅವನು ಇಲ್ಲಿಯವರೆಗೆ ಭಾವನಾತ್ಮಕ ಅಥವಾ ಆರ್ಥಿಕ ಬೆಂಬಲ ನೀಡಿಲ್ಲ. ನಮ್ಮನ್ನು ಮನೆಯಿಂದ ಬಿಟ್ಟು ಹೋಗುವಂತೆ ಮಾಡಲಾಗುತ್ತಿದೆ. ನಾನು ಮತ್ತು ನನ್ನ ಪತಿ ಸೇರಿಕೊಂಡು ಆ ಮನೆ ಕಟ್ಟಿದ್ದೆವು. ನನ್ನನ್ನು ಗೋಲ್ಡ್‌ ಡಿಗ್ಗರ್ ಎಂದು ಆರೋಪಿಸಲಾಗಿದೆ. ಅದು ಸತ್ಯವಾಗಿದ್ದರೆ, ನಾನು ಬಹಳ ಹಿಂದೆಯೇ ನನಗೆ ಏನೇನೋ ಬೇಕೋ ಅದನ್ನೆಲ್ಲ ಮಾಡಿಕೊಂಡು ಇರುತ್ತಿದ್ದೆ. ಆದರೆ ನಾನು ಪ್ರೀತಿ ಮಾಡಿದೆ, ವಿಶ್ವಾಸವನ್ನು ಆಯ್ಕೆ ಮಾಡಿಕೊಂಡೆ. ಇದರಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ಆ ಪ್ರೀತಿಯನ್ನು ದೌರ್ಬಲ್ಯವೆಂದು ಬರೆಯುತ್ತೀರಾ ಎಂದರೆ ಅದನ್ನು ನಾನು ಸಹಿಸುವುದಿಲ್ಲ. ನನ್ನ ಒಬ್ಬ ಮಗನಿಗೆ 10 ವರ್ಷ ವಯಸ್ಸು, ಇನ್ನೋರ್ವ ಮಗನಿಗೆ 14 ವರ್ಷ ವಯಸ್ಸು. ಅವರಿಗೆ ಈ ವಿಚಾರದಲ್ಲಿ ಆಘಾತ ಆಗಬಾರದು, ಭದ್ರತೆ ಬೇಕು, ಸ್ಥಿರತೆ ಬೇಕು. ಅವರು ಕಾನೂನು ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ತುಂಬ ಸಣ್ಣವರು. 

ನಾನು ಇಂದು ಪತ್ನಿಯಾಗಿ ಮಾತನಾಡದೆ, ನನ್ನ ಮಕ್ಕಳ ಯೋಗಕ್ಷೇಮದ ಬಗ್ಗ ಗಮನ ಕೊಡುವ ತಾಯಿಯಾಗಿ ಮಾತನಾಡುತ್ತಿದ್ದೇನೆ. ಈಗ ನಾನು ಎದ್ದು ನಿಲ್ಲಲೇ ಬೇಕು. ನೀವು ಏನೇ ಮಾಡಿದರೂ ಕೂಡ ಸತ್ಯವನ್ನು ಮರುಬರೆಯಲಾಗದು. ತಂದೆ ಎನ್ನುವುದು ಕೇವಲ ಬಿರುದಲ್ಲ. ಅದೊಂದು ಜವಾಬ್ದಾರಿ. ನೀವು ನನ್ನ ಮಾತುಗಳಿಂದ ತಪ್ಪಿಸಿಕೊಳ್ಳಬಹುದು, ಆದರೆ ವಿಶ್ವವು ಮೌನವನ್ನು ನೆನಪಿಟ್ಟುಕೊಳ್ಳುತ್ತದೆ. ನಾನೂ ಮತ್ತು ಕಾನೂನು ಒಟ್ಟಾಗಿ ನಿರ್ಧರಿಸುವವರೆಗೆ ನಾನು ಆರತಿ ರವಿಯಾಗಿಯೇ ಇರುತ್ತೇನೆ. ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ನನ್ನನ್ನು ಮಾಜಿ ಪತ್ನಿ ಎಂದು ಕರೆಯಬೇಡಿ. ಮೌನದಂತೆ ತಾಳ್ಮೆಯೂ ಕೂಡ ಒಂದು ಸದ್ಗುಣ, ಇದು ಸೇಡಲ್ಲ, ಇದು ತಮಾಷೆಯಲ್ಲ. ಇದು ಒಬ್ಬ ತಾಯಿ ರಕ್ಷಣೆಗಾಗಿ ಬೆಂಕಿಯೊಳಗೆ ಇಳಿಯುತ್ತಾಳೆ. ನಾನು ಅಳುವುದಿಲ್ಲ, ಕೊರಗುವುದಿಲ್ಲ, ನಾನು ನಿಲ್ಲುತ್ತೇನೆ. ನಿಮ್ಮನ್ನು ಅಪ್ಪ ಎಂದು ಕರೆಯುವ ಇಬ್ಬರು ಗಂಡು ಮಕ್ಕಳಿಗಾಗಿ ನಾನು ಎಂದಿಗೂ ಹಿಂದೆ ಸರಿಯುವುದಿಲ್ಲ.


View post on Instagram