ಸಿನಿಮಾ ಬಿಟ್ಟು ಸೇನೆಗೆ ಸೇರಿದ ಲಾಪತಾ ಲೇಡಿಸ್ ಖ್ಯಾತಿಯ ನಟನ 21 ವರ್ಷದ ಪುತ್ರಿ
ಖ್ಯಾತ ನಟ ಅವರ 21 ವರ್ಷದ ಪುತ್ರಿ ಇಶಿತಾ ಕಿಶನ್ ಅಗ್ನಿವೀರ್ ಯೋಜನೆಯಡಿಯಲ್ಲಿ ಸೇನೆಗೆ ಸೇರ್ಪಡೆಯಾಗಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಸೇರಿದಂತೆ ಹಲವರು ಇಶಿತಾ ಸಾಧನೆಯನ್ನು ಶ್ಲಾಘಿಸಿದ್ದಾರೆ.
ನವದೆಹಲಿ: ಹಿಂದಿ ಸಿನಿಮಾದ ಖ್ಯಾತ ನಟನ ಪುತ್ರಿ 21ನೇ ವಯಸ್ಸಿನಲ್ಲಿ ಸೇನೆ ಸೇರ್ಪಡೆಯಾಗಿದ್ದಾರೆ. ಸೇನೆಗೆ ಸೇರಿರುವ ಮಗಳ ಬಗ್ಗೆ ನಟ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಈ ಖ್ಯಾತ ಸಿನಿಮಾಗಳ ಜೊತೆಯಲ್ಲಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಸಂಸದರಾಗಿದ್ದಾರೆ. 21 ವರ್ಷದ ಇಶಿತಾ ಕಿಶನ್ ಭಾರತ ಸರ್ಕಾರದ ಅಗ್ನಿವೀರ್ ಯೋಜನೆಯಡಿಯಲ್ಲಿ ರಕ್ಷಣಾ ಪಡೆ ಸೇರಿಕೊಂಡಿದ್ದಾರೆ. ಮಗಳು ಸೇನೆಗೆ ಸೇರಬೇಕೆಂದು ನಟ ಆಸೆಪಟ್ಟಿದ್ದರು. ಇದೀಗ ತಂದೆ ಆಸೆಯಂತೆ ಇಶಿತಾ ಸೇನೆ ಸೇರಿದ್ದಾರೆ.
ಸೇನೆಗೆ ಸೇರಿರುವ ಇಶಿತಾ ತಂದೆ ರವಿ ಕಿಶನ್ ಭೋಜಪುರಿ ಸಿನಿಮಾದ ಖ್ಯಾತ ನಟ. ರವಿ ಕಿಶನ್ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈ ಬಗ್ಗೆ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಸಹ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ರವಿ ಕಿಶನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ನನ್ನ ಪ್ರೀತಿಯ ಗೆಳೆಯ ರವಿ ಕಿಶನ್. ನಿಮ್ಮ ಮಗಳು ಇಶಿತಾ ಬಗ್ಗ ಸ್ಪೂರ್ತಿದಾಯಕ ಲೇಖನವನ್ನು ಓದಿದೆ. ನಿಮ್ಮ ಮಗಳು ಇಶಿತಾ, ಅಗ್ನಿವೀರ್ ಸ್ಕೀಮ್ ಅಡಿಯಲ್ಲಿ ರಕ್ಷಣಾ ಪಡೆಗೆ ಸೇರ್ಪಡೆಯಾಗಿರುವ ವಿಷಯ ತಿಳಿಯಿತು. ಈ ವಿಷಯ ತಿಳಿದು ತುಂಬಾ ಖುಷಿಯಾಯ್ತು. ಲಕ್ಷಾಂತರ ಮಕ್ಕಳಿಗೆ ಇಶಿತಾ ಪ್ರೇರಣೆಯಾಗಿದ್ದಾಳೆ. ಜೈ ಹಿಂದ್ ಎಂದು ಅನುಪಮ್ ಖೇರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ನೆಟ್ಟಗರು ರವಿ ಕಿಶನ್ ಮತ್ತು ಇಶಿತಾ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ್ದಾರೆ.
ಇದನ್ನೂ ಓದಿ: ಈ ಯುವಕನೇ ಅದೃಷ್ಟವಂತ; ವೈರಲ್ ಆಯ್ತು ಅಮ್ಮ-ಮಗನ ಕ್ಯೂಟ್ ವಿಡಿಯೋ ವೈರಲ್
ನಟ ರವಿ ಕಿಶನ್ ಕೂಡ ತಮ್ಮ ಮಗಳ ಈ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಜೂನ್ 15 ರಂದು ಮತ್ತೊಂದು ಟ್ವೀಟ್‌ನಲ್ಲಿ, "ಬೆಳಗ್ಗೆ ನನ್ನ ಮಗಳು ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಲು ಬಯಸಿದ್ದಾಳೆಂದು ಹೇಳಿದಳು. ಅದಕ್ಕೆ ನಾನು ನಿನ್ನಿಷ್ಟದಂತೆ ಮುಂದುವರಿಯುವಂತೆ ಹೇಳಿದೆ ಎಂದು ಬರೆದುಕೊಂಡಿದ್ದರು. 21 ವರ್ಷದ ಇಶಿತಾ, ಫೆಬ್ರವರಿ 10 ರಂದು ಜೌನ್‌ಪುರದಲ್ಲಿ ಜನಿಸಿದ ಇಶಿತಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಇಶಿತಾ ಎನ್‌ಸಿಸಿಯಲ್ಲಿ ಕೆಡೆಟ್ ಆಗಿದ್ದಾರೆ. ಇಶಿತಾ ಅವರು 2022 ರಲ್ಲಿ NCC ಯ ಎಡಿಜಿ ಪ್ರಶಸ್ತಿಯನ್ನು ಗೆದ್ದಿದ್ದರು. ಇನ್ನು 2024ರ ಜನರಿಂದ ಮೆಚ್ಚುಗೆ ಪಡೆದ 'ಲಾಪತಾ ಲೇಡಿಸ್' ಸಿನಿಮಾದಲ್ಲಿ ರವಿ ಕಿಶನ್, ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಶೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ; ಬೆಲೆ ಎಷ್ಟು?