ಆಪ್ತ ಸ್ನೇಹಿತನ್ನು ಮಿಸ್ ಮಾಡಿಕೊಳ್ಳುತ್ತಿರುವ ರಾಣಾ. ಫೋಟೋ ತೋರಿಸಿ ಹೆಮ್ಮೆಯಿಂದ ಹೇಳಿಕೊಂಡ ನಟ...

ಕನ್ನಡ ಚಿತ್ರರಂಗದ ಮುತ್ತು ರತ್ನ, ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ನಿಧನರಾಗಿ ಒಂದು ವರ್ಷ ಸಮೀಪಿಸುತ್ತಿದೆ. ಅಪ್ಪು ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಯಾವುದೇ ಕಾರ್ಯಕ್ರಮ ಅಗಿರಲಿ ಅಪ್ಪುಗೆ ಮೊದಲು ನಮನ ಸಲ್ಲಿಸಿ ಆ ನಂತರ ಮುಂದುವರೆಯುತ್ತಾರೆ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಸಿನಿಮಾ ಪ್ರಚಾರ ಮಾಡಲು ಬರುವ ಸೆಲೆಬ್ರಿಟಿಗಳು ಮೊದಲು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ಅನಂತರ ಶಿವಣ್ಣ ನಿವಾಸ ಆನಂತರ ಸಿನಿಮಾ ಕೆಲಸ ಆರಂಭಿಸುತ್ತಾರೆ. 

ಕೆಲವು ದಿನಗಳ ಹಿಂದೆ ತೆಲುಗು ನಟ ರಾಣಾ ದಗ್ಗುಬಾಟಿ ಕರ್ನಾಟಕಕ್ಕೆ ಆಗಮಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಶ್ರೀಯಾ ಶರಣ್ ಮತ್ತು ಸುದೀಪ್ ಅಭಿನಯಿಸಿರುವ ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು. ಬೆಂಗಳೂರಿನ ಆಹಾರ ಜನರು ಮತ್ತು ಸಿನಿಮಾಗಳ ಬಗ್ಗೆ ರಾಣಾ ಮಾತುಗಳನ್ನು ಕೇಳಿ ಕನ್ನಡಿಗರು ಫುಲ್ ಖುಷಿ ಆಗಿ ಕನ್ನಡ ಸಿನಿಮಾದಲ್ಲೂ ನೀವು ನಟಿಸಬೇಕು ಅನ್ನೋ ಡಿಮ್ಯಾಂಡ್ ಮುಂದಿಟ್ಟರು. 

ಇದಾದ ಕೆಲವೇ ದಿನಗಳಲ್ಲಿ ರಾಣಾ ಆಫೀಸ್‌ನಲ್ಲಿ ಹೊಸ ಬದಲಾವಣೆ ಆಗಿದೆ. ಅದೇನೆಂದರೆ ಪವರ್ ಸ್ಟಾರ್ ಪುನೀತ್ ಪುತ್ಥಳಿಯನ್ನು ಟೇಬಲ್‌ ಮೇಲೆ ಇಟ್ಟಿರುವುದು. ಹೌದು! ಸ್ವತಃ ರಾಣಾ ದಗ್ಗುಬಾಟಿ ಟ್ವಿಟರ್‌ನಲ್ಲಿ ಸ್ಪೆಷಲ್ ಫೋಟೋ ಹಂಚಿಕೊಂಡು 'ತುಂಬಾ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂದಿದೆ. ಮಿಸ್‌ ಯೂ ಮೈ ಫ್ರೆಂಡ್ ಪುನೀತ್ ರಾಜ್‌ಕುಮಾರ್' ಎಂದು ಬರೆದುಕೊಂಡಿದ್ದಾರೆ.

ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರು: Rana Daggubati

ಗೋಲ್ಡ್‌ ಅಂಡ್ ಬ್ಲ್ಯಾಕ್ ಕಾಂಬಿನೇಷನ್‌ನಲ್ಲಿ ಅಪ್ಪು ಪುತ್ಥಳಿ ಇದ್ದು ಸೂಟ್‌ ಧರಿಸಿದ್ದಾರೆ. ಪವರ್ ನಗು ಮುಖ ನೋಡಿದರೆ ಒಮ್ಮೆ ನಿಜಕ್ಕೂ ಅಪ್ಪು ಇಲ್ಲೇ ಇಲ್ಲೋ ಇದ್ದಾರೆ ಅನಿಸುತ್ತದೆ. ತೆಲುಗು ನಟ ತಮ್ಮ ಆಫೀಸ್‌ನಲ್ಲಿ ಅಪ್ಪು ಪ್ರತಿಭೆ ಇಟ್ಟಿಕೊಂಡಿರುವುದು ಹೆಮ್ಮೆಯ ವಿಚಾರ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

Scroll to load tweet…

ಬೆಂಗಳೂರಿನಲ್ಲಿ ಏನಿಷ್ಟ?

ರಾಣಾ ಆಗಾಗ ಬೆಂಗಳೂರಿಗೆ ಬರುತ್ತಿರುತ್ತಾರಂತೆ. ತಮ್ಮ ಸಹೋದರಿ ಇಂದಿಯಾ ನಗರದಲ್ಲಿ ಇರುವ ಕಾರಣ ವರ್ಷಕ್ಕೆ ಎರಡು ಮೂರು ಸಲ ಬಂದು ಇಲ್ಲಿನ ಹವಾಮಾನ, ಮಾಸ ದೋಸೆ ಮತ್ತು ಕಾಫಿಯನ್ನು ಎಂಜಾಯ್ ಮಾಡುತ್ತಾರಂತೆ. ಅನೇಕ ಸಿನಿಮಾ ಕಾರ್ಯಕ್ರಮಗಳು, ಶಾಪಿಂಗ್ ಮತ್ತು ಫಂಕ್ಷನ್‌ಗಳಿಗೆ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಎಲ್ಲಾ ಸಿಟಿಗಳಿಗಿಂತ ಬೆಂಗಳೂರು ಸಿಟಿ ತುಂಬಾನೇ ಇಷ್ಟ ಎಂದು ಹೇಳಿಕೊಂಡಿದ್ದಾರೆ. 

ಸೆಲ್ಫಿ ಕೇಳಲು ಬಂದ ಫ್ಯಾನ್ ಫೋನ್‌ ಕಿತ್ತುಕೊಂಡ ರಾಣಾ:

ರಾಣಾ ದಗ್ಗುಬಾಟಿ ಪತ್ನಿ ಮಹಿಕಾ ಬಾಲಾಜಿ ಮತ್ತು ಸ್ನೇಹಿತರ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇಗುಲದ ಆವರಣದಲ್ಲಿ ನಡೆದುಕೊಂಡು ಬರುವಾಗ ಅಭಿಮಾನಿಗಗಳು ಸೆಲ್ಫಿಗಾಗಿ ಮುಗ್ಗಿಬಿದ್ದಿದ್ದಾರೆ. ಒಂದು ಅಭಿಮಾನಿ ಮೊಬೈಲ್ ಹಿಡಿದುಕೊಂಡು ಮುಖಕ್ಕೆ ಹತ್ತಿರ ಬಂದಾಗ ರಾಣಾ ಮೊಬೈಲ್ ಕಿತ್ತುಕೊಂಡಿದ್ದಾನೆ. No selfies in a temple ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ರಶ್ಮೆ ಪಂಚೆ - ಶರ್ಟ್‌ಗೆ ಕೆಂಪು ಬಣ್ಣದ ರೇಶ್ಮೆ ಶೆಲ್ಯದಲ್ಲಿ ರಾಣಾ ಕಾಣಿಸಿಕೊಂಡರೆ ಸಿಂಪಲ್ ಗೋಲ್ಡ್‌ ಬಣ್ಣ ಸೀರೆಯಲ್ಲಿ ಮಹಿಕಾ ಮಿಂಚಿದ್ದಾರೆ. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲಾಗದ ಕಾರಣ ರಾಣಾ ಸೈಡಿನಿಂದ ಫೋಟೋ ಕ್ಲಿಕ್ ಮಾಡಿ ಹೊರ ನಡೆಯಲು ದಾರಿ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಆದರೂ ಸುಮ್ಮನಿರದೆ ತುಂಟಾಟ ಮಾಡಿದ ಫ್ಯಾನ್ಸ್‌ಗೆ ರಾಣಾ ಚಮಕ್ ಕೊಟ್ಟಿದ್ದಾರೆ. ಕೆಲವರು ರಾಣಾ ಹೀಗೆ ಮಾಡಬಾರದಿತ್ತು ಎನ್ನುತ್ತಾರೆ ಅದರೆ ಇನ್ನೂ ಕೆಲವರು ರಾಣಾ ಇದನ್ನು ಸೀರಿಯಸ್ ಆಗಿ ಮಾಡಿಲ್ಲ ತಮಾಷೆ ಮಾಡಿದ್ದಾರೆ ಹೀಗಾಗಿ ವಿಡಿಯೋದಲ್ಲಿ ನಕ್ಕಿದ್ದಾರೆ ಎಂದಿದ್ದಾರೆ.