ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಪ್ಯೂ ಆಗ್ರಹದ ಮೇರೆಗೆ ಕಾಲಿವುಡ್‌ ಸೂಪರ್‌ ಸ್ಟಾರ್ ರಜನಿಕಾಂತ್ ಮಾತನಾಡಿ ಟ್ಟಿಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದರು. ಆದರೀಗ ಆ ವಿಡಿಯೋವೇ ಮಾಯವಾಗಿದೆ.

ಹೌದು! ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿನ್ನು ತಮ್ಮನ್ನು ತೊಡಗಿಸಿ ಕೊಳ್ಳದೇ ಹೋದರೂ, ಸಮಾಜ ಸೇವೆಯಲ್ಲಿ ಸದಾ ಭಾಗಿಯಾಗಿರುವೆ ಎಂದು ಹೇಳುವ ರಜನಿಕಾಂತ್ ಜನರಲ್ಲಿ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲು ವಿಡಿಯೋ ಮಾಡಿದ್ದರು. ಸದುದ್ದೇಶದಿಂದ ತಲೈವಾ ಮಾಡಿರುವ ವೀಡಿಯೋ ಟ್ವಿಟ‌ರ್‌ನಲ್ಲಿ ಪೋಸ್ಟ್ ಮಾಡಲಾತ್ತು. ಆದರದು  ಡಿಲಿಟ್‌ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿತ್ತು? 

ಕಿಂಗ್ ಆಗಲ್ಲ ಕಿಂಗ್ ಮೇಕರ್ ಆಗಲು ಹೊರಟ ಸೂಪರ್ ಸ್ಟಾರ್..!

ವಿಡಿಯೋದಲ್ಲಿ ರಜನಿ 'ಕೊರೋನಾ ವೈರಸ್‌ ಮೂರನೇ ಹಂತಕ್ಕೆ ಹೋಗದಂತೆ ತಡೆಯಬೇಕಿದೆ. ಹಾಗಾಗಿ ಜತನಾ ಕರ್ಫ್ಯೂಗೆ ಮೋದಿ ಆಗ್ರಹಿಸಿದ್ದಾರೆ, ' ಎಂದು ಮಾತು ಶುರು ಮಾಡಿದ್ದರು. ಇಟಲಿಯಲ್ಲಿ ಇಂಥದ್ದೇ ಎಚ್ಚರಿಕೆ ನೀಡಿದ್ದರೂ ಜನರು ನಿರ್ಲಕ್ಷಿಸಿದರು. ಆ ಪರಿಣಾಮ ಸಾವಿರಾರು ಮಂದಿ ಜೀವ ಕಳೆದು ಕೊಳ್ಳಬೇಕಾಯಿತು. ನಮ್ಮ ಭಾರತಕ್ಕೂ ಹಾಗೆ ಆಗವುದು ಬೇಡ,' ಎಂದು ಎಚ್ಚರಿಸಿದ್ದರು. ಅಷ್ಟೇ ಅಲ್ಲದೆ ಕೊರೋನಾ ವೈರಸ್‌ ಬಗ್ಗೆ ಕೆಲವೊಂದು ಸತ್ಯಾಸತ್ಯತೆಗಳನ್ನು ಜನರಿಗೆ ತಿಳಿಸಿದ್ದಾರೆ. 

ವಿಡಿಯೋದಲ್ಲಿ ವೈರಸ್‌ ಕೇವಲ 14 ಗಂಟೆಗಳು ಮಾತ್ರವೇ ಬದುಕಿರುತ್ತದೆ ಎಂಬುದಾಗಿಯೂ ಹೇಳಿದ್ದರು. ಇದು ಶುದ್ಧ ಸುಳ್ಳೆಂದು ಪರಿಗಣಿಸಿದ ಮೈಕ್ರೋ ಸೋಷಿಯಲ್ ಮೀಡಿಯಾ ಟ್ವಿಟರ್ ಆ ವೀಡಿಯೋವನ್ನೇ ಡಿಲಿಟ್ ಮಾಡಿದೆ. 

ಮುಸ್ಲಿಮರಿಗೆ ತೊಂದರೆಯಾಗಲು ಬಿಡಲ್ಲ: ರಜನಿ ಭರವಸೆ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದರೆ, ಈ ವೈರಸ್ ತನ್ನ ಆಟ ತೋರಿಸಲು ಸಾಧ್ಯವಾಗುವುದಿಲ್ಲವೆಂಬುವುದು ಸತ್ಯ. ಆದರೆ, ಈ ಸಂಬಂಧವಾಗಿ ನೀಡುತ್ತಿರುವ ಹಲವು ಹೇಳಿಕೆಗಳು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆದ್ದರಿಂದ ಗೊತ್ತಿರುವ ಪಕ್ಕಾ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಅಥವಾ ಇನ್ನಿತರೆ ವಿಧವಾಗಿ ಹಂಚಿಕೊಂಡರೆ ಒಳಿತು. ಅದು ಬಿಟ್ಟು, ಅವೈಜ್ಞಾನಿಕ ಹೇಳಿಕೆಗಳನ್ನು ನೀಡದಿರುವುದೇ ಒಳ್ಳೆಯದು. ಈ ಬಗ್ಗೆಯೂ ಜನರು ಸೂಕ್ಷ್ಮವಾಗಿ ಯೋಚಿಸುವ ಅಗತ್ಯವಿದೆ. ಹಬ್ಬಿಸುತ್ತಿರುವ ಸುದ್ದಿಯ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದಲ್ಲಿ, ಸುಮ್ಮನಿದ್ದು ಬಿಡಿ ಎಂಬುವುದು ಸುವರ್ಣನ್ಯೂಸ್.ಕಾಮ್ ಕಳಕಳಿಯ ವಿನಂತಿ.