Asianet Suvarna News Asianet Suvarna News

Radhe Shyam: ರಾಧೇ ಶ್ಯಾಮ್‌ಗಾಗಿ ಸಂಭಾವನೆ ಮೊತ್ತ 100 ಕೋಟಿಯಿಂದ ಇಳಿಸಿಕೊಂಡ ಪ್ರಭಾಸ್!

ಪ್ರಭಾಸ್ ನಟನೆಯ ರಾಧೇ ಶ್ಯಾಮ್ ಸಿನಿಮಾ ತೆರೆಗೆ ಬರುತ್ತಾ ಇದೆ. ಈ ಫಿಲಂಗಾಗಿ ಅವರು ಸಂಭಾವನೆ ಮೊತ್ತ ಇಳಿಸಿಕೊಂಡ್ರಂತೆ. ಯಾಕೆ ಗೊತ್ತಾ?

Actor Prabhas took less remuneration for his Saaho and Radhe Shyam film
Author
Bengaluru, First Published Mar 7, 2022, 1:35 PM IST

ತಾನು ಸಂಭಾವನೆ (Remuneration) ಪ್ರಮಾಣ ತಗ್ಗಿಸಿಕೊಂಡೆ ಅಂತ ಯಾವ ಹೀರೋ (Hero) ಅಥವಾ ಯಾವ ಹೀರೋಯಿನ್ನೂ (Heroine) ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ. ಯಾಕಂದ್ರೆ ಮಾರ್ಕೆಟ್ ಕಡಿಮೆ ಆಗಬಹುದು ಎಂಬ ಆತಂಕ. ಮದುವೆಯಾದ ಹೀರೋಯಿನ್‌ಗಳಿಗಂತೂ ಹೀಗೆ ಹೇಳಿದ್ರೆ ಅವರ ಮರಣ ಶಾಸನ ಬರೆದ ಹಾಗೇ ಸರಿ. ಹಾಗಾಗಿ ಯಾರೂ ಅಂಥ ಸಾಹಸ ಮಾಡೋಕೆ ಹೋಗಲ್ಲ. ಆದ್ರೆ ತೆಲುಗಿನ  ಸೂಪರ್ ಹೀರೋ, ಬಾಹುಬಲಿ (Bahubali) ಫಿಲಂ ಮೂಲಕ ಪಾನ್ ಇಂಡಿಯಾ (Pan India Star) ಸ್ಟಾರ್ ಆಗಿರುವ ಪ್ರಭಾಸ್, ರಾಧೇ ಶ್ಯಾಮ್ ಫಿಲಂಗೆ ತಾನು ಕಡಿಮೆ ಸಂಭಾವನೆ ಪಡೆದುಕೊಂಡೆ ಅಂತ ಓಪನ್ ಆಗಿ ಹೇಳಿದ್ದಾರೆ. 
ಪ್ರಭಾಸ್ ಗೌರವಧನ ಕಡಿಮೆ ಮಾಡಿರೋದು ಬೇಡಿಕೆ ಕಡಿಮೆ ಆಗಿದೆ ಅನ್ನುವ ಕಾರಣಕ್ಕಲ್ಲ. ಪ್ರಭಾಸ್‌ಗೆ ಬೇಡಿಕೆ ಕಡಿಮೆಯೂ ಆಗಿಲ್ಲ. ಅವರಿಗೆ ಹೊಸ ಬಗೆಯ ಫಿಲಂಗಳಲ್ಲಿ ಎಕ್ಸ್‌ಪರಿಮೆಂಟ್ ಮಾಡೋದು ಇಷ್ಟವಂತೆ. ಬಾಹುಬಲಿ ಫಿಲಂ ಸೂಪರ್ ಡ್ಯೂಪರ್ ಹಿಟ್ ಆಗಿ ಪ್ರಭಾಸ್ ಪಾನ್ ಇಂಡಿಯಾ ಸ್ಟಾರ್ ಆದ ಬಳಿಕ, ತಮ್ಮ ಸಂಭಾವನೆಯನ್ನು 100 ಕೋಟಿ ರೂಪಾಯಿಗಳಿಗೆ ಏರಿಸಿದ್ದರು. ಇದೀಗ ಸಾಲಾರ್ (Salar), ಆದಿಪುರುಷ್ (Adipurush), ಪ್ರಾಜೆಕ್ಟ್ ಕೆ (Project K),  ಸ್ಪಿರಿಟ್ (Spirit) - ಮುಂತಾಧ ಬಿಗ್ ಬಜೆಟ್ ಫಿಲಂಗಳು ಅವರ ಬಳಿ ಇವೆ. ಈ ಚಿತ್ರಗಳಿಗೆ ಅವರ ಗೌರವಧನ ಏನಿಲ್ಲವೆಂದರೂ 100ರಿಂಧ 150 ಕೋಟಿಯ ನಡುವೆ ತೂಗುತ್ತದೆ. ಸಂದೀಪ್ ರೆಡ್ಡಿ ಅವರ ವಂಗಾ (Vanga) ಫಿಲಂಗೆ ೧೫೦ ಕೋಟಿ ಕೇಳಿದ್ದಾರೆ ಎಂಬ ಸುದ್ದಿಯಿದೆ. ಹಾಗಾದರೆ ಈ ಫಿಲಂಗಳ ಬಜೆಟ್ ಎಷ್ಟಿರಬಹುದು ಎಂದು ನೀವೇ ಊಹಿಸಿಕೊಳ್ಳಿ. 

Radhe Shyam Review Out: ಪ್ರಭಾಸ್, ಪೂಜಾ ಹೆಗ್ಡೆ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ

ಸದ್ಯ ಅವರು ರಾಧೇ ಶ್ಯಾಮ್ (RAdhe shyam) ಫಿಲಂ ಪ್ರಮೋಷನ್‌ನಲ್ಲಿ ಬ್ಯುಸಿ. ಅದು ಈ ವಾರವೇ ತೆರೆಗೆ ಬರುತ್ತಿದೆ. ಇದರಲ್ಲಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ನಟಿಸಿದ್ದಾರೆ. ಹಲವಾರು ಬಿಗ್ ಬಜೆಟ್ ಫಿಲಂಗಳ ನಡುವೆ ಇದು ಪ್ರಭಾಸ್‌ಗೆ ಮಧ್ಯಮ ಬಜೆಟ್‌ನ ಸಿನಿಮಾವಂತೆ. ಇದನ್ನು ಒಂದು ಬದಲಾವಣೆಯ, ಪ್ರಯೋಗದ ಅಂಗವಾಗಿ ಅವರು ಸ್ವೀಕರಿಸುತ್ತಾರೆ. ''ದೊಡ್ಡ ದೊಡ್ಡ ಫಿಲಂಗಳು ವರ್ಷಗಟ್ಟಲೆಯ ಪ್ರಾಜೆಕ್ಟ್‌ಗಳು. ಅವು ಹೆಚ್ಚಿನ ಕೆಲಸ, ಅವಧಿ ಬೇಡುತ್ತವೆ. ಅವುಗಳ ನಡುವೆ ನಾನು ಒಂದು ಸರಳವಾದ ಲವ್ ಸ್ಟೋರಿ ಮಾಡಬೇಕು ಎಂದರೆ, ಇಂಥ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಬೇಕು. ಆದರೆ ನಾನು ತುಂಬಾ ಚಾರ್ಜ್ ಮಾಡುತ್ತೇನೆ ಎಂದು ಬಹಳ ಮಂದಿಯಲ್ಲಿ ನಂಬಿಕೆಯಿದೆ. ಹಾಗೇನೂ ಇಲ್ಲ. ತುಂಬಾ ಚೆನ್ನಾಗಿರೋ ಸ್ಕ್ರಿಪ್ಟ್ ಸಿಕ್ಕಿದ್ದರೆ ನಾನು ನನ್ನ ಸಂಭಾವನೆ ಮೊತ್ತ ಇಳಿಸಿಕೊಂಡು ನಟಿಸೋಕೆ ರೆಡಿ,'' ಅಂತ ಹೇಳ್ತಾರೆ ಪ್ರಭಾಸ್. 

Actor Prabhas took less remuneration for his Saaho and Radhe Shyam film
ಅವರ ಪ್ರಕಾರ ದಕ್ಷಿಣ ಭಾರತದಿಂದ ಇದುವರೆಗೆ ಬಂದಿರಓ ಪಾನ್ ಇಂಡಿಯಾ ಫಿಲಂಗಳು ಮೂರೇ- ಬಾಹುಬಲಿ, ಕೆಜಿಎಫ್ ಮತ್ತು ಪುಷ್ಪ. ಭಾರತೀಯ ಸಿನಿಮಾಗೆ ೧೦೦ ವರ್ಷಗಳ ಇತಿಹಾಸವಿದೆ. ನಾವು ಈಗಾಗಲೇ ಉತ್ತರ ಮಾರುಕಟ್ಟೆಗಳನ್ನು ರೀಚ್ ಆಗಬೇಕಿತ್ತು. ಇನ್ನೂ ಆಗಿಲ್ಲ. ಈಗಷ್ಟೇ ಆ ಮಾರುಕಟ್ಟೆಗಳನ್ನು ನಾವು ಎಕ್ಸ್‌ಪ್ಲೋರ್ ಮಾಡ್ತಾ ಇದೀವಿ. ಈಗಾಗಲೇ ತುಂಬಾ ತಡವಾಗಿದೆ. ಭಾರತದ ಹೊರಗೆ ಹಿಂದಿ ಫಿಲಂಗಳು ಮಾತ್ರ ಭಾರತೀಯ ಸಿನಿಮಾ ಎಂಬ ಅಭಿಪ್ರಾಯ ಇದೆ. ಇದು ಸರಿಯಲ್ಲ. ನಾವು ಇನ್ನಷ್ಟು ಪ್ರಯತ್ನಶೀಲರಾಗಬೇಕು,'' ಅಂತಾರೆ ಪ್ರಭಾಸ್. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾವನ್ನು ಅವರು ತುಂಬಾ ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಕಾಂಪಿಟೀಟರ್ ಎಂದು ಅವರು ನೋಡುವುದಿಲ್ಲ. ನಾವೆಲ್ಲ ಸೇರಿ ಪಾನ್ ಇಂಡಿಯಾ ಫಿಲಂಗಳನ್ನು ಕೊಡಬೇಕು ಎನ್ನುತ್ತಾರೆ. 

ಬಾಹುಬಲಿ ನಂತರ ಮದುವೆ ಎಂದ Prabhas ಯಾಕೆ ಇನ್ನೂ ಸಿಂಗಲ್ ? ಏನಾಯಿತು?

ಪ್ರಾಜೆಕ್ಟ್ ಕೆ ಫಿಲಂಗೆ ಅವರು ದೀಪಿಕಾ ಪಡುಕೋಣೆ ಜೊತೆಗೆ ನಟಿಸುತ್ತಿದ್ದಾರೆ. ಇದರ ಶೂಟಿಂಗ್‌ ಈಗಾಗಲೇ ನಡೆಯುತ್ತಿದೆ. ದೀಪಿಕಾ ಅವರನ್ನು ಪ್ರಭಾಸ್ ಮೊದಲ ಬಾರಿಗೆ ಭೇಟಯಾದಾಗ, ''ನೀವು ತುಂಬಾ ನಾಚಿಕೆ ಸ್ವಭಾವದವರಾ?'' ಎಂದು ದೀಪಿಕಾ ಕೇಳಿದರಂತೆ. ಹೌದು ಎಂದು ಪ್ರಭಾಸ್ ಒಪ್ಪಿಕೊಂಡರಂತೆ. ಹೊಸಬರ ಜೊತೆ ಸಹಜವಾಗಿ ಇರಲು ನನಗೆ ಕೆಲವು ಸಮಯ ಬೇಕಾಗುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ ಪ್ರಭಾಸ್.   

KGF Chapter 2: ಗೂಗಲ್ ಮ್ಯಾಪ್​ನಲ್ಲಿ ಶೋ ಆಯ್ತು 'ಕೆಜಿಎಫ್ ಫಿಲ್ಮ್ ಸೆಟ್'​ ಲೋಕೆಶನ್!
 

Follow Us:
Download App:
  • android
  • ios