ಬಾಹುಬಲಿ ನಂತರ ಮದುವೆ ಎಂದ Prabhas ಯಾಕೆ ಇನ್ನೂ ಸಿಂಗಲ್ ? ಏನಾಯಿತು?
ಬಾಹುಬಲಿ ಸ್ಟಾರ್ ಪ್ರಭಾಸ್ (Prabhas) ಸೌತ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರ ಫ್ಯಾನ್ಸ್ ನಟನ ಮದುವೆಯ ಸುದ್ದಿ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಅವರು ಏಕೆ ಇನ್ನೂ ಸಿಂಗಲ್ ಆಗಿದ್ದಾರೆ
ಮತ್ತು ಅವರು ಪ್ರೀತಿಯಲ್ಲಿ ಅನ್‌ಲಕ್ಕಿ ಎಂದು ಇತ್ತೀಚೆಗೆ ಸ್ವತಃ ಪ್ರಭಾಸ್ ಬಹಿರಂಗಪಡಿಸಿದ್ದಾರೆ. ಅಲ್ಲದೇ, 'ಬಾಹುಬಲಿ 2' ಮುಗಿಸಿದ ನಂತರ ಪ್ರಭಾಸ್ ಮದುವೆಯಾಗಬೇಕಿತ್ತು ಆದರೆ ಸಾಧ್ಯವಾಗಲಿಲ್ಲ.
ಪ್ರಭಾಸ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ರಾಧೆ ಶ್ಯಾಮ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಾಧೆ ಶ್ಯಾಮ್ ಸಿನಿಮಾದಲ್ಲಿ ಅವರು ಜ್ಯೋತಿಷಿ, ಪಾಮ್ ರೀಡರ್ ಮತ್ತು ಲವರ್ ಬಾಯ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದಲ್ಲಿ ಪೂಜಾ ಹೆಗ್ಡೆ, ಭಾಗ್ಯಶ್ರೀ, ಸತ್ಯರಾಜ್, ಜಗಪತಿ ಬಾಬು, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಪ್ರಿಯದರ್ಶಿ ಮತ್ತು ಜಯರಾಮ್ ಪ್ರಮುಖ ಪೋಷಕ ಪಾತ್ರಗಳಲ್ಲಿದ್ದಾರೆ. ಹಿಂದಿ, ತಮಿಳು,ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ರಾಧೆ ಶ್ಯಾಮ್ 1970 ರ ದಶಕದಲ್ಲಿ ಯುರೋಪ್‌ನಲ್ಲಿ ಸೆಟ್ ಮಾಡಲಾಗಿದೆ. ಇದನ್ನು ಜಾರ್ಜಿಯಾ, ಇಟಲಿ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ.ಕೆಲವು ದಿನಗಳ ಹಿಂದೆ, ಮುಂಬೈನ ಅಂಧೇರಿಯಲ್ಲಿರುವ ಪಿವಿಆರ್ ಐಕಾನ್ ಮಾಲ್‌ನಲ್ಲಿ ನಡೆದ ಪ್ರಚಾರದ ಈವೆಂಟ್‌ನಲ್ಲಿ ಪ್ರಭಾಸ್‌ಗೆ ಮಾಧ್ಯಮದವರು ಅವರ ಪ್ರೀತಿಯ ಜೀವನದ ಬಗ್ಗೆ ಕೇಳಿದರು.
ರಾಧೆ ಶ್ಯಾಮ್ ಸಿನಿಮಾದಲ್ಲಿ ಫ್ರಭಾಸ್ ಅವರ ಭವಿಷ್ಯವಾಣಿಗಳು ವಿರಳವಾಗಿ ತಪ್ಪಾಗುವ ಜ್ಯೋತಿಷಿ ಮತ್ತು ಪಾಮ್ ರೀಡರ್ ಪಾತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಧ್ಯಮಗಳು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದವು .
ನೀವು ಎಂದಾದರೂ ನಿಮ್ಮ ಪಾಮ್ ರೀಡ್ ಮಾಡಿದ್ದಾರಾ ಅಥವಾ ಅವರ ಪ್ರೇಮ ಜೀವನದ ಬಗ್ಗೆ ಭವಿಷ್ಯ ನುಡಿದ್ದಾರಾ ಎಂದು ಕೇಳಿದರು. ಅದಕ್ಕೆ ಪ್ರಭಾಸ್ ಅವರು ಪ್ರೀತಿಯಲ್ಲಿ ಅವರು ಅನ್‌ಲಕ್ಕಿ ಎಂದು ಉತ್ತರಿಸಿದರು. ಏಕೆಂದರೆ ಅವರ ಪ್ರಣಯ ಜೀವನದ ಬಗ್ಗೆ ಅನೇಕ ಭವಿಷ್ಯವಾಣಿಗಳನ್ನು ಹೇಳಲಾಗಿದೆ. ಆದರೆ, ಅದು ತಪ್ಪಾಗಿದೆ ಎಂದರು.
'ಪ್ರೀತಿಯ ಬಗ್ಗೆ ನನ್ನ ಭವಿಷ್ಯ ತಪ್ಪಾಗಿದೆ ಮತ್ತು ಆ ಕಾರಣದಿಂದ ನಾನು ಮದುವೆಯಾಗದೇ ಉಳಿದೆ. ಬಾಹುಬಲಿ ಸಮಯದಲ್ಲಿ, ನನ್ನ ತಾಯಿಗೆ ಚಿತ್ರವನ್ನು ಪೂರ್ಣಗೊಳಿಸಲು ಸಮಯ ಕೇಳಿದೆ, ನಂತರ ನಾನು ಅದರ ಬಗ್ಗೆ ಯೋಚಿಸುತ್ತೇನೆ ಎಂದಿದೆ' ಎಂದು ಪ್ರಭಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ
ಮದುವೆಯ ಬಗ್ಗೆ ಮಾತುಕತೆ ಯಾವಾಗಲೂ ಮನೆಯಲ್ಲಿ ನಡೆಯುತ್ತದೆ. ಇದು ತುಂಬಾ ಸಾಮಾನ್ಯವಾಗಿದೆ. ಪ್ರತಿಯೊಬ್ಬ ತಾಯಿಯು ತನ್ನ ಮಗು ಸೆಟಲ್ ಆಗುವುದು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತಾರೆ ಮತ್ತು ಕೆಲವೊಮ್ಮೆ, ನನ್ನ ತಾಯಿ ಕೂಡ ನಾನು ಸೆಟೆಲ್ ಆಗುವಂತೆ ಕೇಳುತ್ತಾರೆ. ಈಗ, ನನಗೆ ಆಯ್ಕೆಯಿಲ್ಲ. ಆದ್ದರಿಂದ ನಾನು ಅವರಿಗೆ ಟೆನ್ಷನ್ ಮಾಡಿಕೊಳ್ಳಬೇಡಿ ಎಂದು ಹೇಳುತ್ತೇನೆ. ನಾನು ಮದುವೆಯಾಗಲು ಮತ್ತು ಸೆಟಲ್ ಆಗಲು ಬಯಸುತ್ತೇನೆ ಆದರೆ ಅದು ಸರಿಯಾದ ಸಮಯದಲ್ಲಿ ಸಂಭವಿಸುತ್ತದೆ' ಎಂದು ಇನ್ನಷ್ಟೂ ಹೇಳಿದ ಬಾಹುಬಲಿ ನಟ.