ಪ್ರಭಾಸ್, ಪೂಜಾ ಹೆಗ್ಡೆ ಅವರ ಬಹು ನಿರೀಕ್ಷಿತ ಚಿತ್ರ ರಾಧೆ ಶ್ಯಾಮ್ (Radhe Shyam). ಮಾರ್ಚ್ 11ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳು ಈಗಾಗಲೇ ಕುತೂಹಲ ಹೆಚ್ಚಿಸಿದ್ದು, ಹಾಡುಗಳು ಕೂಡ ಅಭಿಮಾನಿಗಳ ಮನಗೆದ್ದಿದೆ. ಹೀಗಿರುವಾಗ್ಲೇ ರಾಧೆ ಶ್ಯಾಮ್ ರಿವ್ಯೂ (Review) ಔಟ್ ಆಗಿದೆ.

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್ ಅ್ಯಂಡ್ ಔಟ್ ಲವ್ ಕಮ್ ರೊಮ್ಯಾಂಟಿಕ್ 'ರಾಧೆ ಶ್ಯಾಮ್' (Radhe Shyam) ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳು ಈಗಾಗಲೇ ಕುತೂಹಲ ಹೆಚ್ಚಿಸಿದ್ದು, ಹಾಡುಗಳು ಕೂಡ ಅಭಿಮಾನಿಗಳ ಮನಗೆದ್ದಿದೆ. ಸದ್ಯ 'ರಾಧೆ ಶ್ಯಾಮ್' ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದ್ದು, ಮಾರ್ಚ್ 11ರಂದು ಚಿತ್ರ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮೊದಲೇ 'ರಾಧೆ ಶ್ಯಾಮ್' ಚಿತ್ರ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈಗಾಗ್ಲೇ ಪ್ರಭಾಸ್‌- ಪೂಜಾ ಹೆಗ್ಡೆ ನಟನೆಯ 'ರಾಧೆ ಶ್ಯಾಮ್' ಚಿತ್ರ ಬಿಡುಗಡೆಯ ಡಿಜಿಟಲ್‌ ಹಕ್ಕುಗಳು 250 ಕೋಟಿ ರೂ ಗೆ ಮಾರಾಟವಾಗಿದೆ. ದಕ್ಷಿಣ ಭಾರತದ ಭಾಷೆಗಳಾದ- ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಚಿತ್ರವು ಜೀ-5 ವೇದಿಕೆಯಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. 

Radhe Shyam: ಟ್ರೇಲರ್ ಕಂಡು ದಂಗಾದ ಫ್ಯಾನ್ಸ್.. ಮದುವೆ ಗುಟ್ಟು ಕೊಟ್ಟ ಬಾಹುಬಲಿ!

‘ರಾಧೆ ಶ್ಯಾಮ್’ ಬಹುದೊಡ್ಡ ನಿರ್ಮಾಣ ಸಂಸ್ಥೆಯಾಗಿರುವ ಯುವಿ ಕ್ರಿಯೇಷನ್ ಸಂಸ್ಥೆಯ 12ನೇ ಸಿನಿಮಾ. ಅಂದಹಾಗೆ 'ರಾಧೆ ಶ್ಯಾಮ್' ಚಿತ್ರವನ್ನು ಅಮಿತಾಭ್ ನಿರೂಪಿಸಲಿದ್ದಾರೆ. ಈ ಕುರಿತು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಬಿಗ್ಬಿ ಧ್ವನಿ ನೀಡಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಕನ್ನಡ ವರ್ಷನ್ ನಿರೂಪಣೆಗೆ ಶಿವರಾಜ್‌ ಕುಮಾರ್ ಅವರು ಹಿನ್ನೆಲೆ ಧ್ವನಿ ನೀಡಿದ್ದು, ಅದೇ ರೀತಿ ತೆಲುಗಿನಲ್ಲಿ ರಾಜಮೌಳಿ (Rajamouli) ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಿರೂಪಿಸಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ಸ್ಟಾರ್‌ಗಳು 'ರಾಧೆ ಶ್ಯಾಮ್' ತಂಡದ ಭಾಗವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿಸಿದ್ದಾರೆ. 'ನಿಮ್ಮ ಧ್ವನಿಯಿಂದಾಗಿ ಈ ರೊಮ್ಯಾಂಟಿಕ್ ಕಥೆಯನ್ನು ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು' ಎಂದು ಶಿವರಾಜ್ ಕುಮಾರ್, ರಾಜಮೌಳಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರಿಗೆ 'ರಾಧೆ ಶ್ಯಾಮ್' ನಿರ್ಮಾಣ ಸಂಸ್ಥೆಯಾದ 'ಯುವಿ ಕ್ರಿಯೇಷನ್ಸ್' ಟ್ವೀಟ್ ಮೂಲಕ ಧನ್ಯವಾದ ತಿಳಿಸಿದೆ. 

ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ ಇದು. ಆದರೆ, ಟ್ರೇಲರ್‌ನಲ್ಲಿ ಬಿಟ್ಟಿರುವ ಡೈಲಾಗ್‌ಗಳು ಅಭೂತಪೂರ್ವ ಪ್ರೇಮಕತೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ‘ನಿನ್ನ ಪ್ರೀತಿ ನನಗೆ ಒಂದು ವರ, ಅದನ್ನ ಪಡೆಯಕ್ಕೆ ಯುದ್ಧಾನೇ ಮಾಡಬೇಕು’, ‘ನೀನು ರೋಮಿಯೋ ಅಲ್ಲದೆ ಇರಬಹುದು. ಆದ್ರೆ, ನಾನು ಜೂಲಿಯೇಟ್. ನನ್ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತಿಯಾ’ ಎನ್ನುವಂತಹ ಡೈಲಾಗ್‌ಗಳು ಪ್ರೇಮ ಯುದ್ಧದ ಕತೆ ಹೇಳುವಂತಿದೆ.

Radhe Shyam: ಪ್ರಭಾಸ್​ ಚಿತ್ರದ ಕಥೆ ಹೇಳಲಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ!

'ರಾಧೆ ಶ್ಯಾಮ್' ಚಿತ್ರ ಮಾರ್ಚ್ 11ಕ್ಕೆ ಬಿಡುಗಡೆಯಾಗುತ್ತಿದ್ದು, ಸೆನ್ಸಾರ್ ಮಂಡಳಿಯ. ಸದಸ್ಯ ಉಮೈರ್ ಸಂಧು ಅವರು ರಾಧೆ ಶ್ಯಾಮ್ ಅವರನ್ನು ವೀಕ್ಷಿಸಿದ್ದಾರೆ. ಮತ್ತು ಟ್ವಿಟರ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ‘ರಾಧೆಶ್ಯಾಮ್ ಚಿತ್ರದ ಮೊದಲಾರ್ಧ ಮುಗಿದಿದೆ. ಚಿತ್ರದಲ್ಲಿ ಅತ್ಯುತ್ತಮ ವಿಎಫ್‌ಎಕ್ಸ್ ಬಳಸಲಾಗಿದೆ. ಭಾರತದಲ್ಲಿ ಪ್ರಭಾಸ್ ಅವರ ಕ್ಲಾಸ್ ಮತ್ತು ಸ್ಟೈಲ್ ಅನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಕೆಮಿಸ್ಟ್ರಿ ಅದ್ಭುತವಾಗಿದೆ. ರಾಧೆ ಶ್ಯಾಮ್‌ನಲ್ಲಿ ರಹಸ್ಯ ಮುಂದುವರಿಯುತ್ತದೆ’ ಎಂದು ಸೆನ್ಸಾರ್ ಮಂಡಳಿಯ. ಸದಸ್ಯ ಉಮೈರ್ ಸಂಧು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಚಿತ್ರವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಾಧೆ ಶ್ಯಾಮ್ ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವು 1970ರ ದಶಕದಲ್ಲಿ ಯುರೋಪ್ನಲ್ಲಿ ನಡೆಯುತ್ತದೆ. ಇದನ್ನು ಜಾರ್ಜಿಯಾ, ಇಟಲಿ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ. ಉಮೈರ್ ಸಂಧು ನೀಡಿರುವ ಪ್ರತಿಕ್ರಿಯೆಯು ಚಿತ್ರದ ಕುರಿತಾದ ನೀಡಿರುವ ಮೊದಲ ರಿವ್ಯೂ ಆಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.