'ಕೆಜಿಎಫ್' ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್​ ನೀಲ್ ತಮ್ಮ ಕೆಲಸ ಹೇಗಿರುತ್ತದೆ ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಿದ್ದರು. ಇದೀಗ 'ಕೆಜಿಎಫ್ ಫಿಲ್ಮ್ ಸೆಟ್'​ನ್ನು ಗೂಗಲ್ ಮ್ಯಾಪ್ ತೋರಿಸುತ್ತಿದೆ.

'ಕೆಜಿಎಫ್​ 2' (KGF 2) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಏಪ್ರಿಲ್​ 14ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಮಾರ್ಚ್​ 27ರಂದು ಸಿನಿಮಾದ ಟ್ರೇಲರ್ (Trailer) ರಿಲೀಸ್​ ಮಾಡುವ ಬಗ್ಗೆ ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು. ಸದ್ಯ 'ಕೆಜಿಎಫ್' ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ತಮ್ಮ ಕೆಲಸ ಹೇಗಿರುತ್ತದೆ ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಿದ್ದರು. ಮುಖ್ಯವಾಗಿ 'ಕೆಜಿಎಫ್' ಚಿತ್ರದಲ್ಲಿ ಶೂಟಿಂಗ್ ಲೋಕೆಶನ್ (Shooting Spot) ನೋಡಿ ಅಭಿಮಾನಿಗಳು ದಂಗಾಗಿದ್ದರು. ಯಾವುದಾದರೂ ಸಿನಿಮಾ ಇಷ್ಟವಾದರೆ, ಆ ಜಾಗಕ್ಕೆ ನಾವು ಹೋಗಬೇಕು ಎಂದು ಅನಿಸುವುದು ಸಾಮಾನ್ಯ. ಅದರಂತೆ 'ಕೆಜಿಎಫ್' ಚಿತ್ರವನ್ನು ವೀಕ್ಷಿಸಿದವರು ಶೂಟಿಂಗ್ ಲೋಕೆಶನ್​ ನೋಡಿ ಸಖತ್ ಇಂಪ್ರೆಸ್ ಆಗಿದ್ದರು. ಇದೀಗ ಆ ಲೋಕೆಶನ್‍ನನ್ನು ಗೂಗಲ್ ಮ್ಯಾಪ್ (Google Map) ತೋರಿಸುತ್ತಿದೆ.

Add Asianetnews Kannada as a Preferred SourcegooglePreferred

ಹೌದು! 'ಕೆಜಿಎಫ್' ಸಿನಿಮಾ​ ಸೃಷ್ಟಿ ಮಾಡಿರುವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್​ ನೀಲ್​ ಆ ರೀತಿಯ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದರು. ಇದೀಗ ಈ ದಾಖಲೆಗೆ ಮತ್ತೊಂದು ಹೊಸ ದಾಖಲೆ ಸೇರಿಕೊಂಡಿದ್ದು, ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಯಾವುದೇ ಸೆಟ್‍ಗಳನ್ನು ಹಾಕಿದರೂ ಅದು ತಾತ್ಕಾಲಿಕವಾಗಿರುತ್ತದೆ. ಸೆಟ್ ಹಾಕಿದ ಮೇಲೆ ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ 'ಕೆಜಿಎಫ್' ಸೆಟ್ ತೆರವಾದರೂ, ಆ ಜಾಗ ಮಾತ್ರ 'ಕೆಜಿಎಫ್' ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದ್ದು, ಗೂಗಲ್​ ಮ್ಯಾಪ್​ನಲ್ಲಿ 'ಕೆಜಿಎಫ್ ಫಿಲ್ಮ್ ಸೆಟ್'​ (KGF Film Set) ಎಂದು ಮರುನಾಮಕರಣಗೊಂಡಿದೆ. 

KGF Chapter 2 ವೀಕ್ಷಿಸಿ ರಿವ್ಯೂವ್ ನೀಡಿದ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್!

ಇದನ್ನು ಕಂಡು ಅಭಿಮಾನಿಗಳು (Fans) ಸಖತ್​ ಥ್ರಿಲ್​ ಆಗಿದ್ದಾರೆ. ಇದು ನಮ್ಮ ಕನ್ನಡ ಸಿನಿಮಾಗಳಿಗೆ ಇರುವ ತಾಕತ್ತು ಎಂದು ಫ್ಯಾನ್ಸ್ ಕಮೆಂಟ್​ ಮಾಡುತ್ತಿದ್ದು, ಯಾರೂ ಮಾಡಿರದಂತಹ ಹೊಸ ದಾಖಲೆಯನ್ನು 'ಕೆಜಿಎಫ್'​ ಸಿನಿಮಾ ಮಾಡಿದೆ ಎಂಬುದಕ್ಕೆ ಇದೂ ಕೂಡ ಸಾಕ್ಷಿ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ. ಗೂಗಲ್‌ನಲ್ಲಿ (Google) 'ಕೆಜಿಎಫ್' ಸೆಟ್ ಎಂದು ಟೈಪ್ ಮಾಡಿದಾಗ 'ಕೆಜಿಎಫ್ ಫಿಲ್ಮ್ ಸೆಟ್' ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ (Karnataka) ಕೆಜಿಎಫ್ ಸೇರಿದಂತೆ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾತ್ರವಲ್ಲದೇ 'ಕೆಜಿಎಫ್'ನಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. 



ಆ ಸೆಟ್‍ನಲ್ಲಿ 'ಕೆಜಿಎಫ್' ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸಿನಿಮಾ ಸೆಟ್‌ಗಳನ್ನು ಹಲವು ವರ್ಷಗಳ ಕಾಲ ಚಿತ್ರತಂಡ ಅಲ್ಲೇ ಉಳಿಸಿಕೊಂಡಿತು. ಇದೀಗ ಆ ಜಾಗ 'ಕೆಜಿಎಫ್ ಫಿಲ್ಮ್ ಸೆಟ್' ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದೆ. ಇನ್ನು 'ಚಂಡಮಾರುತದ ಮೊದಲು ಯಾವಾಗಲೂ ಗುಡುಗು ಬರುತ್ತದೆ! 'ಕೆಜಿಎಫ್​ ಚಾಪ್ಟರ್ 2' ಟ್ರೇಲರ್ ಮಾರ್ಚ್ 27 ರಂದು ಸಂಜೆ 6:40ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಶಾಂತ್ ನೀಲ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡು ಯಶ್ (Yash) ರಾ ಲುಕ್‌ನಲ್ಲಿರುವ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು.

KGF Chapter 2: ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ಕೆಜಿಎಫ್ 2' ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್!

ಸದ್ಯ 'ಕೆಜಿಎಫ್: ಚಾಪ್ಟರ್ 1' ಭರ್ಜರಿ ಹಿಟ್ ಆಗಿರುವುದರಿಂದ ಪಾರ್ಟ್ 2 ಮೇಲೆ ಎಲ್ಲರ ಕಣ್ಣು ಇದೆ. ಕರ್ನಾಟಕದಲ್ಲಿ ಇರುವಷ್ಟೇ ಕ್ರೇಜ್‌ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಉತ್ತರ ಭಾರತದಲ್ಲೂ ಇದೆ. ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದು, ಟ್ರೇಲರ್ ರಿಲೀಸ್ ಬಳಿಕ ಹಾಡುಗಳನ್ನು ಒಂದೊಂದಾಗಿಯೇ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರವು ವಿಶ್ವದಾದ್ಯಾಂತ‌ ಏಕಕಾಲದಲ್ಲಿ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತೆರೆ ಕಾಣಲಿದ್ದು, ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ.