ಬಿ-ಟೌನ್‌ ನನ್ನನ್ನು ಖರೀದಿ ಮಾಡಲು ಹಣವಿಲ್ಲ ಅವರಿಗೆ ಆಗುವುದಿಲ್ಲ ಹೀಗಾಗಿ ನಾನು ಸೌತ್‌ ಸಿನಿಮಾಗಳನ್ನು ಮಾಡುತ್ತೀನಿ ಎಂದ ಮಹೇಶ್ ಬಾಬು... 

ದಕ್ಷಿಣ ಭಾರತ ಚಿತ್ರರಂಗದ ಪ್ರಿನ್ಸ್‌ ಮಹೇಶ್‌ ಬಾಬು (Mahesh Babu) ಇತ್ತೀಚಿಗೆ ಆದಿ ಶೇಸ್‌ ನಟನೆಯ ಮೇಜರ್ (Major) ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಾವ ಕಾರಣಕ್ಕೆ ಪ್ರಿನ್ಸ್‌ ಬಾಲಿವುಡ್‌ (Bollywood) ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಯಾವ ರೀತಿ ಕಥೆಗಳನ್ನು ಕೇಳುಬೇಕು ಅಂದುಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಮಹೇಶ್‌ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. 

'ಬಾಲಿವುಡ್‌ ಸಿನಿಮಾಗಳಿಂದ ನನಗೆ ತುಂಬಾ ಆಫರ್‌ಗಳು ಬರುತ್ತದೆ ಆದರೆ ಅವರೆಲ್ಲಾ ನನಗೆ ಹಣ ಕೊಟ್ಟು ಖರೀದಿ ಮಾಡಲು ಆಗುವುದಿಲ್ಲ. ಹೀಗಾಗಿ ಸುಮ್ಮನೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ನನಗೆ ಸೌತ್ ಚಿತ್ರರಂಗದಲ್ಲಿ ಸಿಗುವ ಪ್ರೀತಿ ಮತ್ತು ಆಫರ್‌ ಎಲ್ಲೂ ಸಿಗುವುದಿಲ್ಲ. ಸದಾ ಸಿನಿಮಾ ಮಾಡಬೇಕು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಅಷ್ಟೇ ನನ್ನ ಗುರಿ. ನನ್ನ ಕನಸು ನನಸು ಆಗುತ್ತಿದೆ ಇದಕ್ಕಿಂತ ಸಂತೋಷ ಬೇಕಾ?' ಎಂದು ಮಹೇಶ್ ಬಾಬು ಮಾತನಾಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರು ಯೂಟ್ಯೂಬ್ (Youtube) ಲೋಕಕ್ಕೆ ಮತ್ತು ಓಟಿಟಿ (Ott) ತೆರೆಯುವ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ ಆದರೆ ಮಹೇಶ್ ಬಾಬಯ 'ನಾನು ದೊಡ್ಡ ಪರದೆಗೆ ಮಾತ್ರ ಸೀಮಿತ ಹೀಗಾಗಿ ನಾನು ಎಂದೂ ಡಿಜಿಟಲ್‌ ಬಗ್ಗೆ ಯೋಚನೆ ಮಾಡುವುದಿಲ್ಲ' ಎಂದಿದ್ದಾರೆ.

'ನಾನು ಸದಾ ತೆಲುಗು ಸಿನಿಮಾ ವೀಕ್ಷಿಸುತ್ತೀನಿ ಹಾಗೆ ವಿಶ್ವಾದ್ಯಂತ ಸಿನಿ ರಸಿಕರು ತೆಲುಗು ಸಿನಿಮಾ ನೋಡಬೇಕು ಅನ್ನೋ ಆಸೆ ನನಗೆ. ಈಗ ನನ್ನ ಕನಸು ನನಸಾಗುತ್ತಿದೆ ಅದಿಕ್ಕೆ ಖುಷಿಯಾಗಿರುವೆ. ನನಗೆ ತುಂಬಾ ಸ್ಟ್ರಾಂಗ್ ಅಭಿಪ್ರಾಯ ಏನೆಂದರೆ ನಾನು ಶಕ್ತಿನೇ ತೆಲುಗು ಸಿನಿಮಾ ಹಾಗೂ ನಾನು ನನ್ನ ಎಮೋಷನ್‌ ತೆಲುಗು ಚಿತ್ರರಂಗ. ಈಗ ಭಾಷೆ ಬಗ್ಗೆ ಬೇದ ಭಾವ ಇಲ್ಲ ಎಲ್ಲಾ ಭಾಷೆ ಸಿನಿಮಾಗಳನ್ನು ಒಂದೇ ರೀತಿ ನೋಡುತ್ತಿದ್ದಾರೆ' ಎಂದು ಪ್ರಿನ್ಸ್‌ ಹೇಳಿದ್ದಾರೆ.

Sarkaru Vaari Paata: ಶೂಟಿಂಗ್ ಸೆಟ್‌ನಲ್ಲಿ ಮಹೇಶ್‌ ಬಾಬು ಕೆನ್ನೆಗೆ ಹೊಡೆದ ನಟಿ?

ಮಹೇಶ್ ಬಾಬು ಸದ್ಯ ಸರ್ಕಾರಿ ವಾರ ಪಾಟ (sarkaru vaari paata) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ (Rajamouli) ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಬಾರಿಗೆ ರಾಜಮೌಳಿ ಮತ್ತು ಮಹೇಶ್ ಬಾಬು ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಬಾಬು, 'ರಾಜಮೌಳಿ ಅವರ ಪ್ರಜೆಕ್ಟ್ ಬಗ್ಗೆ ನಾನು ಕೂಡ ಉತ್ಸುಕನಾಗಿದ್ದೇನೆ' ಎಂದು ಹೇಳಿದರು.

ಮಗಳ ಕುಚಿಪುಡಿ ನೃತ್ಯದ ವಿಡಿಯೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ ಮಹೇಶ್ ಬಾಬು

ಮಹೇಶ್ ಬಾಬು ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ ಮಹೇಶ್ ಬಾಬು ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. 1979ರಲ್ಲಿ ಬಾಲಕಲಾವಿದನಾಗಿ ಬಣ್ಣ ಹಚ್ಚಿದರು. ಬಳಿಕ ರಾಜಕುಮಾರುಡು ಸಿನಿಮಾ ಮೂಲಕ ನಾಯಕನಾಗಿ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ್ದರು. ಈ ಸಿನಿಮಾ ಮಹೇಶ್ ಬಾಬುಗೆ ಅತ್ಯುತ್ತಮ ನಟ ನಂದಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಬಳಿಕ ಅನೇಕ ಸಿನಿಮಾಗಳಲ್ಲಿ ಮಹೇಶ್ ಬಾಬು ನಟಿಸಿದ್ದಾರೆ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.