ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕೋಟಾ ಶ್ರೀನಿವಾಸ್‌ ರಾವ್‌ ಅವರ ಫೋಟೋವೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. 

ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ವಿಲನ್ ಆಗಿ ಮೆರೆದಿದ್ದ‌ ನಟ ಕೋಟಾ ಶ್ರೀನಿವಾಸ ರಾವ್ ಅವರ ಇತ್ತೀಚಿನ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಈ ಫೋಟೋ ನೋಡಿ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಿನಿಮಾದಿಂದ ದೂರವಿರುವ ನಟ!

ಶ್ರೀನಿವಾಸ್‌ ರಾವ್‌ ಅವರು ಕಳೆದ ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವಿದ್ದಾರೆ. ಇತ್ತೀಚೆಗೆ, ಸಿನಿಮಾ ನಿರ್ಮಾಪಕ ಬಂಡ್ಲ ಗಣೇಶ್ ಈ ನಟರನ್ನು ಭೇಟಿಯಾಗಿ, ಅವರೊಂದಿಗಿನ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತೂಕ ಕಳೆದುಕೊಂಡಿರುವ ನಟ

ಬಂಡ್ಲ ಗಣೇಶ್ ಅವರು ಪವನ್ ಕಲ್ಯಾಣ್‌ ನಟನೆಯ 'ಗಬ್ಬರ್ ಸಿಂಗ್', ಜೂನಿಯರ್ ಎನ್‌ಟಿಆರ್‌ ನಟನೆಯ 'ಟೆಂಪರ್ʼ ಸಿನಿಮಾಗಳನ್ನು ನಿರ್ಮಿಸಿದ್ದರು. ಈ ಫೋಟೋದಲ್ಲಿ, ಕೋಟಾ ಶ್ರೀನಿವಾಸ ರಾವ್ ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರ ಕಾಲು ಕೂಡ ಊದಿಕೊಂಡಿದೆ. ಅಷ್ಟೇ ಅಲ್ಲದೆ ಸಿಕ್ಕಾಪಟ್ಟೆ ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ. ಈ ವೈರಲ್ ಫೋಟೋ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಈ ಫೋಟೋ ನೋಡಿ ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ.

  • ಶ್ರೀನಿವಾಸ್‌ ಅವರಿಗೆ ವಯಸ್ಸಾಗುತ್ತಿರುವುದನ್ನು ನೋಡಿ ಭಾವುಕನಾದೆ. ಅಂಥಹ ದಂತಕಥೆ.
  • ಈ ಸ್ಥಿತಿಯಲ್ಲಿ ನೋಡಲು ನೋವಾಗುತ್ತದೆ.
  • ನಾನು ಬಾಲ್ಯದಲ್ಲಿದ್ದಾಗ ಆ ನಾಲ್ಗುರು ಸಿನ ಸಮಯದಲ್ಲಿ ಬಾಲ್ಯದಲ್ಲಿ ಭೇಟಿಯಾಗಿದ್ದೆ. ದೇವರು ಅವರನ್ನು ಈ ರೋಗದಿಂದ ಶಮನ ಮಾಡಿ, ಸಾಮಾನ್ಯ ಸ್ಥಿತಿಗೆ ತರಲಿ.
  • ನನ್ನ ಜೀವನದಲ್ಲಿ ನೋಡಿದ ಅತ್ಯುತ್ತಮ ನಟರಲ್ಲಿ ಕೋಟಾ ಶ್ರೀನಿವಾಸ ರಾವ್ ಕೂಡ ಒಬ್ಬರು.
  • ಅವರನ್ನು ಈ ಸ್ಥಿತಿಯಲ್ಲಿ ನೋಡಲು ಸ್ವಲ್ಪ ದುಃಖವಾಗುತ್ತದೆ.
  • ವ್ಯಕ್ತಿಯು ಅನಾರೋಗ್ಯದಲ್ಲಿದ್ದಾಗ ಈ ರೀತಿ ಫೋಟೋಗಳನ್ನು ಕ್ಲಿಕ್ ಮಾಡುವುದು ನನಗೆ ಇಷ್ಟವಿಲ್ಲ.

ಕೋಟಾ ಶ್ರೀನಿವಾಸ ರಾವ್‌ ಸಿನಿಮಾಗಳು

pranam khareedu ಮೂಲಕ 1978ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಅವರು ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸನ್‌ ಆಫ್‌ ಸತ್ಯಮೂರ್ತಿ, ಅತ್ತಾರಿಂಟಿಕಿ ದಾರೇದು, ರೆಡಿ, ಸರ್ಕಾರ್‌, ಬೊಮ್ಮರಿಲ್ಲು, ಈಡಿಯಟ್‌, ಗೋವಿಂದ ಗೋವಿಂದ, ಹೆಲೋ ಬ್ರದರ್, ಮನಿ, ಶಿವ, ಆಹಾ ನಾ ಪೆಲ್ಲಂಟ, ಸಾಮಿ

ಕನ್ನಡ ಸಿನಿಮಾಗಳು

  • ರಕ್ತ ಕಣ್ಣೀರು
  • ಲವ್‌
  • ನಮ್ಮ ಬಸವ
  • ಶ್ರೀಮತಿ
  • ಕಬ್ಜ
  • ನಮ್ಮಣ್ಣ
  • ರಾಜಕಾರಣಿ ಕೂಡ ಹೌದು!

ನಟನೆ ಜೊತೆಗೆ ಅವರು ಓರ್ವ ರಾಜಕಾರಣಿ ಕೂಡ ಹೌದು. ಆಂಧ್ರಪ್ರದೇಶದ ವಿಜಯವಾಡ ಈಸ್ಟ್‌ನಿಂದ 1999ರಿಂದ 2004ರವರೆಗೆ ಶ್ರೀನಿವಾಸ್‌ ರಾವ್‌ ಅವರು ಶಾಸಕರಾಗಿದ್ದರು. ಭಾರತೀಯ ಸಿನಿಮಾಕ್ಕೆ ಶ್ರೀನಿವಾಸ್‌ ನೀಡಿದ ಕೊಡುಗೆಯಿಂದಾಗಿ ಅವರಿಗೆ 2015ರಲ್ಲಿ, ಭಾರತ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಕೊಟ್ಟು ಪುರಸ್ಕರಿಸಲಾಯಿತು.

ಮಕ್ಕಳು

ಕೋಟಾ ಶ್ರೀನಿವಾಸ್‌ ರಾವ್‌ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಓರ್ವ ಮಗ, ಇಬ್ಬರು ಹೆಣ್ಣು ಮಕ್ಕಳು. 2010ರ ರಸ್ತೆ ಅಪಘಾತದಲ್ಲಿ ಮಗ ನಿಧನರಾಗಿದ್ದಾರೆ. ಕೋಟಾ ಶ್ರೀನಿವಾಸ್‌ ರಾವ್‌ ಅವರ ಸಹೋದರ ಕೋಟಾ ಶಂಕರ್‌ ರಾವ್‌ ಕೂಡ ನಟರಾಗಿದ್ದು, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.