- Home
- Entertainment
- Sandalwood
- Kiccha Sudeep ಸಿನಿಮಾ ಆಫರ್‌ನ್ನೇ ರಿಜೆಕ್ಟ್ ಮಾಡಿದ್ದ ಕನ್ನಡದ ಇಬ್ಬರು ಕಿರುತೆರೆ ನಟಿಯರು! ಯಾಕೆ?
Kiccha Sudeep ಸಿನಿಮಾ ಆಫರ್‌ನ್ನೇ ರಿಜೆಕ್ಟ್ ಮಾಡಿದ್ದ ಕನ್ನಡದ ಇಬ್ಬರು ಕಿರುತೆರೆ ನಟಿಯರು! ಯಾಕೆ?
ನಟ ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡಬೇಕು ಅಂತ ಅನೇಕರು ಕಾಯುತ್ತಿರುತ್ತಾರೆ. ಎಷ್ಟೋ ಜನರಿಗೆ ಇವರೇ ಕ್ರಶ್, ರೋಲ್ ಮಾಡೆಲ್ ಎಲ್ಲವೂ. ಕಿಚ್ಚ ಸುದೀಪ್ ಸ್ಟೈಲ್, ಸ್ವಾಗ್ ಎಲ್ಲವೂ ಅನೇಕರಿಗೆ ಇಷ್ಟ. ಹೀಗಿರುವಾಗ ಕನ್ನಡದ ಇಬ್ಬರು ನಟಿಯರು ಇವರ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದರು.

ಹೌದು, ʼಬಿಗ್ ಬಾಸ್ ಕನ್ನಡ ಸೀಸನ್ 8’ ಸ್ಪರ್ಧಿ ದಿವ್ಯಾ ಸುರೇಶ್ ಅವರಿಗೆ ʼಹೆಬ್ಬುಲಿʼ ಸಿನಿಮಾದಲ್ಲಿ ಸುದೀಪ್ ತಂಗಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು.
ದಿವ್ಯಾ ಸುರೇಶ್ ಅವರು ಕಿಚ್ಚ ಸುದೀಪ್ ನನ್ನ ಕ್ರಶ್, ಅವರ ತಂಗಿ ಪಾತ್ರ ಮಾಡೋಕೆ ರೆಡಿ ಇಲ್ಲ ಎಂದು ನೇರವಾಗಿ ಹೇಳಿದ್ದರಂತೆ.
ಈ ವಿಚಾರದ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಆಗ ದಿವ್ಯಾ ಇದೇ ಮಾತು ಹೇಳಿದ್ದರು.
ಅಂದಹಾಗೆ ದಿವ್ಯಾ ಸುರೇಶ್ ಅವರು ʼಸ್ನೇಹದ ಕಡಲಲ್ಲಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಅಂದಹಾಗೆ ʼಒಲವಿನ ನಿಲ್ದಾಣʼ, ʼಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ನಟಿ ಶಿಲ್ಪಾ ಅಯ್ಯರ್ ಅವರಿಗೆ ಕಿಚ್ಚ ಸುದೀಪ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅವರು ಕೂಡ ಆಗೋದಿಲ್ಲ ಎಂದು ಹೇಳಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

