ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್( Kichcha Sudeep) ಗರುಡ ಗಮನ ವೃಷಭ ವಾಹನ ನೋಡಿ ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪತ್ರದ ಮೂಲಕ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸ್ಯಾಂಡಲ್ ವುಡ್ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ(Raj B Shetty) ಮತ್ತು ರಿಷಭ್ ಶೆಟ್ಟಿ(Rishab Shetty) ನಟನೆಯ ಗರುಡ ಗಮನ ವೃಷಭ ವಾಹನ(Garuda Gamana Vrushabha Vahana) ಸಿನಿಮಾ ಬಿಡುಗಡೆಯಾಗಿ ಅನೇಕ ತಿಂಗಳೇ ಆಗಿದೆ. ಸಿನಿಮಾಗೆ ಪ್ರೇಕ್ಷಕರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ರಾಜ್ ಬಿ ಶೆಟ್ಟಿ ವಿಭಿನ್ನ ಪ್ರಯತ್ನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಕನ್ನಡಿಗರು ಮಾತ್ರವಲ್ಲದೇ ಬಾಲಿವುಡ್ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸ್ಯಾಂಡಲ್ ವುಡ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್( Kichcha Sudeep) ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪತ್ರದ ಮೂಲಕ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ನಟ ಕಿಚ್ಚ ಸುದೀಪ್ ಹೊಸಬರ ಮತ್ತು ಒಳ್ಳೆಯ ಸಿನಿಮಾಗಳಿಗೆ ಬೆನ್ನು ತಟ್ಟುತ್ತಾರೆ. ಸಿನಿಮಾ ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡುತ್ತಾರೆ. ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತಾರೆ. ಇದೀಗ ರಾಜ್ ಬಿ ಶೆಟ್ಟಿ ಸಿನಿಮಾಗೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕಿಚ್ಚ ಬರೆದ ದೀರ್ಘ ಪತ್ರದಲ್ಲಿ, 'ಸ್ಕ್ರಿಪ್ಟ್ ಮಾಡಲು ಕಂಟೆಂಟ್ ಹುಡುಕಾಟ ಮಾಡುವುದು ಪ್ರತಿಯೊಬ್ಬ ಕ್ರೇಯಟರ್ ನ ಭಾಗವಾಗಿದೆ. ಸ್ಕ್ರಿಪ್ಟ್, ಮೇಕಿಂಗ್ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಎಲ್ಲರನ್ನು ಮತ್ತು ಪ್ರೇಕ್ಷಕರನ್ನು ಎಕ್ಸಾಯಿಟ್ ಆಗುವಂತೆ ಮಾಡಬೇಕು. ಇದು ನ್ನ ಅಭಿಪ್ರಾಯ ಮಾತ್ರವಲ್ಲ. ಈ ರೀತಿ ಸಿನಿಮಾ ಮಾಡಿದ ಇಡೀ ತಂಡಕ್ಕೆ ನನ್ನ ಮೆಚ್ಚುಗೆ. ನನಗೆ ಸಿನಿಮಾ ನೋಡಲು ಅವಕಾಶ ಸಿಗುವುದು ತೀರಾ ಕಡಿಮೆ. ನಿನ್ನ ರಾತ್ರಿ ಈ ಸಿನಿಮಾ ನೋಡುವ ಅವಕಾಶ ಸಿಕ್ಕಿತು. ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದ ಬಳಿಕ ನನ್ನ ಮನಸ್ಸಿನಿಂದ ಬಂದಿದ್ದು ವಾವ್..
'ಬರವಣಿಗೆ ಬ್ರಿಲಿಯಂಟ್, ಮ್ಯೂಸಿಕ್ ಅದ್ಭುತ, ಎಲ್ಲಾ ಕಲಾವಿದರ ನಟನೆ ಸೂಪರ್' ಎಂದಿದ್ದಾರೆ. 'ರಿಷಬ್ ಶೆಟ್ಟಿ ತನ್ನ ಪಾತ್ರದೊಳಗೆ ಆಳವಾಗಿ ಹೋಗಿದ್ದಾರೆ. ಅವರ ಡೈಲಾಗ್ ಡಿಲಿವರಿ ಟೈಮಿಂಗ್ ಇಂಪ್ರೆಸಿವ್ ಆಗಿದೆ. ಅವರನ್ನು ಅವರನ್ನ ಅದ್ಭುತ ನಟನನ್ನನಾಗಿ ರೂಪಿಸಿಕೊಂಡಿದ್ದಾರೆ' ಎಂದು ಸುದೀಪ್ ಹರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ ಬಗ್ಗೆ ಹೇಳಿದ್ದಾರೆ.
ಪ್ರೊ. ನಂಜುಂಡಸ್ವಾಮಿ ಬಯೋಪಿಕ್‌ನಲ್ಲಿ ಕಿಚ್ಚ ಸುದೀಪ್?
'ರಾಜ್...ಏನು ಹೇಳಲಿ ಇವರ ಬಗ್ಗೆ'
'ಇದು ನಾನು ನೋಡಿದ ರಾಜ್ ಅವರ ಮೊದಲ ಸಿನಿಮಾ. ಕ್ಯಾಮರಾ ಹಿಂದೆ ಮತ್ತು ಮುಂಭಾಗದಲ್ಲಿ ಅದ್ಭುತ. ಅತ್ಯುತ್ತಮ ಬರವಣಿಗೆ. ಶಿವ ಪಾತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಪ್ರತಿ ಫ್ರೇಮಿನಲ್ಲೂ ಅದ್ಭುತವಾಗಿದೆ. ನಿಜವಾಗಿಯೂ ಪ್ರತಿಭಾವಂತ ನಟ' ಎಂದು ಹೇಳಿದ್ದಾರೆ. ಕಿಚ್ಚ ಬರೆದ ದೀರ್ಘ ಪತ್ರ ಚಿತ್ರತಂಡಕ್ಕೆ ಖುಷಿ ನೀಡಿದೆ. ಸುದೀಪ್ ಅವರ ಸುಂದರ ಸಾಲುಗಳಿಗೆ ರಾಜ್ ಬಿ ಶೆಟ್ಟಿ ಸಂತೋಷಗೊಂಡಿದ್ದಾರೆ.
ನಾನು ಸುದೀಪ್ ಸಹೇಬರ ಪರ; ವಿವಾದಕ್ಕೆ ಅಂತ್ಯ ಹಾಡಿದ ಯೋಗರಾಜ್ ಭಟ್
ಅಂದಹಾಗೆ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣನನ್ನ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಕಿಚ್ಚನ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಭಾರಿ ನೀರೀಕ್ಷೆಯ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ.
