200 ಕೋಟಿ ವೆಚ್ಚದ ಸಿನಿಮಾ ವಾರ್ 2. ಓಪನಿಂಗ್ ಸೀನ್ ಮಾಡಲು ಹೋಗಿ ಜ್ಯೂನಿಯರ್ ಎನ್‌ಟಿಆರ್‌ಗೆ ಬಂತು ಆಪತ್ತು....

ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿ ಜ್ಯೂನಿಯರ್ ಎನ್‌ಟಿಆರ್‌ ವಾರ್ 2 ಚಿತ್ರದ ಮೂಲಕ ಬಾಲಿವುಡ್‌ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 200 ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾ ಈಗಾಗಲೆ ಭಾಗ 1ರಲ್ಲಿ ಪ್ರೇಕ್ಷಕರನ್ನು ಗೆದ್ದಿದೆ, ಹೀಗಾಗಿ ವಾರ್ 2 ಮಾಡಲು ಮುಂದಾಗಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಆಗಿರುವುದರಿಂದ ದೊಡ್ಡ ನಟ-ನಟಿಯರು ಇರಲೇ ಬೇಕು...ಆರ್‌ಆರ್‌ಅರ್‌ ಖ್ಯಾತಿಯ ಜ್ಯೂನಿಯರ್‌ ಎನ್‌ಟಿಆರ್‌ ವಾರ್‌ 2ಗೆ ಸಹಿ ಮಾಡಿ ಬಿ-ಟೌನ್‌ಗೆ ಕಾಲಿಟ್ಟರು. ವಾರ್‌ 2 ಮೊದಲ ದಿನವೇ ದೊಡ್ಡ ಎಡವಟ್ಟು ಆಗಿದೆ.

ಅಯಾ ಮುಖರ್ಜಿ ನಿರ್ದೇಶನ ಮಾಡುತ್ತಿರುವ ವಾರ್ 2 ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಮತ್ತು ಹೃತಿಕ್ ರೋಷನ್ ಪ್ರಮುಖ ಪಾತ್ರಧಾರಿಗಳು. ಹೀಗಾಗಿ ಇಬ್ಬರು ಸ್ಟಾರ್ ನಟರಿಗೆ ಒಳ್ಳೆಯ ಓಪನಿಂಗ್ ಸೀನ್ ನೀಡಲಾಗಿದೆ. ಜ್ಯೂನಿಯರ್ ಎನ್‌ಟಿಆರ್‌ ಓಪನಿಂಗ್ ಸೀನ್ ಚಿತ್ರೀಕರಣ ಮಾಡುವಾಗ ಗಂಭೀರವಾಗಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂನಿಯರ್‌ ಕೈಗೆ ಬಲವಾಗಿ ಪೆಟ್ಟು ಬಿದ್ದಿರುವ ಕಾರಣ ಎರಡು ತಿಂಗಳ ಕಾಲ ಸಂಪೂರ್ಣ ರೆಸ್ಟ್‌ನಲ್ಲಿ ಇರಬೇಕು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ವಾರ್ 2 ಸಿನಿಮಾ ಚಿತ್ರೀಕರಣ ತಡೆಯಾಗಲಿದೆ. 

ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ದಿನ ಹುಟ್ಟಿದ ಮಗಳ ಫೋಟೋವನ್ನು ವರಮಹಾಲಕ್ಷ್ಮಿ ಹಬ್ಬದಂದು ರಿವೀಲ್ ಮಾಡಿದ ಕಾವ್ಯಾ ಗೌಡ!

ವಾರ್ 2 ಸಿನಿಮಾವನ್ನು ಮುಂಬೈ ಅಥವಾ ಇಟಲಿಯಲ್ಲಿ ಚಿತ್ರೀಕರಣ ಮಾಡಬೇಕು ಎಂದು ಪ್ರೊಡಕ್ಷನ್ ಟೀಂ ಪ್ಲ್ಯಾನ್ ಮಾಡಿದೆ. ಜ್ಯೂನಿಯರ್ ಎನ್‌ಟಿಆರ್‌ ಓಪನಿಂಗ್ ಸೀನ್ ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗಿತ್ತು, ಈಗ ಎರಡು ತಿಂಗಳ ಬ್ರೇಕ್ ಆಗಿರುವುದರಿಂದ ಅಕ್ಟೋಬರ್‌ ತಿಂಗಳಿನಲ್ಲಿ ಮತ್ತೆ ಆರಂಭಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಜ್ಯೂನಿಯರ್ ರೆಸ್ಟ್ ತೆಗೆದುಕೊಳ್ಳುವವರೆಗೂ ಇಟಲಿಯಲ್ಲಿ ಸಾಂಗ್ ಚಿತ್ರೀಕರಣ ನಡೆಯಲಿದೆ. 

ಮದುವೆಗೂ ಮುನ್ನವೇ ನಾದಿನಿಗೆ 13 ಸಾವಿರ ರೂ. ಚಪ್ಪಲಿ ಕೊಡಿಸಿದ ಮಧು ಗೌಡ;ಜನರಿಂದ ನಿಮ್ಮ ದುಡಿಮೆ, ಈ ಶೋಕಿ ಎಂದ ನೆಟ್ಟಿಗರು!

ಇನ್ನೂ ದೇವರಾ: ಭಾಗ 1ರಲ್ಲಿ ಜ್ಯೂನಿಯರ್ ಎನ್‌ಟಿಆರ್‌ ನಟಿಸಿದ್ದಾರೆ. ಸೆಪ್ಟೆಂಬರ್ 27ರಂದು ರಿಲೀಸ್ ಆಗುತ್ತಿರುವ ಈ ಚಿತ್ರವನ್ನು ಕೊರಟಲ ಶಿವ ನಿರ್ದೇಶನ ಮಾಡುತ್ತಿದ್ದು ಜಾನ್ವಿ ಕಪೂರ್ ಮತ್ತು ಸೈಫ್‌ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.