ನಟ ಗೋವಿಂದ ಕೆಲಸ ಮಾಡ್ತಿಲ್ಲ ಎಂದು ಪತ್ನಿ ಸುನೀತಾ ಅಹುಜಾ ಅವರು ಬೇಸರ ಹೊರಹಾಕಿದ್ದಾರೆ.
ಗೋವಿಂದ ಅವರ ಪತ್ನಿ ಸುನೀತಾ ಆಹುಜಾ ಅವರ ಪ್ರಕಾರ, ಗಂಡ ಮನೆಯಲ್ಲಿ ಖಾಲಿ ಕೂತಿರೋದು ನೋಡೋಕೆ ಬೇಸರವಾಗುತ್ತಂತೆ. ಒಂದು ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಹೇಳಿದ್ದು, ಗೋವಿಂದ ಅವರ ವಯಸ್ಸಿನ ಇತರ ನಟರು ಇನ್ನೂ ಕೆಲಸ ಮಾಡ್ತಿದಾರೆ ಅಂತ ಉದಾಹರಣೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಗೋವಿಂದ ಅವರು ಆದಷ್ಟು ಬೇಗ ಸಿನಿಮಾಗೆ ವಾಪಸ್ ಬರ್ತಾರೆ ಅಂತ ಆಶಯ ಹೊಂದಿದ್ದಾರೆ. ಇನ್ನು ಗೋವಿಂದ ಅವರು ಒಟಿಟಿ ಆಫರ್‌ಗಳನ್ನು ತಿರಸ್ಕರಿಸುತ್ತಿದ್ದಾರೆ ಅಂತಲೂ ಹೇಳಿದ್ದಾರೆ.
ಜೂಮ್‌ನಲ್ಲಿ ಮಾತನಾಡುತ್ತಾ, 'ನೀವು ಲೆಜೆಂಡ್ ಸ್ಟಾರ್, 90ರ ದಶಕದ ಕಿಂಗ್. ಇವತ್ತಿನ ಮಕ್ಕಳು ನಿಮ್ಮ ಹಾಡುಗಳಿಗೆ ಕುಣೀತಾರೆ. ಒಳ್ಳೆ ಕಂಪನಿ ಹುಡುಕಿ ಅಂತ ಹೇಳ್ತಾನೆ ಇರ್ತೀನಿ. ನಿಮ್ಮಂಥ ಲೆಜೆಂಡ್ ಯಾಕೆ ಮನೇಲಿ ಕೂತ್ಕೋಬೇಕು? ಅನಿಲ್ ಕಪೂರ್, ಸುನಿಲ್ ಶೆಟ್ಟಿ, ಜಾಕಿ ಶ್ರಾಫ್ ತರ ನಿಮ್ಮ ವಯಸ್ಸಿನ ನಟರು ಚೆನ್ನಾಗಿ ಕೆಲಸ ಮಾಡ್ತಿದಾರೆ. ನೀವು ಯಾಕೆ ಮಾಡಬಾರದು? ನಮಗೆ ಗೋವಿಂದ ಅವರನ್ನು ಸಿನಿಮಾದಲ್ಲಿ ನೋಡೋಕೆ ಮಿಸ್ ಆಗ್ತಿದೆ' ಅಂತ ಸುನೀತಾ ಹೇಳಿದ್ದಾರೆ.
ಗೋವಿಂದ ಮಕ್ಕಳು ಅವರನ್ನ ಪರದೆಯ ಮೇಲೆ ನೋಡಬೇಕಂತೆ ಕಾಯ್ತಿದ್ದಾರೆ
ಸುನೀತಾ ಅಹುಜಾ ಹೇಳುವ ಪ್ರಕಾರ, 'ನನ್ನ ಮಕ್ಕಳು ಅವರನ್ನ ಪರದೆಯ ಮೇಲೆ ನೋಡಬೇಕಂತೆ ಕಾಯ್ತಿದ್ದಾರೆ. ನೀವು ಯಾರ ಜೊತೆ ಓಡಾಡ್ತಿದೀರೋ ಅವರು ಸರಿಯಾದ್ದನ್ನು ಹೇಳ್ತಿಲ್ಲ. ಒಳ್ಳೆಯ ಉದ್ದೇಶ ಇಟ್ಕೊಂಡಿಲ್ಲ. ಗೋವಿಂದ ನಿಮಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ, ನೀವು ಅವರಿಗೆ ಸರಿಯಾದ ದಾರಿ ತೋರಿಸಿ ಅಂತ ನಾನು ಆ ಸ್ನೇಹಿತರಿಗೆ ಹೇಳ್ತೀನಿ" ಅಂತ ಹೇಳಿದ್ದಾರೆ.
ಗೋವಿಂದ ಕಾಲಕ್ಕೆ ತಕ್ಕಂತೆ ಬದಲಾಗ್ತಿಲ್ಲ: ಸುನೀತಾ
ಗೋವಿಂದ ಫ್ಲಾಪ್ ಆಗೋಕೆ ಕಾರಣ ಹೇಳಿದ ಸುನೀತಾ, "ಅವರು 90ರ ದಶಕದಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ, ಆಗ ಅವರ ಸಿನಿಮಾಗಳು ಹಿಟ್ ಆಗ್ತಿತ್ತು ಅಂತ ಹೇಳಿದ್ದಾರೆ. '90ರ ದಶಕ ಮುಗೀತು. ಇದು 2025. ಈಗ 90ರ ಸ್ಟೈಲ್ ಸಿನಿಮಾ ಯಾರೂ ನೋಡಲ್ಲ. ಅವರ ಜೀವನ ಯಾಕೆ ಹಾಳು ಮಾಡ್ತೀರಾ? ಸಣ್ಣ ಆಗಿ, ಹ್ಯಾಂಡ್ಸಮ್ ಆಗಿ ಕಾಣಿಸಿಕೊಳ್ಳಿ ಅಂತ ಹೇಳಿ. ಇಷ್ಟು ದೊಡ್ಡ ನಟ ಈ ಥರ ಮನೇಲಿ ಕೂತಿರೋದು ನೋಡೋಕೆ ಬೇಸರವಾಗುತ್ತೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ನಟರಿಗೆ ಹೊಗಳಿಕೆ ಕೇಳೋಕೆ ಇಷ್ಟ. ಸತ್ಯ ಕೇಳಲ್ಲ. 90ರಲ್ಲಿ ಹೊಗಳಿಕೆ ಇತ್ತು. ಗೋವಿಂದ ತರ ಯಾವ ನಟನೂ ಇಲ್ಲ. ಆದ್ರೆ ಒಳ್ಳೆ ಸಿನಿಮಾ, ಒಳ್ಳೆ ನಿರ್ದೇಶಕರನ್ನು ಆಯ್ಕೆ ಮಾಡ್ಕೊಬೇಕು. ಅಲ್ಲೇ ತಪ್ಪು ಮಾಡ್ತಿದ್ದಾರೆ" ಎಂದು ಸುನೀತಾ ಹೇಳಿದ್ದಾರೆ.
ಗೋವಿಂದರ ಕೆಲಸ ಮ್ಯಾನೇಜ್ ಮಾಡದ ಸುನೀತಾ!
ಗೋವಿಂದ ಅವರು ಮಾತು ಕೇಳ್ತಿಲ್ಲ ಅಂತ ಅವರ ಕೆಲಸ ಮ್ಯಾನೇಜ್ ಮಾಡೋದನ್ನು ಸುನೀತಾ ನಿಲ್ಲಿಸಿದ್ದಾರಂತೆ. 'ಕೆಲವು ವರ್ಷಗಳ ಹಿಂದೆ ನಾನು ಗೋವಿಂದ ಕೆಲಸ ಮ್ಯಾನೇಜ್ ಮಾಡ್ತಿದ್ದೆ. ಒಟಿಟಿಯಲ್ಲಿ ಕೆಲಸ ಮಾಡಿ ಅಂತ ಹೇಳಿದ್ದೆ. ಆಗ ಒಳ್ಳೆ ಕಂಟೆಂಟ್ ಇತ್ತು. ಆದ್ರೆ ಒಪ್ಪಲಿಲ್ಲ. 4-5 ವರ್ಷದಲ್ಲಿ ಜನ ಒಟಿಟಿ ಮಾತ್ರ ನೋಡ್ತಾರೆ ಅಂತ ಹೇಳಿದ್ದೆ. ನಾನೇ ಫ್ಯಾನ್. ಪ್ರತಿದಿನ ಬೇರೆ ಭಾಷೆಯ ಒಂದು ಸಿನಿಮಾ ನೋಡ್ತೀನಿ. ಆದ್ರೆ ಅವರು ದೊಡ್ಡ ಪರದೆಯ ಮೇಲೆ ಮಾತ್ರ ಸಿನಿಮಾ ಮಾಡ್ತೀನಿ ಅಂತಾರೆ. ಈಗ ನಾನು ಅವರ ಕೆಲಸ ಮ್ಯಾನೇಜ್ ಮಾಡಲ್ಲ. 38 ವರ್ಷ ಸಹಿಸಿಕೊಂಡೆ. ನೀನು ಕೇಳಲ್ಲ. ಈಗ ಯಾರ ಮಾತು ಕೇಳ್ತೀಯೋ ಅವರಿಂದ ಮಾಡಿಸಿ ನೋಡು' ಅಂತ ಹೇಳಿದ್ದಾರೆ ಎಂದಿದ್ದಾರೆ ಸುನೀತಾ.


