ನಟ ದರ್ಶನ್ ನಾಯಿ ರೇಂಜಿಗಿಳಿದು ಕೊಲೆ ಮಾಡಬಾರದಿತ್ತು: ರಾಮ್ ಗೋಪಾಲ್ ವರ್ಮಾ
ನಟ ದರ್ಶನ್ ನಾಯಿ ರೇಂಜಿಗೆ ಕೆಳಮಟ್ಟಕ್ಕಿಳಿದು ಕೆಟ್ಟ ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿಯನ್ನು ಕೊಲೆ ಮಾಡಬಾರದಿತ್ತು ಎಂದು ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳಿದ್ದಾರೆ.
ಬೆಂಗಳೂರು (ಜೂ.17): ಸಿನಿಮಾದಲ್ಲಿ ಒಬ್ಬ ಸ್ಟಾರ್ ನಟನಾಗಿ ದರ್ಶನ್ ಆನೆಯ ರೀತಿಯಲ್ಲಿ ಗಂಭೀರವಾಗಿ ಇರಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಟ್ರೋಲರ್ಸ್‌ಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದರೂ (ಆನೆ ಹೋಗುವಾಗ ನಾಯಿ ಬೊಗಳಿದಾಗ ತಿರುಗಿಯೂ ನೋಡಲ್ಲ) ಇಗ್ನೋರ್ ಮಾಡಬೇಕಿತ್ತು. ಆದರೆ, ದರ್ಶನ್ ನಾಯಿ ರೇಂಜಿಗೆ ಕೆಳಮಟ್ಟಕ್ಕಿಳಿದು ಕೆಟ್ಟ ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿಯನ್ನು ಕೊಲೆ ಮಾಡಬಾರದಿತ್ತು ಎಂದು ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳಿದ್ದಾರೆ.
ಈ ಕುರಿತು ಖಾಸಗಿ ಯ್ಯೂಟೂಬ್ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ನಟ ದರ್ಶನ್ ಒಬ್ಬ ಸ್ಟಾರ್ ಆಗಿದ್ದಾರೆ. ಆದರೆ, ಅವರ ಕೆಟ್ಟದಾಗಿ ಮೆಸೇಜ್ ಮಾಡಿದ್ದ ವ್ಯಕ್ತಿಯನ್ನು ಬಹುಷಃ ಕೊಲೆ ಮಾಡೊ ಪ್ಲ್ಯಾನ್ ಇರಲಿಲ್ಲ ಅನ್ನಿಸುತ್ತದೆ. ಆತನನ್ನು ಸ್ಥಳಕ್ಕೆ ಕರೆಸಿ ಹೊಡೆದು ಕಳೆಸೋ ಸಂಚು ಮಾಡಿದ್ದರು ಅನ್ನಿಸುತ್ತದೆ. ಆದರೆ, ಹೊಡೆತ ತಿಂದವನು ಸತ್ತು ಹೋಗಿದ್ದಾನೆ. ಎಲ್ಲ ನಿರ್ದೇಶಕರು ಸಾಮಾನ್ಯ ಸ್ಕ್ರಿಪ್ಟ್ ಮಾಡಿ ಒಂದು ಸಿನಿಮಾ ಮಾಡ್ತಾರೆ. ಆದರೆ, ಇಲ್ಲಿ ಮರ್ಡರ್ನಿಂದಾನೆ ಕಥೆ ಶುರುವಾಗಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಆನೆಗಳು ದಾರಿಯಲ್ಲಿ ಹೋಗುವಾಗ ಯಾವತ್ತೂ ಬೊಗಳುವ ನಾಯಿ ಸೇರಿದಂತೆ ಯಾವುದಕ್ಕೂ ಕೇರ್ ಮಾಡಲ್ಲ. ದರ್ಶನ್ ಹಾಗೆ ಇರಬೇಕಾಗಿತ್ತು. ನಾಯಿ ಬೊಗಳಿದ್ರೂ, ಕಚ್ಚುವುದಕ್ಕೆ ಬಂದು ಬಾಯಿ ಹಾಕಿದರೂ ಆನೆ ಕೇರ್ ಮಾಡೊಲ್ಲ. ರೇಣುಕಾಸ್ವಾಮಿ ಎಂಬ ನಾಯಿಯ ಮೆಸೇಜ್ ಅನ್ನು ಕೂಡ ಕಡೆಗಣಿಸಿ ದರ್ಶನ್ ಆನೆಯಂತೆ ನಡೆದುಕೊಳ್ಳಬೇಕಿತ್ತು. ಅಂದರೆ, ರೇಣುಕಾಸ್ವಾಮಿಯ ಮೆಸೇಜ್ ಅನ್ನೂ ಅದೇ ರೀತಿ ಇಗ್ನೋರ್ ಮಾಡಬಹುದಾಗಿತ್ತು. ಒಂದು ವೇಳೆ ಆನೆಗೆ ಬೊಗಳುವ ನಾಯಿ ಕಚ್ಚಲು ಬಂದಾಗ ಆನೆ ಒಂದು ಬಾರಿ ಸೊಂಡಿಲಿನಿಂದ ಹೊಡೆದರೆ ಸತ್ತೇ ಹೋಗುತ್ತದೆ. ಹೀಗಾಗಿ, ಆನೆ ನಾಯಿ ರೇಂಜಿಗಿಳಿದು ದಾಳಿ ಮಾಡೊಲ್ಲ. ಆದರೆ, ನಟ ದರ್ಶನ್ ನಾಯಿ ರೇಂಜಿಗೆ ಕೆಳಮಟ್ಟಕ್ಕಿಳಿದು ಸಾಯಿಸುವ ಅಗತ್ಯವಿರಲಿಲ್ಲ ಎಂದು ಹೇಳಿದರು.
ದರ್ಶನ್ ಬಂಧನ ಬೆನ್ನಲ್ಲೇ ಖ್ಯಾತ ಸ್ಯಾಂಡಲ್‌ವುಡ್‌ನ ಸ್ಟಾರ್ ಹಾಸ್ಯ ನಟ ಚಿಕ್ಕಣ್ಣನಿಗೆ ಢವ ಢವ ಶುರು!
ಟ್ರೋಲರ್ಸ್‌ಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು: ಮುಖ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲರ್ಸ್ ಮಾಡುವ ಮೆಸೇಜ್‌ಗಳು ಹಾಗೂ ವಿಡಿಯೋಗಳಿಂದ ಭಾರಿ ಕೋಲಾಹಲವೇ ಸೃಷ್ಟಿಯಾಗುತ್ತಿದೆ. ಅದರಲ್ಲಿಯೂ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಟ್ರೋಲರ್ಸ್‌ಗಳ ಒಂದೊಂದು ಸಂದೇಶವೂ ಕೂಡ ಭಾರಿ ಡ್ಯಾಮೇಜ್ ಮಾಡುತ್ತವೆ. ಅವರು ಒಳ್ಳೆಯ ಸೃಜನಾತ್ಮಕ ವಿಡಿಯೋ ಹಾಗೂ ಸಂದೇಶಗಳನ್ನು ಸೃಷ್ಟಿಸುತ್ತಾರೆ. ಆದರೆ, ಅದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ಹೀಗಾಗಿ, ಎಲ್ಲ ಸೆಲೆಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿನ ಟ್ರೋಲಿಂಗ್ ಅನ್ನು ನೋಡಿ ನಕ್ಕು ಸುಮ್ಮನಾಗಬೇಕು. ಟ್ರೋಲರ್ಸ್ ನೋಡಿ ಎಂಜಾಯ್ ಮಾಡಬೇಕು. ರಾಜಕಾರಣಿಗಳು ಹೇಗೆ ಎಂಜಾಯ್ ಮಾಡ್ತಾರೆ ಹಾಗೆ ಸಿನಿಮಾ ಸೆಲೆಬ್ರೆಟೀಸ್ ಕೂಡ ಖುಷಿ ಪಡಬೇಕು. ಎಲ್ಲ ಸೆಲೆಬ್ರಿಟಿಗಳು ಇದನ್ನು ಅನುಸರಿಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣದಿಂದಲೇ ಇಷ್ಟೆಲ್ಲಾ ಆಗಿದ್ದು: ಈಗ ರೇಣುಕಾಸ್ವಾಮಿ ಕೂಡ ದರ್ಶನ್ ಗೆಳತಿ ಪವಿತ್ರಾಗೌಡ ಅವರಿಗೂ ಕಳಿಸಿದ ಮೆಸೇಜ್‌ನಿಂದ ಇಷ್ಟೆಲ್ಲಾ ಆಗಿದೆ. ಇದೆಲ್ಲಾ ಶುರುವಾಗಿದ್ದೆ ಸೋಷಿಯಲ್ ಮೀಡಿಯಾ ಮೆಸೇಜ್‌ನಿಂದ ಆಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿಯೂ ನಟ ದರ್ಶನ್ ಅಂಡ್ ಗ್ಯಾಂಗ್ ಇಲ್ಲೀವರೆಗೆ ನಡೆದುಕೊಂಡಿದ್ದು ತಪ್ಪು. ದರ್ಶನ್‌ನ ಅಭಿಮಾನಿ ಮತ್ತೊಬ್ಬ ಅಭಿಮಾನಿಯನ್ನ ಕಿಡ್ನಾಪ್ ಮಾಡಿ ಆತನ ಹತ್ತಿರ ಕರೆದುಕೊಂಡು ಹೋಗೋದು ಇದಿಯಲ್ಲ ಇದು ವೆರಿ ಬ್ಯಾಡ್. ಅಭಿಮಾನಿ ಸಂಘಗಳು ಸ್ಟಾರ್‌ಗಳನ್ನು ಹ್ಯಾಂಡಲ್ ಮಾಡೋ ಕೆಲಸ ಮಾಡುತ್ತಿವೆ. ಇನ್ನು ನಟಿ ಪವಿತ್ರಗೌಡ ಸೈಬರ್ ಕ್ರೈಮ್ ಕಂಪ್ಲೈಟ್ ಕೊಟ್ಟಿದ್ರೂ ಬೇಗ ಸಾಲ್ವ್ ಆಗ್ತಿರಲಿಲ್ಲ. ಯಾಕಂದ್ರೆ ಮಿಲಿಯನ್ ಗಟ್ಟಲೆ ಕೇಸ್‌ಗಳಿವೆ. ಹಾಗಾಗಿ ಇಲ್ಲಿ ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದರು.
ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದಿದ್ದಕ್ಕೆ ನಾನು ನಾನಾಗಿದ್ದೇನೆ; ರಾಮ್ ಗೋಪಾಲ್ ವರ್ಮಾ!
ದರ್ಶನ್ ಮರ್ಡರ್ ಮಿಸ್ಟರಿ ಬಗ್ಗೆ ಸಿನಿಮಾ ಮಾಡೋಕಾಗಲ್ಲ: ರೇಣುಕಾಸ್ವಾಮಿಯನ್ನು ನಟ ದರ್ಶನ್ ಕೊಲೆ ಮಾಡಿದ ಬಗ್ಗೆ ಸಿನಿಮಾ ಮಾಡೋದಕ್ಕೆ ಆಗೊಲ್ಲ. ಯಾಕೆಂದರೆ ಇಲ್ಲಿ ಯಾರಿಗೂ ಯಾವುದೇ ವಿಚಾರ ಗೊತ್ತಿಲ್ಲದಿರುವುದು ಏನೂ ಇಲ್ಲ. ಬಹುಷಃ ಪವಿತ್ರಗೌಡ ಅವರೇ ರೇಣುಕಾ ಸ್ವಾಮಿ ಮೆಸೇಜ್ಗೆ ಒಂದು ಸ್ಮೈಲ್ ಕೊಟ್ಟು ಸುಮ್ಮನಾಗಿದ್ದರೆ, ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲವೇನೋ. ಇಲ್ಲಿ ಗೊತ್ತಿಲ್ಲದೆ ಇರೊ ಮಿಸ್ಟರಿ ಇಲ್ಲವೇ ಇಲ್ಲ. ಹಾಗಾಗಿ ಸಿನಿಮಾ ಮಾಡುವಂತ ಪ್ಲಾಟ್ ಇಲ್ಲ. ಜೊತೆಗೆ, ಎಲ್ಲವೂ ಸಿಸಿಟಿವಿಯಲ್ಲಿ ಪ್ರೂಫ್ ಇರೋದ್ರಿಂದ ಏನೂ ಮಾಡೋದಕ್ಕಾಗೊಲ್ಲ ಎಂದು ಹೇಳಿದರು.