ಪಾರ್ಶ್ವವಾಯುವಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ರೋಜಾ ಅರವಿಂದ್ ಸ್ವಾಮಿ, ಈಗ 3.5 ಸಾವಿರ ಕೋಟಿಗೆ ಒಡೆಯ!
ಮೈ ಅಳಗನ್ ಸಿನಿಮಾ ನೋಡಿದವರೆಲ್ಲ ಅರವಿಂದ ಸ್ವಾಮಿ ನಟನೆಗೆ ಫಿದಾ ಆಗಿದ್ದಾರೆ. ಆದರೆ ಈ ನಟನ ಹಿನ್ನೆಲೆ ಇದೀಗ ಮತ್ತೆ ಸುದ್ದಿ ಆಗ್ತಿದೆ. ಕಾರಣ ಏನು ಗೊತ್ತಾ?
ಅರವಿಂದ ಸ್ವಾಮಿ ಅನ್ನೋ ಟೊಮ್ಯಾಟೋ ಹಣ್ಣಿನಂಥ ನಟ ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಕಾರಣ ಸಿನಿಮಾ ಅಲ್ಲ, ಅವರ ಬ್ಯಾಗ್ರೌಂಡ್ ಸ್ಟೋರಿ. ಈ ಹಿಂದೆಯೇ ನಿಮ್ಮ ಕಿವಿಗೆ ಬಿಲಿಯನೇರ್ ನಟನ ಬಗ್ಗೆ ಕೇಳಿರಬಹುದು. ಆದರೆ ಇಲ್ಲೀಗ ಹೇಳ್ತಿರೋದು ಹಳೆ ಸುದ್ದಿ ಅಲ್ಲ. ಆಕ್ಟರ್ ಅರವಿಂದ ಸ್ವಾಮಿ ಅಂದಾಕ್ಷಣ ಈ ಜಮಾನಾದವರಿಗೆ ಮೊನ್ನೆ ಮೊನ್ನೆ ರಿಲೀಸ್ ಆಗಿ ಓಟಿಟಿಯಲ್ಲಿ ಸಖತ್ ಪಾಪ್ಯುಲರ್ ಆದ ಮೈ ಅಳಗನ್ ಸಿನಿಮಾ ನೆನಪಾಗಬಹುದು. ಆದರೆ ಜೆನ್ ಎಕ್ಸ್ ಅಥವಾ ಅದಕ್ಕೂ ಹಿಂದಿನ ಜನರೇಶನ್‌ಗೆ ಅರವಿಂದ ಸ್ವಾಮಿ ಅಂದರೆ 'ರೋಜಾ' ಸಿನಿಮಾ. ಈ ಸಿನಿಮಾದ ಹಾಡುಗಳು, ರೊಮ್ಯಾಂಟಿಕ್ ಸೀನ್ ನೆನೆಸಿಕೊಂಡರೆ ಆ ಜನರೇಶನ್‌ನವರ ಕೆನ್ನೆ ಈಗಲೂ ಕೆಂಪೇರುತ್ತೆ. ಆ ಲೆವೆಲ್‌ಗೆ ಒಂದು ಜನರೇಶನ್‌ನ ಅಭಿರುಚಿಯನ್ನೇ ಸೆಟ್ ಮಾಡಿರೋ ನಟ ಈತ. ‘ರೋಜಾ’ ಸಿನಿಮಾ ರಿಲೀಸ್ ಆದಾಗ ಅರವಿಂದ ಸ್ವಾಮಿ ನೋಡೋಕೆ ಕಾಲೇಜು ಹುಡುಗಿಯರು ಮುಗಿಬೀಳುತ್ತಿದ್ದರಂತೆ.
ಎಲ್ಲ ವಯಸ್ಸಿನ ಹೆಣ್ಣುಮಕ್ಕಳಿಗೂ ಅರವಿಂದ ಸ್ವಾಮಿ ಅಚ್ಚುಮೆಚ್ಚಾಗಿದ್ದರು. ಹುಡುಗರಿಗೂ ಇವರ ಕ್ರೇಜ್ ಇದ್ದೇ ಇರುತ್ತಿತ್ತು. ಅರವಿಂದ ಸ್ವಾಮಿ ಅವರನ್ನು ಮದುವೆ ಮಾಡಿಕೊಳ್ಳಲು ಟಾಪ್ ಹೀರೋಯಿನ್ ಗಳು ಕ್ಯೂ ನಿಂತಿದ್ದರು. ಅಂಥ ಅರವಿಂದ ಸ್ವಾಮಿ ಅವರನ್ನು ಹೆಂಡತಿ ಬಿಟ್ಟುಹೋದರು ಎನ್ನುವುದೇ ಕುತೂಹಲಕಾರಿ ವಿಷಯ.
ಕಾಂಚಿವರಂ ಸೀರೆಯಲ್ಲಿ ಮಿಂಚಿದ 'ಕಾಂತಾರ' ರಿಷಬ್ ಶೆಟ್ಟಿ ಪತ್ನಿ ಪ್ರಗತಿ; ಕುಂದಾಪುರದ ಮಲ್ಲಿಗೆ ಎಂದ ನೆಟ್ಟಿಗರು
ಅರವಿಂದ ಸ್ವಾಮಿ ಮೊದಲು ನಟಿಸಿದ್ದು ‘ತಲಪತಿ’ ಎನ್ನುವ ಸಿನಿಮಾದಲ್ಲಿ. ಆದರೆ ಅವರಿಗೆ ಸಿಕ್ಕಾಪಟ್ಟೆ ಹೆಸರು ಮತ್ತು ಫ್ಯಾನ್ಸ್ ತಂದುಕೊಟ್ಟದ್ದು 1992ರಲ್ಲಿ ರಿಲೀಸ್ ಆದ ‘ರೋಜಾ’ ಸಿನಿಮಾ. ಜನಪ್ರಿಯತೆ ಎಂದರೆ ಅಂತಿಂಥಾ ಜನಪ್ರಿಯತೆ ಅಲ್ಲ. ಇಡೀ ದೇಶಾದ್ಯಂತ ಹುಡುಗಿಯರು ಅರವಿಂದ ಸ್ವಾಮಿ ಅವರಿಗಾಗಿ ಪ್ರಾಣ ಬಿಡುವಷ್ಟು. ಸುರದ್ರೂಪಿ ಅರವಿಂದ ಸ್ವಾಮಿ ರಾತ್ರೋರಾತ್ರಿ ಕೋಟ್ಯಂತರ ಮಹಿಳಾ ಅಭಿಮಾನಿಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡುಬಿಟ್ಟಿದ್ದರು. ಇದಾದ ಮೇಲೆ 1995ರಲ್ಲಿ ‘ಬಾಂಬೆ’ ಸಿನಿಮಾ ಬಿಡುಗಡೆಯಾಯಿತು. ಅದು ಇನ್ನೊಂದು ಸೂಪರ್ ಹಿಟ್ ಚಿತ್ರ. ಅರವಿಂದ ಸ್ವಾಮಿ ಅವರಿಗೆ ಇನ್ನೊಂದಿಷ್ಟು ಅಭಿಮಾನಿಗಳನ್ನು ಹುಟ್ಟುಹಾಕಿತು. ಹೀಗೆ ಸಿನಿಮಾ ರಂಗದಲ್ಲಿ ಸ್ಟಾರ್ ನಟರನ್ನು ಮೀರಿಸಿ ಉತ್ತುಂಗದಲ್ಲಿ ಇದ್ದಾಗಲೇ 1994ರಲ್ಲಿ ಗಾಯತ್ರಿ ರಾಮಸ್ವಾಮಿ ಎಂಬುವವರ ಜೊತೆ ಅರವಿಂದಸ್ವಾಮಿ ಮದುವೆಯಾದರು. ಇವರಿಗೆ ಅದಿರಾ ಎಂಬ ಮಗಳು, ರುದ್ರ ಎಂಬ ಮಗ ಇದ್ದಾರೆ. ನಡುವೆ ಭಿನ್ನಾಭಿಪ್ರಾಯ ಬಂದು ಅರವಿಂದ ಸ್ವಾಮಿ ಹಾಗೂ ಗಾಯತ್ರಿ ವಿಚ್ಛೇದನ ಪಡೆಯುತ್ತಾರೆ.
ಅರವಿಂದ ಸ್ವಾಮಿ ಬದುಕಿನ ಮತ್ತೊಂದು ದುರಂತ ಅಂದರೆ 2000 ಮತ್ತು 2013ರ ನಡುವೆ ಗಂಭೀರವಾದ ಬೆನ್ನಿನ ಗಾಯದಿಂದ ನಟ ಬಳಲತೊಡಗಿದರು. ಇದ್ರಿಂದಾಗಿ ಅವರು ತಮ್ಮ ಕಾಲುಗಳ ಸ್ವಾಧೀನತೆ ಕಳೆದುಕೊಂಡ್ರು. ಪಾರ್ಶ್ವವಾಯುವಿಗೆ ತುತ್ತಾಗಿ ಕಾಲುಗಳ ಚಲನಶೀಲತೆ ಕಳೆದುಕೊಂಡುಬಿಟ್ಟರು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 4-5 ವರ್ಷಗಳು ಚಿಕಿತ್ಸೆ ತೆಗೆದುಕೊಂಡರು. ಇಷ್ಟೆಲ್ಲ ದುರಂತಗಳಾದರೂ ಫೀನಿಕ್ಸ್‌ನಂತೆ ಪುಟಿದೆದ್ದ ನಟ ಅರವಿಂದ್ ಸ್ವಾಮಿ 2005 ರಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಿದರು. ಟ್ಯಾಲೆಂಟ್ ಮ್ಯಾಕ್ಸಿಮಸ್ ಎಂಬ ಕಂಪನಿ ಸ್ಥಾಪಿಸಿ ಅದರ ಉನ್ನತಿಗೆ ಹಗಲಿರುಳೂ ಶ್ರಮಿಸುತ್ತಿದ್ದಾರೆ.
ಶಾರುಕ್ ವಯಸ್ಸು ಏರ್ತಿದ್ಯಾ, ಇಳಿತಿದ್ಯಾ? ಫೋಟೋ ನೋಡಿ ಫ್ಯಾನ್ಸ್ ಫಿದಾ
ಪರಿಣಾಮ ಇಂದಿಗೂ ಕೋಟಿ ಕೋಟಿ ಲಾಭ ಪಡೆಯುತ್ತಿದ್ದಾರೆ. ವರ್ಷಗಳ ಕೆಳಗೆ ಟ್ಯಾಲೆಂಟ್ ಮ್ಯಾಕ್ಸಿಮಸ್ ವಹಿವಾಟು 3300 ಕೋಟಿ ರು.ನಷ್ಟಿತ್ತು. ಈಗ ಮತ್ತೂ ಹೆಚ್ಚಾಗಿರುವ ಸಾಧ್ಯತೆ ಇದೆ. ಮೈ ಅಳಗನ್ ಸಿನಿಮಾ ನಟನ ಲೈಫು ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.