ನಟ ಅನಿಲ್ ಕಪೂರ್ ಅವರ ಪ್ರೇಮ, ರೊಮ್ಯಾನ್ಸ್, ಮದುವೆ, ಹನಿಮೂನ್ ಕತೆಯೆಲ್ಲ ವಿಶಿಷ್ಟವಾಗಿದೆ. ಅದನ್ನು ಅವರ ಬಾಯಿಯಲ್ಲೇ ಕೇಳಿ! 

ನನ್ನ ಗೆಳೆಯನೊಬ್ಬ ಸುನೀತಾಗೆ ನನ್ನ ನಂಬರ್ ಕೊಟ್ಟು, ನನಗೆ ಪ್ರಾಂಕ್ ಕಾಲ್ (Prank call) ಮಾಡಲು ಹೇಳಿದ್ದ. ಆಕೆ ಹಾಗೆ ನನಗೆ ಕರೆ ಮಾಡಿದಳು. ಮೊದಲ ಕರೆಯಲ್ಲೇ ನನಗೆ ಆ ಧ್ವನಿಯ ಮೇಲೆ ತುಂಬಾ ಪ್ರೀತಿಯುಂಟಾಯಿತು. ನಮ್ಮ ಲವ್ ಸ್ಟೋರಿ (Love story) ಶುರುವಾದದ್ದು ಹಾಗೆ.

ಒಂದು ವಾರದ ಬಳಿಕ ನಾವಿಬ್ಬರೂ ಒಂದು ಪಾರ್ಟಿಯಲ್ಲಿ ಮುಖಾಮುಖಿಯಾದೆವು. ಇಬ್ಬರ ಪರಿಚಯವಾಯಿತು. ಆಕೆಯಲ್ಲಿ ಏನೋ ವಿಶೇಷತೆ ಇತ್ತು. ನಾವಿಬ್ಬರೂ ಗೆಳೆಯರಾದೆವು. ಆಗ ನಾನು ಬೇರೊಬ್ಬಳನ್ನು ಇಷ್ಟಪಡುತ್ತಿದ್ದೆ. ಆಕೆಯ ಬಗ್ಗೆ ಸುನೀತಾಳಲ್ಲಿ ಮುಗ್ಧವಾಗಿ ಹೇಳಿಕೊಂಡಿದ್ದೆ ಕೂಡ. ಆದರೆ ಅವಳು ನನಗೆ ಕೈಕೊಟ್ಟು ಎಲ್ಲಿಯೋ ಕಾಣದಂತೆ ಮಾಯವಾದಳು. ನಾನು ಭಗ್ನಪ್ರೇಮಿಯಾದೆ. ಅದರಿಂದ ನನ್ನ ಮತ್ತು ಸುನೀತಾ ಗೆಳೆತನ ಇನ್ನಷ್ಟು ಗಾಢವಾಯಿತು! ಸೋ, ಭಗ್ನಪ್ರೇಮವೇ ನಮ್ಮನ್ನು ಒಂದುಗೂಡಿಸಿತು ಎಂದರೆ ತಪ್ಪಿಲ್ಲ.

ನಾನಾಗಲೀ ಸುನೀತಾ ಆಗಲೀ ಪರಸ್ಪರ ಪ್ರೇಮದ ಬಗ್ಗೆ ಏನೂ ಹೇಳಿಕೊಳ್ಳಲಿಲ್ಲ. ಅದು ಸಹಜವಾಗಿಯೇ ನಡೆಯಿತು. ನಮ್ಮಿಬ್ಬರ ಪ್ರೇಮ ಸಿನಿಮಾಗಳಲ್ಲಿ ನಡೆಯುವಂತೇನೂ ನಡೆಯಲಿಲ್ಲ. ಆದರೆ ನಮಗಿಬ್ಬರಿಗೂ ಅದರ ಗಾಢವಾದ ಅರಿವು ಇತ್ತು. ಆಕೆ ನಾನ್ಯಾರು, ನನ್ನ ವೃತ್ತಿಯೇನು, ನನಗೆ ಸಂಬಳ ಬರುತ್ತಿದೆಯಾ ಇಲ್ವಾ- ಇದ್ಯಾವುದನ್ನೂ ಕೇಳಲಿಲ್ಲ. ಅದೆಲ್ಲ ನಮ್ಮಿಬ್ಬರ ನಡುವೆ ಬರಲೇ ಇಲ್ಲ.

ಮಿಡಲ್ ಫಿಂಗರ್‌ ಪೋಸ್ಟ್‌, ಟ್ರೋಲಿಗರ ಬಾಯಿ ಮುಚ್ಚಿಸಿದ ನಟಿ ಸಮಂತಾ!

ಆಕೆ ಲಿಬರಲ್ ಫ್ಯಾಮಿಲಿಯಿಂದ ಬಂದವಳಾಗಿದ್ದಳು. ಅವಳ ತಂದೆ ಬ್ಯಾಂಕರ್ ಆಗಿದ್ದರು. ಅವಳಿಗೆ ಮಾಡೆಲಿಂಗ್‌ (Modelling) ವೃತ್ತಿಯಲ್ಲಿ ಬೆಳೆಯುವ ಸಾಕಷ್ಟು ಅವಕಾಶ ಇತ್ತು. ಆದರೆ ನಾನು, ಸಂಪೂರ್ಣ ಭಿಕಾರಿ ಆಗಿದ್ದೆ. ನಾನು ಚೆಂಬೂರಿನಲ್ಲಿದ್ದೆ. ಆಕೆ ನೆಪೀನ್ಸಿಯಾ ರಸ್ತೆಯಲ್ಲಿ ವಾಸಿಸುತ್ತಿದ್ದಳು. ನಾನು ಬಸ್ ಹತ್ತಿ ಆಕೆಯಿದ್ದಲ್ಲಿಗೆ ಇನ್ನೊಂದು ಗಂಟೆಯಲ್ಲಿ ಬರುತ್ತೇನೆ ಎಂದು ಹೇಳುತ್ತಿದ್ದೆ. ಆದರೆ ಆಕೆ "ಇಲ್ಲಾ, ತಡವಾಗುತ್ತೆ, ಟ್ಯಾಕ್ಸಿ ಮಾಡ್ಕೊಂಡು ಬಾ' ಎಂದು ಒತ್ತಾಯಿಸುತ್ತಿದ್ದಳು. ಟ್ಯಾಕ್ಸಿ ಮಾಡೋಕೆ ನನ್ನ ಬಳಿ ಹಣವಿರಲಿಲ್ಲ. ಅದನ್ನೇ ಹೇಳ್ತಿದ್ದೆ. "ಸುಮ್ನೇ ಬಾ, ನಾನು ನೋಡ್ಕೊಳ್ತೀನಿ' ಅನ್ನುತ್ತಿದ್ದಳು. ಹೀಗೆ ನನ್ನ ಟ್ಯಾಕ್ಸಿಯ ಹಣ ಕೊಡುತ್ತಿದ್ದವಳೂ ಅವಳೇ.

ನಾವು ಹತ್ತು ವರ್ಷ ಕಾಲ ಜೊತೆಯಾಗಿ ಡೇಟಿಂಗ್ (Dating) ಮಾಡಿದೆವು. ನಾವು ಜೊತೆಯಾಗಿ ಪ್ರಯಾಣ ಮಾಡಿದೆವು, ಜೊತೆಯಾಗಿ ಬೆಳೆದೆವು. ಆಕೆ ಮೊದಲೇ ಹೇಳಿದ್ದಳು- ನಾನು ಯಾವತ್ತೂ ಕಿಚನ್‌ಗೆ ಹೋಗೋಲ್ಲ, ಅಡುಗೆ ಮಾಡೊಲ್ಲ ಅಂತ. ಒಂದು ವೇಳೆ ನಾನೆಲ್ಲಿಯಾದರೂ ಅಡುಗೆ ಮಾಡು ಎಂದು ಆಕೆಗೆ ಹೇಳಿದರೆ ಆಕೆಯ ಕೈಯಲ್ಲಿ ಏಟು ತಿನ್ನಬೇಕಾದೀತು ಎಂದು ಗೊತ್ತಿತ್ತು. ಹೀಗಾಗಿ, ನಾನು ಆಕೆಯನ್ನು ಮದುವೆಯಾಗಬೇಕಿದ್ದರೆ, ಖಂಡಿತವಾಗಿಯೂ ನಾನು ಅಡುಗೆಗೆ ಜನ ಇಟ್ಟುಕೊಳ್ಳುವಂಥ ಸ್ಥಿತಿಗೆ ಬೆಳೆಯಲೇಬೇಕಿತ್ತು. ಅದರೆ ನಾನೋ ನಿರುದ್ಯೋಗಿ. ಕೈಯಲ್ಲಿ ಸರಿಯಾದ ಪ್ರಾಜೆಕ್ಟ್‌ಗಳಿರಲಿಲ್ಲ. ಆದರೆ ಅವಳೆಂದೂ ಒತ್ತಡ ಹಾಕಲಿಲ್ಲ. ಅವರ ಪ್ರೀತಿ ಬೇಷರತ್ ಆಗಿತ್ತು.

ತಾಯಿ ಅಗುತ್ತಿರುವ ಸಂಭ್ರಮದಲ್ಲಿ ನಟಿ ಅತಿರಾ ಮಾಧವ್, ಸೀಮಂತ ಫೋಟೋ ವೈರಲ್!

ಇದೇ ವೇಳೆಗೆ ನನ್ನ 'ಮೇರಿ ಜಂಗ್' (Mery Jung) ಸಿನಿಮಾ (Cnema) ಹಿಟ್ (Super Hit) ಆಯಿತು. ಇನ್ನು ನಾನು ಮನೆ ಮಾಡಬಹದು, ಅಡುಗೆಗೆ ಜನ ಮಾಡಬಹುದು ಎಂದು ಖಚಿತವಾಯಿತು. ಆಗಲೇ ನಾನು ಆಕೆಗೆ ಕರೆ ಮಾಡಿ 'ನಾಳೆಯೇ ಮದುವೆಯಾಗೋಣ, ನಾಳೆ ಅಲ್ಲದಿದ್ದರೆ ಮತ್ಯಾವತ್ತೂ ಆಗೋಲ್ಲ!' ಎಂದು ಹೇಳಿದೆ. ಆಕೆ ಒಪ್ಪಿದಳು. ಹಾಗೆ ಹತ್ತು ಜನರ ಸಮ್ಮುಖದಲ್ಲಿ ಮರುದಿನವೇ ನಮ್ಮ ಮದುವೆಯಾಯಿತು. ಮೂರು ದಿನದ ನಂತರ ನಾನು ಬೇರೊಂದು ಫಿಲಂನ ಶೂಟಿಂಗ್‌ಗೆ (Film Shooting) ಹೋದೆ! ಅವಳು ನನ್ನನ್ನು ಬಿಟ್ಟು ಒಬ್ಬಳೇ ಹನಿಮೂನ್‌ಗೆ (Honeymoon) ವಿದೇಶಕ್ಕೆ ಹೊರಟುಹೋದಳು! ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನನ್ನ ಬಗ್ಗೆ ನನಗಿಂತಲೂ ಹೆಚ್ಚು ಚೆನ್ನಾಗಿ ಆಕೆಗೆ ಎಲ್ಲವೂ ಗೊತ್ತಿದೆ. ನಾವಿಬ್ಬರೂ ಜೊತೆಯಾಗಿ ಬೆಳೆದಿದ್ದೇವೆ. ಮನೆ ಕಟ್ಟಿದ್ದೇವೆ. ಮೂರು ಮಕ್ಕಳನ್ನು ಬೆಳೆಸಿದ್ದೇವೆ. ಎಲ್ಲ ಬಗೆಯ ಏರಿಳಿತಗಳನ್ನು ಕಂಡಿದ್ದೇವೆ. ಆದರೆ ನಮ್ಮ ರೊಮ್ಯಾನ್ಸ್,(Romance) ಜೊತೆಯಾಗಿ ವಾಕಿಂಗ್, ಡಿನ್ನರ್‌ಗಳು ಎಲ್ಲ ಮೊನ್ನೆ ತಾನೇ ಶುರುವಾದಂತಿವೆ.

ನಾವು 45 ವರ್ಷಗಳಿಂದ ಜೊತೆಯಾಗಿ ಇದ್ದೇವೆ. ಅಂದರೆ 45 ವರ್ಷಗಳ ಗೆಳೆತನ, ಪ್ರೀತಿ, ಸಾಂಗತ್ಯವನ್ನು ಹಂಚಿಕೊಂಡಿದ್ದೇವೆ. ಆಕೆ ಪರಿಪೂರ್ಣ ತಾಯಿ, ಪರಿಪೂರ್ಣ ಪತ್ನಿ. ನಾನು ಪ್ರತಿದಿನ ಮುಂಜಾನೆ ಸ್ಫೂರ್ತಿಯಿಂದ ಎದ್ದು ಕೆಲಸಕ್ಕೆ ಹೋಗುತ್ತೇನೆಂದರೆ ಆಕೆಯೇ ಕಾರಣ. ಯಾಕೆ ಗೊತ್ತೆ? ''ಹಣ ಖಾಲಿಯಾಯ್ತು'' ಅನ್ನುತ್ತಾಳೆ. ''ಅರೆ, ನಿನ್ನೆ ತಾನೇ ನಿನಗೆ ಅಷ್ಟೊಂದು ಹಣ ಕೊಟ್ಟಿದೀನಲ್ಲ?'' ಅಂತ ನಾನು ಕೇಳ್ತೀನಿ. ''ಅದೆಲ್ಲಾ ಖಾಲಿಯಾಗಿದೆ, ಎದ್ದು ಕೆಲಸಕ್ಕೆ ಹೊರಡು'' ಅಂತ ಅಟ್ಟುತ್ತಾಳೆ. ನಾನು ಹಾಸಿಗೆಯಿಂದ ಜಂಪ್ ಮಾಡಿ ಕೆಲಸಕ್ಕೆ ಹೊರಡುತ್ತೇನೆ!

The Kashmir Files: ಬಾಲಿವುಡ್‌ನಲ್ಲಿ ದಾಖಲೆ ಬರೆಯುತ್ತಿರುವ ಕಾಶ್ಮೀರ್ ಫೈಲ್ಸ್