ತಾಯಿ ಅಗುತ್ತಿರುವ ಸಂಭ್ರಮದಲ್ಲಿ ನಟಿ ಅತಿರಾ ಮಾಧವ್, ಸೀಮಂತ ಫೋಟೋ ವೈರಲ್!
ಮಗು ಹೇಗಿರುತ್ತೆ, ಏನ್ ಆಗುವುದಕ್ಕೆ ಇಷ್ಟವಿದೆ ಗೊತ್ತಿಲ್ಲ ಆದರೆ ನಾವು ಹೊಸ ಅತಿಥಿ ಸ್ವಾಗತಿಸಲು ರೆಡಿಯಾಗಿದ್ದೀವಿ ಎಂದ ನಟಿ.
ಮಲಯಾಳಂ ಕುಟುಂಬವಿಲಕ್ಕು ಖ್ಯಾತಿಯ ನಟಿ ಅತಿರಾ ಮಾಧವ್ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೀಮಂತದ ಫೋಟೋ ಹಂಚಿಕೊಂಡಿದ್ದಾರೆ.
ಹಳದಿ ಮತ್ತು ಪರ್ಪಲ್ ಬಣ್ಣ ಕಸವು ಸೀರೆ ಧರಿಸಿರುವ ನಟಿ ಅತಿರಾ ಮಾಧವ್ ಸೀಮಂತದ ಫೋಟೋ ಹಂಚಿಕೊಂಡಿದ್ದು ತುಂಬಾನೇ ಗ್ಲೋ ಆಗುತ್ತಿದ್ದಾರೆ.
'ಈ ಹೊಸ ಪ್ರಪಂಚಕ್ಕೆ ನಮ್ಮ ಕಂದಮ್ಮ ಬರ ಮಾಡಿಕೊಳ್ಳಲು ರೆಡಿಯಾಗಿದ್ದೀವಿ. ಹುಟ್ಟಿದಾಗ ನೀನು ಹೇಗಿರುತ್ತೀಯಾ ನಮಗೆ ಗೊತ್ತಿಲ್ಲ, ದೊಡ್ಡವರಾದ ಮೇಲೆ ನಿಮ್ಮ ಇಂಟ್ರೆಸ್ಟ್‌ಗಳು ನಮಗೆ ಗೊತ್ತಿಲ್ಲ ಆದರೆ ನಿನಗೆ ಬ್ಯೂಟಿಫುಲ್ ಲೈಫ್ ನೀಡಲು ನಾವು ಸಿದ್ಧ' ಎಂದು ಅತಿರಾ ಬರೆದುಕೊಂಡಿದ್ದಾರೆ.
'ಡ್ಯಾಡಿ ಮತ್ತು ಅಮ್ಮ ನಿನ್ನ ಆಗಮನಕ್ಕೆ ಕಾಯುತ್ತಿದ್ದೀವಿ' ಎಂದು ಹೇಳಿಕೊಂಡಿದ್ದಾರೆ. ಅತಿರಾ ಪತಿ ಕೆಂಪು ಬಣ್ಣದ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.
'ಈ ವರ್ಷ ವುಮೆನ್ಸ್ ಡೇ ನನಗೆ ತುಂಬಾನೇ ಸ್ಪೆಷಲ್ ಏಕೆಂದರೆ ನಾನು ತಾಯಿ ಆಗುತ್ತಿರುವೆ.
ನಿಮ್ಮ ಸ್ವಂತ ಸ್ಥಳವನ್ನು ನಿರ್ಮಿಸಲು ಮತ್ತು ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ನೀವು ಎದುರಿಸುತ್ತಿರುವ ಅಡಚಣೆಗಳು ನಿಮ್ಮನ್ನು ಅಗಾಧವಾಗಿವೆ ಎಂದು ನಂಬುತ್ತಾರೆ.' ಎಂದಿದ್ದರು.
ಟಿವಿ ನಿರೂಪಕಿಯಾಗಿ ಅತಿರಾ ಮಾಧವ್ ವೃತ್ತಿ ಜೀವನ ಆರಂಭಿಸಿದ್ದರು. ಜನಪ್ರಿಯತೆ ಪಡೆದು ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಮೊದಲ ವಿವಾಹ ವರ್ಷಿಕೋತ್ಸವದ ದಿನ ತಾಯಿ ಆಗುತ್ತಿರುವ ವಿಚಾರ ರಿವೀಲ್ ಮಾಡಿದ್ದರು.