ನನಗೂ ಮಾತಾಡ್ಬೇಕು ಅನಿಸುತ್ತೆ; ಬಾಯ್ಕಟ್ ಬಗ್ಗೆ ಅಮಿತಾಭ್ ಪರೋಕ್ಷ ಟ್ವೀಟ್ ವೈರಲ್
ಬಿಗ್ ಬಿ ಪರೋಕ್ಷವಾಗಿ ಬಾಯ್ಕಟ್ ಟ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ಬಾಯ್ಕಟ್ ಟ್ರೆಂಡ್ ಆಗುತ್ತಿರುವ ಈ ಸಮಯದಲ್ಲಿ ಅಮಿತಾಭ್ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಿತಾಭ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕೊರೊನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿರುವ ಜೊತೆಗೆ ತನ್ನನ್ನು ಸಂಪರ್ಕ ಮಾಡಿರುವ ಎಲ್ಲರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಮಿತಾಭ್‌ಗೆ ಕೊರೊನಾ ಪಾಸಿಟಿವ್ ಬಂದಿರುವುದು ಇದು ಎರಡನೇ ಬಾರಿ. ಅಂದಹಾಗೆ ಅಮಿತಾಭ್ ಕೊರೊನಾ ಪಾಸಿಟಿವ್ ಎಂದು ಟ್ವೀಟ್ ಮಾಡುವ ಮೊದಲು ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ. ಬಿಗ್ ಬಿ ಪರೋಕ್ಷವಾಗಿ ಬಾಯ್ಕಟ್ ಟ್ರೆಂಡ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಲ್ಲಿ ಸದ್ಯ ಬಾಯ್ಕಟ್ ಟ್ರೆಂಡ್ ಆಗಿದೆ. ಬಹುತೇಕ ಸಿನಿಮಾಗಳು ಬಾಯ್ಕಟ್‌ಗೆ ಬಲಿಯಾಗುತ್ತಿವೆ. ಅದರಲ್ಲೂ ಲಾಲ್ ಸಿಂಗ್ ಚಡ್ಡಾ, ದೋಬಾರ ಸಿನಿಮಾಗಳಿಗೆ ಬಾಯ್ಕಟ್ ಬಿಸಿ ತಟ್ಟಿದೆ. ಇದರ ಬೆನ್ನಲ್ಲೇ ಅಮಿತಾಭ್ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.
ಅಮಿತಾಭ್ ಬಚ್ಚನ್, 'ನನಗೆ ಕೆಲವು ವಿಷಯಗಳ ಬಗ್ಗೆ ಮಾತನಾಡಬೇಕು ಎನಿಸುತ್ತದೆ. ಆದರೆ ಅದನ್ನು ಹೇಗೆ ಹೇಳುವದು. ಈ ದಿನಗಳಲ್ಲಿ ಎಲ್ಲವೂ ಮ್ಯಾಟರ್ ಆಗುತ್ತೆ' ಎಂದು ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಅವರ ಈ ಟ್ವೀಟ್ ಪಕ್ಕಾ ಬಾಯ್ಕಟ್ ಬಗ್ಗೆಯೇ ಮಾಡಿರುವುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಾಯ್ಕಟ್ ಬಗ್ಗೆ ಅಮಿತಾಭ್ ನೇರವಾಗಿ ಏನು ಹೇಳದಿದ್ದರು ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ. ಅಂದಹಾಗೆ ಅಮಿತಾಭ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಸಮಯದಲ್ಲಿ ಬಾಯ್ಕಟ್ ಬ್ರಹ್ಮಾಸ್ತ್ರ ಟ್ರೆಂಡ್ ಆಗುತ್ತಿದೆ.
ಇಷ್ಟವಿಲ್ಲ ಎಂದರೆ ನನ್ನನ್ನ ನೋಡ್ಬೇಡಿ; ಬಾಯ್ಕಟ್‌ಗೆ ಉತ್ತರಿಸಿದ ಆಲಿಯಾ ಭಟ್ ಸಖತ್ ಟ್ರೋಲ್
ಆಲಿಯಾ ಭಟ್ ಇತ್ತೀಚಿಗಷ್ಟೆ ಸಂದರ್ಶನದಲ್ಲಿ 'ನನ್ನನ್ನು ನೋಡಲು ಇಷ್ಟವಿಲ್ಲ ಎಂದರೆ ನೋಡಬೇಡಿ' ಎಂದು ಹೇಳಿದ್ದರು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು. ಆಲಿಯಾ ಭಟ್ ಹೇಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಟ್ ಟ್ರೆಂಡ್ ಶುರುವಾಗಿದೆ. ಬಾಯ್ಕಟ್ ಆಲಿಯಾ ಭಟ್ ಮತ್ತು ಬಾಯ್ಕಟ್ ಬ್ರಹ್ಮಾಸ್ತ್ರ ಟ್ರೆಂಡ್ ಆಗುತ್ತಿದೆ. ‘ನಾನು ಏನು ಎಂಬುದನ್ನು ಮಾತಿನಲ್ಲಿ ಹೇಳಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ನಾನು ಇಷ್ಟ ಇಲ್ಲ ಎಂದಾದರೆ ನನ್ನನ್ನು ನೋಡಬೇಡಿ. ನಾನೇನು ಮಾಡಲು ಸಾಧ್ಯವಿಲ್ಲ. ಜನರಿಗೆ ಹೇಳಲು ಏನಾದರೂ ಇರುತ್ತೆ. ನಾನೀಗ ಇರುವ ಜಾಗಕ್ಕೆ ನಾನು ಯೋಗ್ಯನಾಗಿದ್ದೇನೆ ಎಂದು ನನ್ನ ಸಿನಿಮಾಗಳ ಮೂಲಕ ನಾನು ಸಾಬೀತುಪಡಿಸುತ್ತೇನೆ' ಎಂದು ಹೇಳಿದರು. ಅಲಿಯಾ ಈ ಹೇಳಿಕೆ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದೆ. ತರಹೇವಾರಿ ಕಾಮೆಂಟ್ ಮಾಡಿ ಅಲಿಯಾ ಸಿನಿಮಾ ಬಹಿಷ್ಕರಿಸುವಂತೆ ಹೇಳುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾಗೂ ಬಾಯ್ಕಟ್ ಬಿಸಿ ತಟ್ಟಿದ ಬೆನ್ನಲ್ಲೇ ಅಮಿತಾಬಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.
ನನ್ನ ಸಿನಿಮಾ ಬಾಯ್ಕಟ್ ಮಾಡಿ ಎಂದ ತಾಪ್ಸಿ ಸಿನಿಮಾ ಹೀನಾಯ ಸೋಲು
ಆದರೀಗ ಅಮಿತಾಭ್‌ಗೆ ಕೊರೊನಾ ಪಾಸಿಟಿವ್ ಬಂದಿರುವುದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. 2ನೇ ಬಾರಿಗೆ ಕೊರೊನಾ ಸೋಂಕು ತಗುಲಿದೆ. ಅಮಿತಾಭ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಂಡು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.