ತನ್ನ ಕುಟುಂಬದ ಜೊತೆ ಸಲ್ಮಾನ್ ಫೋಟೋ ಕ್ಲಿಕ್ಕಿಸಿದ ಆಮಿರ್ ಖಾನ್, ಚಿತ್ರ ಶೇರ್ ಮಾಡಿದ ನಿಖತ್!
ಕಳೆದ ಮಂಗಳವಾರ ಸಲ್ಮಾನ್ ಖಾನ್ ಅವರು ಆಮಿರ್ ಖಾನ್ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಸಾಕಷ್ಟು ಭದ್ರತೆಯ ನಡುವೆ, ತಮ್ಮ ಕಾರ್‌ನಲ್ಲಿ ಆಮಿರ್ ಖಾನ್ ಮನೆಗೆ ಬಂದಿದ್ದ ಚಿತ್ರ ವೈರಲ್ ಆಗಿತ್ತು.

ನವದೆಹಲಿ (ಜ.31): ಲಾಲ್ ಸಿಂಗ್ ಚಡ್ಡಾ ಚಿತ್ರದ ದಯನೀಯ ಸೋಲಿನ ಬಳಿಕ ಆಮಿರ್ ಖಾನ್ ಚಿತ್ರಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೂ. ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆಮ್ಮೊ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳಿಗೆ ಅಪ್‌ಡೇಟ್ ನೀಡುತ್ತಿರುತ್ತಾರ. ಈ ಬಾರಿ ಆಮಿರ್ ಖಾನ್ ಅವರ ಸಹೋದರಿ ನಿಖತ್ ಹೆಗ್ಡೆ, ಆಮಿರ್ ಖಾನ್ ಅವರ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆಮಿರ್ ಖಾನ್ ತಮ್ಮ ಕುಟುಂಬದ ಚಿತ್ರಕ್ಕೆ ಫೋಟೋಗ್ರಾಫರ್ ಆಗಿ ಬದಲಾಗಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕೂಡ ಇರುವುದು ವಿಶೇಷವಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್, ಆಮಿರ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ತೆಗೆದ ಚಿತ್ರ ಇದಾಗಿರಬಹುದು ಎನ್ನಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ನಿಖತ್ ಹಾಗೂ ಆಮೀರ್ ಅವರ ತಾಯಿ ಝೀನತ್ ಹುಸೇನ್ ಅವರ ಪಕ್ಕದಲ್ಲಿ ನಿಂತು ಚಿತ್ರ ತೆಗೆದುಕೊಂಡಿದ್ದು, ಆಮೀರ್ ಖಾನ್ ಈ ಪೂರ್ಣ ಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದಿದ್ದಾರೆ. ಆಮಿರ್ ಅವರ ಇತರ ಸಂಬಂಧಿಗಳೂ ಕೂಡ ಈ ಚಿತ್ರದಲ್ಲಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಖತ್ ಹೆಗ್ಡೆ, 'ಆಮಿರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗಾಗಿ' ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಈ ಚಿತ್ರ ಪ್ರಕಟವಾದ ಬೆನ್ನಲ್ಲಿಯೇ, ಅಭಿಮಾನಿಗಳು ಕಾಮೆಂಟ್ ಸೆಕ್ಷನ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಸಲ್ಮಾನ್ ಹಾಗೂ ಆಮಿರ್ ಬಾಲಿವುಡ್‌ನ ಎರಡು ಸುಂದರ ಸ್ತಂಭಗಳು' ಎಂದು ಒಬ್ಬ ಅಭಿಮಾನಿ ಬರೆದಿದ್ದರೆ, 'ಸೋ ಕ್ಯೂಟ್ ಆಮಿರ್ ಸರ್. ಕ್ಯಾಮೆರಾಮೆನ್ ಆಗಿದ್ದೀರಿ. ಲವ್ ಯು ಆಮಿರ್ ಸರ್! ಲವ್ ಯುವರ್ ಫ್ಯಾಮಿಲಿ. ನೀವು ನಮ್ಮ ದೇಶದ ಹೆಮ್ಮೆ' ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಚಿತ್ರದಲ್ಲಿ ಸಲ್ಮಾನ್ ಖಾನ್ ಖುಷಿಯಿಂದಲೇ ಆಮಿರ್ ಖಾನ್ ಅವರ ಕುಟುಂಬದೊಂದಿಗೆ ಚಿತ್ರ ತೆಗೆದುಕೊಂಡಿದ್ದನ್ನು ಪೋಸ್ಟ್ ಮಾಡಲಾಗಿದೆ. ಈ ಚಿತ್ರ ಪೋಸ್ಟ್ ಮಾಡುವ ವೇಳೆ ನಿಖತ್ ಹೆಗ್ಡೆ, ಹೃದಯದ ಇಮೋಜಿಗಳನ್ನು ಹಾಕಿಕೊಂಡಿದ್ದಾರೆ. ಕಳೆದ ವಾರದ ಮಂಗಳವಾರದಂದು ಸಲ್ಮಾನ್ ಖಾನ್ ಅವರು ಆಮಿರ್ ಖಾನ್ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಸಾಕಷ್ಟು ಭದ್ರತೆಯ ನಡುವೆ, ತಮ್ಮ ಕಾರ್‌ನಲ್ಲಿ ಆಮಿರ್ ಖಾನ್ ಮನೆಗೆ ಬಂದಿದ್ದ ಚಿತ್ರ ವೈರಲ್ ಆಗಿತ್ತು.
ಮಾಡಿದ ಚಿತ್ರಗಳೆಲ್ಲ ಫ್ಲಾಪ್, ಸಂಭಾವನೆ ಕಡಿಮೆ ಮಾಡಿದ ಆಮೀರ್, ಆಮಿತಾಭ್, ಅಕ್ಷಯ್!
ಅಮೀರ್ ಖಾನ್ ಅವರ ಸಹೋದರಿ ನಿಖತ್ ಹೆಗ್ಡೆ ಇತ್ತೀಚೆಗೆ ಶಾರುಖ್ ಖಾನ್ ಅವರ ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಶಾರುಖ್ ಅವರ ಸಾಕು ತಾಯಿ ಸಬಾ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮೀರ್ ಖಾನ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಸೂಪರ್ ಸ್ಟಾರ್ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದರು, ಅಲ್ಲಿ ಅವರು ಪಂಜಾಬಿ ಗಾಯಕ ಜಸ್ಬೀರ್ ಜಾಸಿ ಅವರನ್ನು ಭೇಟಿಯಾದರು. ಗಾಯಕ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು "ದಿಲ್ ದ ಅಮೀರ್ (ಹೃದಯದಿಂದ ಶ್ರೀಮಂತ), ಅಮೀರ್ ಖಾನ್" ಎಂದು ಬರೆದುಕೊಂಡಿದ್ದಾರೆ.
Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು
ಇನ್ನು ಕೆಲಸದ ವಿಚಾರಕ್ಕೆ ಬರೋದಾದರೆ, ಆಮಿರ್ ಖಾನ್ ಕೊನೆಯ ಬಾರಿಗೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಆಮಿರ್ ಜೋಡಿಯಾಗಿ ಕರೀನಾ ಕಪೂರ್ ನಟಿಸಿದ್ದರು.