೨೭ ವರ್ಷದ ಇರಾ ಖಾನ್, ಆಮಿರ್ ಖಾನ್ ಪುತ್ರಿ, ತಾವು ಹಣ ಸಂಪಾದಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪಾಲಕರು ತಮ್ಮ ಮೇಲೆ ಹೆಚ್ಚು ಖರ್ಚು ಮಾಡಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಆದರೆ, ಆಮಿರ್ ಖಾನ್ ಮಗಳ ಒಳ್ಳೆಯ ಕೆಲಸವನ್ನು ಶ್ಲಾಘಿಸಿದ್ದಾರೆ ಹಾಗೂ ಹಣಕ್ಕಿಂತ ಕೆಲಸ ಮುಖ್ಯ ಎಂದು ಸಲಹೆ ನೀಡಿದ್ದಾರೆ.
ನಟ ಆಮಿರ್ ಖಾನ್ ಮಗಳು ಇರಾ ಖಾನ್‌ಗೆ 27 ವರ್ಷ. ಆದರೆ ಈ ವಯಸ್ಸಿನಲ್ಲೂ ಕೂಡ ಹಣ ಸಂಪಾದನೆ ಮಾಡದೆ, ಮನೆಯಲ್ಲೇ ಕೂತಿರೋದಿಕ್ಕೆ ಅವರು ಬೇಸರ ಹೊರಹಾಕಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹಣ ಸಂಪಾದಿಸುತ್ತಿಲ್ಲ ಎಂದು ಆಗಿದ್ದ ಬೇಸರ, ಆಗ ತಂದೆ ನೀಡಿದ ಅಮೂಲ್ಯ ಸಲಹೆಯ ಬಗ್ಗೆ ಅವರು ಮಾತನಾಡಿದ್ದಾರೆ. ನನ್ನ ಮೇಲೆ ಪಾಲಕರು ಬಹಳ ಹಣ ಖರ್ಚು ಮಾಡಿದ್ದಾರೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ ನಾನು ಇನ್ನೂ ಸಂಪಾದನೆ ಮಾಡ್ತಿರೋದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ಹಣ ಗಳಿಸುತ್ತಿರಲಿಲ್ಲ!
ಆಮಿರ್ ಖಾನ್ ಮುದ್ದಿನ ಮಗಳು ಇರಾ ಮಾತನಾಡಿ, ನನಗೆ ಈಗ 27 ವರ್ಷ. ನನ್ನ ಅಪ್ಪ-ಅಮ್ಮ ನನ್ನ ಮೇಲೆ ತುಂಬಾ ಹಣ ಖರ್ಚು ಮಾಡಿದ್ದಾರೆ. ನಾನು ಪ್ರಪಂಚದಲ್ಲೇ ಅತ್ಯಂತ ನಿಷ್ಪ್ರಯೋಜಕ ವ್ಯಕ್ತಿ. ನಾನು ಏನನ್ನೂ ಮಾಡುತ್ತಿಲ್ಲ. ಆಮಿರ್ ಖಾನ್ ಅವರ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವ ಎನ್‌ಜಿಒ ಫೌಂಡೇಶನ್‌ನೊಂದಿಗೆ ಕೆಲಸ ಮಾಡುವ ಮೊದಲು ನಾನು ಹಣ ಸಂಪಾದಿಸುತ್ತಿರಲಿಲ್ಲ ಅಥವಾ ಯಾವುದೇ ಕೆಲಸ ಮಾಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ʼನನ್ನ ಮಗನ ಸಿನಿಮಾ ಸೋತಿದ್ದೇ ಒಳ್ಳೇದಾಯ್ತುʼ; ಮೊದಲ ಪತ್ನಿ ಪುತ್ರನ ಬಗ್ಗೆ ಆಮಿರ್ ಖಾನ್ ಇಂಥಾ ಮಾತಾಡಿದ್ರಾ?
ಸುಮ್ಮನೆ ಮನೆಯಲ್ಲಿ ಕೂತ ಮಗಳ ಬಗ್ಗೆ ಆಮಿರ್ ಏನಂತಾರೆ?
ಇರಾ ತಮ್ಮ ನಿಷ್ಪ್ರಯೋಜಕ ಜೀವನದ ಬಗ್ಗೆ ನಿರಾಶೆ ವ್ಯಕ್ತಪಡಿಸುತ್ತಿದ್ದರೆ, ಆಮಿರ್ ಖಾನ್ ಅವರಿಗೆ ಇದು ಎಂದಿಗೂ ಸಮಸ್ಯೆ ಆಗಿಗಿರಲಿಲ್ಲವಂತೆ. "ನೀವು ಹಣ ಸಂಪಾದಿಸುತ್ತೀರೋ ಇಲ್ಲವೋ ಅದು ನನಗೆ ಮುಖ್ಯವಲ್ಲ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಅದು ನನಗೆ ಮುಖ್ಯ. ಹಣ ವಾಸ್ತವವಾಗಿ ಎಲ್ಲರೂ ಒಪ್ಪಿಕೊಳ್ಳುವ ಒಂದು ಒಪ್ಪಂದ. ಇಲ್ಲದಿದ್ದರೆ ಅದು ಕೇವಲ ಕಾಗದದ ತುಂಡು ಎಂದು ನನ್ನ ತಂದೆ ಹೇಳಿದ್ದರು” ಎಂದಿದ್ದಾರೆ ಇರಾ ಖಾನ್.
ಎರಡು ಮದುವೆ, ಒಂದು ಡೇಟಿಂಗ್!
ಆಮಿರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು ಇರಾ ಖಾನ್. 1986 ರಲ್ಲಿ ಆಮಿರ್, ರೀನಾ ವಿವಾಹವಾದರು. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಜುನೈದ್ ಖಾನ್ ಈಗಾಗಲೇ 'ಮಹಾರಾಜ' ಮತ್ತು 'loveyapa' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇರಾ ಜುನೈದ್‌ಗಿಂತ ಚಿಕ್ಕವರು. ಮನಸ್ತಾಪ ಬಂದಿದ್ದಕ್ಕೆ ಆಮಿರ್, ರೀನಾ 2002 ರಲ್ಲಿ ವಿಚ್ಛೇದನ ಪಡೆದರು. 2024 ರಲ್ಲಿ ಇರಾ ಅವರು ತಂದೆ-ತಾಯಿ, ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ಬಹುಕಾಲದ ಗೆಳೆಯ ನೂಪುರ್ ಶಿಖರೆ ಅವರನ್ನು ವಿವಾಹವಾದರು. ನೂಪುರ್ ಅವರು ಸೆಲೆಬ್ರಿಟಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಳಿದ ಸ್ಟಾರ್ ಕಿಡ್‌ಗಳಿಗೆ ಹೋಲಿಸಿದರೆ ಇರಾ ಅಷ್ಟಾಗಿ ಪಾರ್ಟಿ ಮಾಡೋದಿಲ್ಲ. ತಾವಾಯ್ತು, ತಮ್ಮ ಜೀವನ ಆಯ್ತು ಎನ್ನೋ ಥರ ಇರುತ್ತಾರೆ. 2005 ರಲ್ಲಿ ಆಮಿರ್ ಖಾನ್ ಅವರು ಕಿರಣ್ ರಾವ್ ಅವರನ್ನು ಮದುವೆಯಾದರು. ಈ ಜೋಡಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ. ಆಮಿರ್, ಕಿರಣ್ ಕೂಡ 2021ರಲ್ಲಿ ಬೇರ್ಪಟ್ಟರು. ಈಗ ಆಮಿರ್ ಅವರು ಗೌರಿ ಸ್ಪ್ರಾಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.
ಆಮಿರ್ ಖಾನ್ ಪ್ರೇಯಸಿ ಬೆಂಗಳೂರಿನ Gauri Spratt ; ಐತಿಹಾಸಿಕ ಕುಟುಂಬದ ಹಿನ್ನಲೆ ಹೊಂದಿರೋ ಇವರಾರು?
ಆಮಿರ್ ಖಾನ್ ಮುಂಬರುವ ಸಿನಿಮಾಗಳು
ಕಳೆದ 3 ವರ್ಷಗಳಿಂದ ಆಮಿರ್ ಖಾನ್ ಹೀರೋ ಆಗಿರುವ ಸಿನಿಮಾ ಒಂದೂ ರಿಲೀಸ್ ಆಗಿಲ್ಲ. 2018 ರಲ್ಲಿ 'ಥಗ್ಸ್ ಆಫ್ ಹಿಂದೂಸ್ತಾನ್', 2022 ರಲ್ಲಿ 'ಲಾಲ್ ಸಿಂಗ್ ಚಡ್ಡಾ' ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದವು. 'ಸಿತಾರೆ ಜಮೀನ್ ಪರ್' ಸಿನಿಮಾದಲ್ಲಿ ಆಮಿರ್ ನಟಿಸುತ್ತಿದ್ದು, ಆರ್ ಎಸ್ ಪ್ರಸನ್ನ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೂನ್ 20 ರಂದು ಈ ಸಿನಿಮಾ ರಿಲೀಸ್ ಆಗಲಿದೆ. ರಜನಿಕಾಂತ್ ಅಭಿನಯದ ತಮಿಳು ಸಿನಿಮಾ 'ಕೂಲಿ'ಯಲ್ಲಿ ಇವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಕೂಡ ಈ ವರ್ಷ ಬಿಡುಗಡೆಯಾಗಲಿದೆ.
