ಬೆಂಗಳೂರು(ಫೆ.20):  ಆಫ್ ರೋಡ್ ರೇಸ್ ಬಹುತೇಕರಿಗೆ ಇಷ್ಟ. ದೇಶ-ವಿದೇಶಗಳಲ್ಲಿ ಆಫ್‌ರೋಡ್ ರೇಸ್ ಆಯೋಜನೆಯಾಗುತ್ತಿದೆ. ಆದರೆ ಈ ಕುರಿತ ಸಿನಿಮಾ ಇದುವರೆಗೂ ಬಂದಿಲ್ಲ. ಭಾರತೀಯ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಫ್ ರೋಡ್ ಮಡ್ ರೇಸ್ ಆಧಾರಿತಿ 'ಮಡ್ಡಿ' ಸಿನಿಮಾ ರೆಡಿಯಾಗುತ್ತಿದೆ. ಬಹುನಿರೀಕ್ಷಿತ ಮಡ್ಡಿ ಸಿನಿಮಾದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.

 

ಸ್ಯಾಂಡಲ್‌ವುಡ್ ನಟ ಶ್ರೀಮುರಳಿ, ತಮಿಳು ನಟ ವಿಜಯ್ ಸೇತುಪತಿ ನೂತನ ಮಡ್ಡಿ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 4X4 ಆಫ್ ರೋಡ್ ಜೀಪ್, ಸಾಹಸ ಕ್ಷಣಗಳು, ಆ್ಯಕ್ಷನ್, ಥ್ರಿಲ್ಲರ್ ಸೇರಿದಂತೆ ಉತ್ಸಾಹಿಗಳ ಹೃದಯ ಬಡಿತ ಹೆಚ್ಚಿಬಲ್ಲ ಹಾಗೂ ಬೆರಗುಗೊಳಿಸಬಲ್ಲ ಸಿನಿಮಾ ಇದಾಗಿದೆ.

ಮಡ್ಡಿ ಸಿನಿಮಾ ಆಫ್ ರೋಡ್ ರೇಸಿಂಗ್ ತಂಡಗಳ ನಡುವಿನ ಪೈಪೋಟಿ, ಸೇಡು, ಹಾಸ್ಯ, ಡ್ರಾಮಾ , ಆ್ಯಕ್ಷನ್, ಸಾಹಸ ಸೇರಿದಂತೆ ಹಲವು ಕುತೂಹಲಗಳ ಮಿಶ್ರಣವಾಗಿದೆ. ಮಡ್ಡಿ ಸಿನಿಮಾ ಮೂರು ವಿಭಿನನ್ನ ಮಾದರಿಯ ಮಡ್ ರೇಸಿಂಗ್ ಕತೆ ಒಳಗೊಂಡಿದೆ. ಸಿನಿಮಾ ಚಿತ್ರೀಕರಣ ಅತ್ಯಂತ ಸುಂದರ ಹಾಗೂ ಅಪಾಯಕಾರಿ ತಾಣಗಳಲ್ಲಿ ಚಿತ್ರಿಸಲಾಗಿದೆ. ಪ್ರೇಕ್ಷಕರಿಗೆ ಆ್ಯಕ್ಷನ್-ಥ್ರಿಲ್ಲರ್ ಹಾಗೂ ಅತ್ಯುತ್ತಮ ಕತೆ ಅನುಭವ ನೀಡಲಿದೆ.

ರೇಸಿಂಗ್ ಜಗತ್ತಿನ ಆ್ಯಕ್ಷನ್-ಥ್ರಿಲ್ಲರ್ ಚಿತ್ರವನ್ನು ಪ್ರಗಾಭಲ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಪ್ರಗಾಭಲ್ ನಿರ್ದೇಶಿಸುತ್ತಿರುವ ಮೊದಲ ಚಿತ್ರವಾಗಿದೆ. ಪಿಕೆ ಕ್ರಿಯೇಷನ್ ಬ್ಯಾನರ್ ಆಡಿಯಲ್ಲಿ ಪ್ರೇಮಾ ಕೃಣ್ಣದಾಸ್ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭಾರತದ ಫುಟ್ಬಾಲ್ ದಿಗ್ಗಜ ಐ.ಎಂ ವಿಜಯನ್, ಖ್ಯಾತ ಕಲಾವಿದ ರೆಂಜಿ ಪಣಿಕ್ಕರ್, ಹರೀಶ್ ಪೆರಾಡಿ, ಗಿನ್ನೆಸ್ ಮನೋಜ್, ಶೋಭಾ ಮೋಹನ್ ಹಾಗೂ ಸುನಿಲ್ ಸುಗಾಧಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಮಡ್ಡಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರತ್ಸಾಸನ್ ಚಲನಚಿತ್ರ ಸಂಕಲನ ಜವಾಬ್ದಾರಿ ನಿರ್ವಹಿಸಿದ್ದರೆ, ಹಾಲಿವುಡ್ ಸಿನಿಮಾಟೋಗ್ರಾಫರ್ ಕೆಜಿ ರತೀಶ್ ಕ್ಯಾಮಾರ ಕೈಚಳಕವಿದೆ.