Asianet Suvarna News Asianet Suvarna News

ಮಾಧುರಿ ದೀಕ್ಷಿತ್ ಬಿಟ್ರೆ ನೀವೆ ಅದ್ಭುತ ಡಾನ್ಸರ್; ನೆಟ್ಟಿಗರ ಕಾಮೆಂಟ್‌ಗೆ ಅಭಿಷೇಕ್ ಕೊಟ್ಟ ರಿಯಾಕ್ಷನ್ ಹೀಗಿತ್ತು

ಮಾಧುರಿ ದೀಕ್ಷಿತ್ ಬಿಟ್ರೆ ನೀವೆ ಅದ್ಭುತ ಡಾನ್ಸರ್ ಎಂದ ನೆಟ್ಟಿಗರಿಗೆ ಅಭಿಷೇಕ್ ಕೊಟ್ಟ ರಿಯಾಕ್ಷನ್ ಹೀಗಿತ್ತು 

Abhishek Bachchan's reacts to being called best dancer after Madhuri Dixit sgk
Author
First Published Feb 25, 2023, 5:19 PM IST | Last Updated Feb 25, 2023, 5:19 PM IST

ಬಾಲಿವುಡ್ ನಲ್ಲಿ ಈಗ ಬೆಸ್ಟ್ ಡಾನ್ಸರ್ ಯಾರು ಎನ್ನುವ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಅವರವರ ನೆಚ್ಚಿನ ನಟರ ಹೆಸರನ್ನು ಹೇಳುತ್ತಿದ್ದಾರೆ. ರಣಬೀರ್ ಕಪೂರ್ ಅಭಿಮಾನಿಗಳ ಮಾಧುರಿ ದೀಕ್ಷಿತ್ ಬಳಿಕ ರಣಬೀರ್ ಕಪೂರ್ ಅವರೇ ಬೆಸ್ಟ್ ಡಾನ್ಸರ್ ಎಂದು ಹೇಳುತ್ತಿದ್ದಾರೆ. ಈ ಮಾತಿಗೆ ಅನೇಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಹೃತಿಕ್ ರೋಷನ್, ಗೋವಿಂದ್, ವರುಣ್ ಧವನ್ ಹೀಗೆ ಮುಂತಾದವರ ಹೆಸರನ್ನು ಹೇಳುತ್ತಿದ್ದಾರೆ ಅಭಿಮಾನಿಗಳು. 

ನೆಟ್ಟಿಗರೊಬ್ಬರು ಅಭಿಷೇಕ್ ಬಚ್ಚನ್ ಹೆಸರು ಹೇಳಿದ್ದಾರೆ. ಅತ್ಯುತ್ತಮ ನೃತ್ಯಗಾರ ಪಟ್ಟಿಗೆ ಅಭಿಷೇಕ್ ಹೆಸರನ್ನು ಸೇರಿಸಿದ್ದಾರೆ. ನೆಟ್ಟಗರ ಕಾಮೆಂಟ್ ಗೆ ಅಭಿಷೇಕ್ ಬಚ್ಚನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಷೇಕ್ ರಿಯಾಕ್ಷನ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯ ಕಾಮೆಂಟ್ ಅನ್ನು ಪಾಸಿಟಿವ್ ಆಗಿ ತೆಗೆದುಕೊಂಡಿರುವ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. 

ನೆಟ್ಟಿಗರೊಬ್ಬರು ರೋಹಿತ್ ಶೆಟ್ಟಿ ನಿರ್ದೇಶನದ ಬೋಲ್ ಬಚ್ಚನ್ ಸಿನಿಮಾದಿಂದ ಅಭಿಷೇಕ್ ನೃತ್ಯದ ವಿಡಿಯೋವನ್ನು ಶೇರ್ ಮಾಡಿದ್ದಾರೆ. 2012ರಲ್ಲಿ ರಿಲೀಸ್ ಆಗಿದ್ದ ಸಿನಿಮಾವಾಗಿದೆ.  ಓಹ್ ಲಾ ಲಾ, ಜಬ್ ತಕ್ ಹೈ ಜಾನ್, ಮೇರೆ ಧೋಲ್ನಾ ಮುಂತಾದ ಹಾಡುಗಳಿಗೆ ಫನ್ನಿಯಾಗಿ ಡಾನ್ಸ್ ಮಾಡಿದ್ದರು. ಅದಕ್ಕೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ 'ಮಾಧುರಿ ದೀಕ್ಷಿತ್ ಬಳಿಕ ಅತ್ಯುತ್ತಮ ಡಾನ್ಸರ್ ಅಭಿಷೇಕ್' ಎಂದು ಹೇಳಿದ್ದಾರೆ. ಮತ್ತೋರ್ವ ಪ್ರತಿಕ್ರಿಯೆ ನೀಡಿ, ಹೆಚ್ಚಿನ ಚರ್ಚೆ ಬೇಡ, ನಮಗೆ ವಿನ್ನರ್ ಸಿಕ್ಕಿದ್ರು, ಅಭಿಷೇಕ್ ಬಚ್ಚನ್ ಎಂದು ಹೇಳಿದರು. 

ಇದಕ್ಕೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಬಗ್ಗೆ ಎಂದಾದರೂ ಚರ್ಚೆ ನಡೆದಿದೆಯೇ?' ಎಂದು ಹೇಳಿದ್ದಾರೆ. ಪಾಸಿಟಿವ್ ಆಗಿತೆಗೆದುಕೊಂಡು ಪ್ರತಿಕ್ರಿಯೆ ನೀಡಿರುವ ಅಭಿಷೇಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಷೇಕ್ ಅವರಿಗೆ ತಮಾಷೆ ಮಾಡಿದ್ದು ನೋಡಿ ಖುಷಿಯಾಯಿತು ಎನ್ನುತ್ತಿದ್ದಾರೆ.

ಐಶ್ವರ್ಯ ರೈನ ಮದುವೆ ಆಗಿದ್ದಕ್ಕೆ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಯ್ತು: ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್

ತಸ್ಲೀಮಾ ನಸ್ರೀನ್ ಹೇಳಿಕೆ

ಅಭಿಷೇಕ್ ಬಚ್ಚನ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಟ್ರೋಲ್‌ಗಳಿಗೆ ಸೈಲೆಂಟ್ ಆಗಿರದೆ ಅಭಿಷೇಕ್ ತಕ್ಕಾ ತಿರುಗೇಟು ಕೂಡ ನೀಡುತ್ತಾರೆ. ನಟನೆ ಬರಲ್ಲ, ತಂದೆಯಷ್ಟು ಖ್ಯಾತಿ ಗಳಿಸಿಲ್ಲ, ನಿರುದ್ಯೋಗಿ ಹೀಗೆ ಅನೇಕ ವಿಚಾರಗಳಿಗೆ ಅಭಿಷೇಕ್ ಟ್ರೋಲ್ ಆಗಿದ್ದರು. ಇತ್ತೀಚಿಗಷ್ಟೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಕೂಡ ಅಭಿಷೇಕ್ ಕಾಲೆಳೆದಿದ್ದರು. ಲೇಖಕಿಗೂ ಅಭಿಷೇಕ್ ತಿರುಗೇಟು ನೀಡಿದ್ದರು. 'ಅಭಿಷೇಕ್ ಬಚ್ಚನ್ ಉತ್ತಮ ನಟ ಅಲ್ಲ, ಅವರ ತಂದೆ ಅಮಿತಾಬ್ ಬಚ್ಚನ್ ಅವರಷ್ಟು ಪ್ರತಿಭಾವಂತರಲ್ಲ' ಎಂದು ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್  ಹೇಳಿದ್ದರು. 

60 ಕೋಟಿಯ ಬಂಗಲೆ ಮತ್ತು ಐಷಾರಾಮಿ ಕಾರುಗಳ ಓನರ್‌ ಆರಾಧ್ಯ ಬಚ್ಚನ್!

ಅಭಿಷೇಕ್ ರಿಯಾಕ್ಷನ್ 

ತಸ್ಲೀಮಾ ನಸ್ರೀನ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ರೂ ಸಹ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದರು. 'ಖಂಡಿತವಾಗಿಯೂ ನೀವು ಹೇಳಿದ್ದು ಸರಿ ಇದೆ ಮೇಡಮ್. ಪ್ರತಿಭೆ ಅಥವಾ ಬೇರೆ ಯಾವುದರಲ್ಲಾದರೂ ಯಾರು ಸಹ ಅವರ ಬಳಿ ಬರಲು ಸಾಧ್ಯವಿಲ್ಲ. ಅವರು ಯಾವಾಗಲೂ ಅತ್ಯುತ್ತಮರಾಗಿಯೇ ಉಳಿಯುತ್ತಾರೆ. ನಾನು ಅತ್ಯಂತ ಹೆಮ್ಮೆಯ ಮಗ' ಎಂದುಹೇಳಿದ್ದಾರೆ.

 

Latest Videos
Follow Us:
Download App:
  • android
  • ios