Asianet Suvarna News Asianet Suvarna News

ತಂದೆಯಷ್ಟು ಪ್ರತಿಭಾವಂತನಲ್ಲ; ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೆಗೆ ಅಭಿಷೇಕ್ ಬಚ್ಚನ್ ರಿಯಾಕ್ಷನ್ ವೈರಲ್

ಲೇಖಕಿ ತಸ್ಲೀಮಾ ನಸ್ರೀನ್ ಅವರ ಹೇಳಿಕೆಗೆ ನಟ ಅಭಿಷೇಕ್ ಬಚ್ಚನ್ ರಿಯಾಕ್ಷನ್ ವೈರಲ್ ಆಗಿದೆ. 

Abhishek Bachchan Epic Reply To Taslima Nasreen's Deleted Tweet sgk
Author
First Published Dec 23, 2022, 3:34 PM IST

ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಅನೇಕ ವಿಚಾರಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಅಷ್ಟೇ ಖಡಕ್ ರಿಯಾಕ್ಷನ್ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸುತ್ತಾರೆ. ಅಭಿಷೇಕ್ ಬಚ್ಚನ್ ಉತ್ತಮ ನಟ ಅಲ್ಲ, ಅವರ ತಂದೆ ಅಮಿತಾಬ್ ಬಚ್ಚನ್ ಅವರಷ್ಟು ಪ್ರತಿಭಾವಂತರಲ್ಲ ಎಂದು ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ತಸ್ಲೀಮಾ ನಸ್ರೀನ್ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ. ಟ್ವೀಟ್ ಡಿಲೀಟ್ ಆಗಿದ್ದರೂ ಸಹ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. ಅಭೇಷಕ್ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ.  

ತಸ್ಲೀಮಾ ನಸ್ರೀನ್ ಟ್ವೀಟ್ 

ಅಮಿತಾಭ್ ಬಚ್ಚನ್ ಅವರು ತಮ್ಮ ಮಗ ಅಭಿಷೇಕ್ ಬಚ್ಚನ್ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರು ತಮ್ಮ ಮಗ ಎಲ್ಲಾ ಪ್ರತಿಭೆಗಳನ್ನು ಪಡೆದಿದ್ದಾನೆ ಮತ್ತು ಅವನು ದಿ ಬೆಸ್ಟ್ ಎಂದು ಭಾವಿಸಿದ್ದಾರೆ. ಅಭಿಷೇಕ್ ತುಂಬಾ ಒಳ್ಳೆಯವರು. ಆದರೆ ಅಮಿತಾಬ್ ಹಾಗೆ ಪ್ರತಿಭಾವಂತರಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು.  ಟ್ವೀಟ್ ವೈರಲ್ ಆಗುತ್ತಿದ್ದಂತೆ ತಸ್ಲೀಮಾ ನಸ್ರೀನ್ ಡಿಲೀಟ್ ಮಾಡಿದರು. ಆದರೆ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 

Pro Kabaddi: ಜೈಪುರ ಗೆದ್ದ ಖುಷಿಗೆ ಪತ್ನಿ ಐಶ್ವರ್ಯಾರನ್ನು ಬಿಗಿದಪ್ಪಿ ಸಂಭ್ರಮಿಸಿದ ಅಭಿಷೇಕ್ ಬಚ್ಚನ್

ಅಭಿಷೇಕ್ ರಿಯಾಕ್ಷನ್ 

ತಸ್ಲೀಮಾ ನಸ್ರೀನ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ರೂ ಸಹ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. ಖಂಡಿತವಾಗಿಯೂ ನೀವು ಹೇಳಿದ್ದು ಸರಿ ಇದೆ ಮೇಡಮ್. ಪ್ರತಿಭೆ ಅಥವಾ ಬೇರೆ ಯಾವುದರಲ್ಲಾದರೂ ಯಾರು ಸಹ ಅವರ ಬಳಿ ಬರಲು ಸಾಧ್ಯವಿಲ್ಲ. ಅವರು ಯಾವಾಗಲೂ ಅತ್ಯುತ್ತಮರಾಗಿಯೇ ಉಳಿಯುತ್ತಾರೆ. ನಾನು ಅತ್ಯಂತ ಹೆಮ್ಮೆಯ ಮಗ' ಎಂದುಹೇಳಿದ್ದಾರೆ.

ಇತ್ತೀಚೆಗೆ ಫಿಲ್ಮ್‌ಫೇರ್ OTT ಪ್ರಶಸ್ತಿಯಲ್ಲಿ ಅಭಿಷೇಕ್ ಬಚ್ಚನ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ನಂತರ ತಂದೆ ಅಮಿತಾಭ್ ಬಚ್ಚನ್ ಹಾಡಿ ಹೊಗಳಿದ್ದರು. ಅಭಿಷೇಕ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಟ್ವಿಟ್ಟರ್ನಲ್ಲಿ 'ನನ್ನ ಹೆಮ್ಮೆ... ನನ್ನ ಸಂತೋಷ... ನೀನು ನಿನ್ನ ವಿಷಯವನ್ನು ಸಾಬೀತುಪಡಿಸಿದ್ದೀಯ.  ನಿನ್ನನ್ನು ಅಪಹಾಸ್ಯ ಮಾಡಲಾಯಿತು. ಆದರೆ ನೀನು ಯಾವುದೇ ಟಾಮ್ ಮಾಡದೆ ಮೌನವಾಗಿ, ನಿನ್ನ ಸಾಮರ್ಥ್ಯವನ್ನು ತೋರಿಸಿದ್ದೀಯಾ. ನೀನು ಉತ್ತಮ' ಎಂದು ಹೇಳಿದರು.

ಅಭಿಷೇಕ್ ಬಚ್ಚನ್ ಸದ್ಯ ಒಟಿಟಿಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಅಭಿಷೇಕ್ ಬ್ರೀಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಮೆಜಾನ್ ಪ್ರೈಮ್ ವೀಡಿಯೊದದಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. 
 

Follow Us:
Download App:
  • android
  • ios