ಇದು ದಶಕಗಳಿಗೂ ಹಿಂದಿನ ಮಾತು. ಹಿಮಾಚಲ ಪ್ರದೇಶದ ಒಂದು ಹಿಲ್‌ಸ್ಟೇಶನ್‌ನಲ್ಲಿ ಒಂದು ಶೂಟಿಂಗ್ ನಡೆಯುತ್ತಿತ್ತು. ಹೀರೋ ಅಮಿತಾಭ್ ಬಚ್ಚನ್. ಹೀರೋಯಿನ್ ಜೀನತ್‌ ಅಮಾನ್‌. ಅಮಿತಾಭ್‌ ಮಗ ಅಭಿಷೇಕ್ ಬಚ್ಚನ್‌ಗೆ ಆಗಿನ್ನೂ ಐದು ವರ್ಷ. ತಂದೆಯ ಜೊತೆಗೆ ಶೂಟಿಂಗ್ ಸೆಟ್‌ಗೆ ಯಾವಾಗಲೂ ಬಂದಿರುತ್ತಿದ್ದ ಅಭಿಷೇಕ್‌ಗೆ, ಅಮಿತಾಭ್‌ ಜೊತೆ ನಟಿಸುತ್ತಿದ್ದ ಜೀನತ್‌ ಬಗ್ಗೆ ಎಲ್ಲಿಲ್ಲದ ಕುತೂಹಲ ಹಾಗೂ ಒಂದು ಬಗೆಯ ಅಕ್ಕರೆ ಹಾಗೂ ಸಲಿಗೆ. ಜೀನತ್‌ನ ರೂಮಿನಲ್ಲೇ ಆಟವಾಡಿಕೊಂಡು ಇದ್ದು ಬಿಡುತ್ತಿದ್ದ. ಹಾಗೇ ಒಂದು ದಿನ ಶೂಟಿಂಗ್ ಮುಗಿಸಿ ರೂಮಿಗೆ ಹಿಂದಿರುಗಿದ ಜೀನತ್‌ನನ್ನು ಕಂಡು ಕುತೂಹಲದಿಂದ ಅಭಿಷೇಕ್ 'ರಾತ್ರಿ ನೀನು ಒಬ್ಳೇ ಮಲಗ್ತೀಯಾ?' ಅಂತ ಪ್ರಶ್ನಿಸಿದ. ಮನೆಯಲ್ಲಿ ತಾಯಿಯ ಜತೆ, ಶೂಟಿಂಗ್‌ ಸ್ಥಳದಲ್ಲಿ ತಂದೆಯ ಜೊತೆ ಮಲಗುತ್ತಿದ್ದ ಅಭಿಷೇಕ್‌ಗೆ ಜೀನತ್ ಯಾರ ಜೊತೆ ಮಲಗುತ್ತಾಳೆ ಎಂಬ ಕುತೂಹಲ ಬಂದದ್ದು ಸಹಜವೇ. ಆಗ ಜೀನತ್, 'ನಾನು ಒಬ್ಳೇ ಮಲಗ್ತೀನಿ' ಅಂದಳು. ಕೂಡಲೇ ಅಭಿಷೇಕ್ 'ನನ್ನ ಜೊತೆ ಮಲಗ್ತೀಯಾ?' ಅಂತ ಪ್ರಶ್ನಿಸಬೇಕೆ!

ಜೀನತ್‌ ಅಮನ್‌ಗೆ ಹೊಡೆದು ದವಡೆ ಮುರಿದಿದ್ದರು ಈ ನಟ! ...

ಅದಕ್ಕೆ ಜೀನತ್ ನೀಡಿದ ಉತ್ತರ ಮಾತ್ರ ಇನ್ನೂ ಸ್ವಾರಸ್ಯಕರವಾದ್ದಾಗಿತ್ತು. ಆಕೆ ತಮಾಷೆಯಾಗಿ 'ಅದಕ್ಕೆ ನೀನು ಇನ್ನೂ ಸ್ವಲ್ಪ ದೊಡ್ಡೋನಾಗಬೇಕು!' ಎಂದುಬಿಟ್ಟಳು! ಈ ವಿಚಾರವನ್ನು ಸ್ವತಃ ಅಭಿಷೇಕ್‌ ಬಚ್ಚನ್ನೇ ಇತ್ತೀಚೆಗೆ ಒಂದು ಸಂದರ್ಶನದ ವೇಳೆ ರಿವೀಲ್‌ ಮಾಡಿದ್ದರು. ಸುರಸುಂದರಿಯಾಗಿದ್ದ ಜೀನತ್ ಅಮಾನ್ ತನ್ನ ಫಸ್ಟ್ ಕ್ರಶ್ ಎಂಬುದನ್ನೂ ಹೇಳಿಕೊಂಡಿದ್ದರು.

ಜೀನತ್ ಅಮಾನ್‌ಗೆ ಇದೇ ಡಿಸೆಂಬರ್ 19ಕ್ಕೆ 70 ವರ್ಷ ತುಂಬುತ್ತವೆ. ಇನ್ನೂ ಸಾಕಷ್ಟು ಆಕ್ಟಿವ್ ಆಗಿರುವ ಜೀನತ್, ಒಂದು ಕಾಲದ ಪ್ರಳಯಸುಂದರಿ. ಸತ್ಯಂ ಶಿವಂ ಸುಂದರಂ ಈಕೆಯ ಟ್ರಂಪ್‌ಕಾರ್ಡ್ ಫಿಲಂಗಳಲ್ಲಿ ಒಂದು. ಡಾನ್, ಹರೇ ರಾಮ ಹರೇ ಕೃಷ್ಣ ಮುಂತಾದ ಫಿಲಂಗಳಲ್ಲಿ ನಟಿಸಿ ಬಾಲಿವುಡ್‌ನ ಗ್ರೇಟ್ ಆಕ್ಟರ್‌ಗಳಲ್ಲಿ ಒಬ್ಬಳೆನಿಸಿದಳು. ಆಗಿನ ಕಾಲದ ಗ್ಲಾಮರ್ ಡಾಲ್, ಸೆಕ್ಸಿ ಬಾಂಬ್‌ಶೆಲ್. ನಟನೆಗೂ ಮುನ್ನವೇ ಫಿಲಂಪೇರ್‌ ಮ್ಯಾಗಜಿನ್‌ನ ಕವರ್ ಪೇಜ್‌ಗೆ ಈಕೆ ನೀಡಿದ ಬೋಲ್ಡ್ ಪೋಸ್ ಸದ್ದು ಮಾಡಿತು. ಮುಂಬಯಿಯಲ್ಲೇ ಶ್ರೀಮಂತ ಮನೆತನದಲ್ಲಿ ನಟಿಸಿದ ಈಕೆ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಟಿಸಿ ರನ್ನರ್ ಅಪ್‌ ಕೂಡ ಆದಳು. 13ನೇ ವರ್ಷ ವಯಸ್ಸಿನಲ್ಲಿ ಬಾಲಿವುಡ್‌ನ ಸ್ಕ್ರಿಪ್ಟ್ ರೈಟರ್ ಆಗಿದ್ದ ಈಕೆಯ ತಂದೆ ಅಮಾನುಲ್ಲಾ ನಿಧನರಾದರು. ನಂತರ ಈಕೆ ತನ್ನ ಹೆಸರಿನ ಜೊತೆಗೆ ಅಮಾನ್ ಸೇರಿಸಿಕೊಂಡಳು.

ಪಾಕ್ ಕ್ರಿಕೆಟಿಗರಿಗೆ ಬೋಲ್ಡ್ ಆದ ಭಾರತೀಯ ನಟಿಯರು ಇವರು ...

1970ರಲ್ಲಿ ಬಂದ ಹರೇ ರಾಮ ಹರೇ ಕೃಷ್ಣ ಫಿಲಂನ ದಮ್ ಮಾರೋ ದಮ್ ಚಿತ್ರಗೀತೆ ಬಾಲಿವುಡ್‌ಗೆ ಕಿಚ್ಚು ಹಚ್ಚಿತು. ಹಿಂದಿ ಚಿತ್ರರಂಗಕ್ಕೆ ಹಿಪ್ಪಿ ಸಂಸ್ಕೃತಿಯನ್ನು ಪರಿಚಯಿಸಿತು. ದೇವಾನಂದ್- ಜೀನತ್ ಜೊತೆಗಾರಿಕೆಯ ಈ ಫಿಲಂ ಎವರ್‌ಗ್ರೀನ್ ಸೂಪರ್‌ಹೀಟ್. ಮುಂದೆ ರಾಜ್‌ಕಪೂರ್ ಮುಂತಾದ ನಿರ್ದೇಶಕರ ಜೊತೆ ಈಕೆ ಕೆಲಸ ಮಾಡಿದಳು. ಸತ್ಯಂ ಶಿವಂ ಸುಂದರಂನಲ್ಲಂತೂ ಸಕತ್ ಬೋಲ್ಡ್ ಲುಕ್‌ನೊಂದಿಗೆ ಪರದೆಗೇ ಬೆಂಕಿ ಹಚ್ಚಿದಳು.

ಹಾಗೇ ಹತ್ತಾರು ಜನರೊಂದಿಗೆ ಪ್ರೇಮ- ದ್ವೇಷ- ಸಿಟ್ಟು- ಅಕ್ಕರೆ- ದೈಹಿಕ- ಮಾನಸಿಕ ಇತ್ಯಾದಿ ಸಂಬಂಧಗಳನ್ನು ಇಟ್ಟುಕೊಂಡು ಪ್ರಕ್ಷುಬ್ಧ ಬದುಕನ್ನೂ ಬದುಕಿದಳು. ಈಕೆಯ ಮೊದಲ ಗಂಡ ಸಂಜಯ ಖಾನ್. ಎರಡನೇ ಗಂಡ ಮಝರ್ ಖಾನ್. ಇಬ್ಬರೂ ಈಗಿಲ್ಲ. ಒಂದು ಕಾಲದಲ್ಲಿ ಸಂಜಯ್ ಖಾನ್ ಜೊತೆಗಿನ ಬದುಕಿನಲ್ಲಿ ಆತನಿಂದ ಪ್ರಕ್ಷುಬ್ಧ ಹಿಂಸೆಯನ್ನೂ ಅನುಭವಿಸಿ ಹೊರಬಂದಳು. 2018ರಲ್ಲಿ ಅಮಾನ್ ಖನ್ನಾ ಎಂಬ ಉದ್ಯಮಿಯ ಮೇಲೆ ರೇಪ್ ಕೇಸನ್ನೂ ದಾಖಲಿಸಿದ್ದಳು. ಮುಂಬಯಿಯಲ್ಲಿ ವಿಲಾಸಿ ಮತ್ತು ಅರ್ಥಪೂರ್ಣ ಬದುಕನ್ನು ಬದುಕುತ್ತಿರುವ ಜೀನತ್‌ಳದು ವರ್ಣರಂಜಿತ ವ್ಯಕ್ತಿತ್ವ. ಈಗಲೂ ಬಾಲಿವುಡ್‌ನ ಪ್ರತಿಷ್ಠಿತ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಉಂಟು.

ವಿಶ್ವಸುಂದರಿ ಮದುವೆಗೆ ಆಮಂತ್ರಿಸದ್ದಕ್ಕೆ ಶತ್ರುಘ್ನ ಸಿನ್ಹಾ ರಿಯಾಕ್ಷನ್‌ ಹೀಗಿತ್ತು! ...