ಶೂಟಿಂಗ್​ ಸೆಟ್​ನಲ್ಲಿ ಒಮ್ಮೆ ಅಪ್ಪ ಎಂದು ತಿಳಿದು ರಣಬೀರ್​ ಕಪೂರ್​ರನ್ನು ತಬ್ಬಿಕೊಂಡಿದ್ದ ಆರಾಧ್ಯಗೆ ಅಲ್ಲಿಂದ ಅವರ ಮೇಲೆ ಕ್ರಷ್​ ಶುರುವಾಗಿದ್ಯಂತೆ. ಇದನ್ನು ಖುದ್ದು ಐಶ್ವರ್ಯ ರೈ ರಿವೀಲ್​ ಮಾಡಿದ್ದಾರೆ. ಅವರು ಹೇಳಿದ್ದೇನು? 

ಅಮಿತಾಭ್​ ಬಚ್ಚನ್​ ಕುಟುಂಬದ ಕುಡಿ, ಬಾಲಿವುಡ್​ ಕ್ವೀನ್​ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್​ ಬಚ್ಚನ್​ ಅವರ ಪುತ್ರಿ ಆರಾಧ್ಯ ಬಚ್ಚನ್​ಗೆ ಇದೀಗ 14 ವರ್ಷ. 2011ರ ನವೆಂಬರ್​ 17ರಂದು ಹುಟ್ಟಿರುವ ಆರಾಧ್ಯ ಈಗ ಸೆಲೆಬ್ರಿಟಿ ಪುತ್ರಿಯಾಗಿ ಸಕತ್​ ಸುದ್ದಿಯಲ್ಲಿದ್ದಾಳೆ. ಅದರಲ್ಲಿಯೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರ ಪುತ್ರಿ ಎಂದ ಮೇಲೆ ಸಹಜವಾಗಿ ಆರಾಧ್ಯ ಮೇಲೆ ಸಿನಿ ಪ್ರಿಯರ ಅದರಲ್ಲಿಯೂ ಹೆಚ್ಚಾಗಿ ಪಾಪರಾಜಿಗಳ ಕಣ್ಣು ನೆಟ್ಟಿರುತ್ತದೆ. ತುಂಬಾ ನಾಚಿಕೆ ಸ್ವಭಾವದ ಆರಾಧ್ಯ ಹೊರಗಡೆ ಎಲ್ಲಿಯೇ ಹೋದರೂ ಅಮ್ಮನ ಕೈ ಗಟ್ಟಿಯಾಗಿ ಹಿಡಿದುಕೊಂಡು ಕ್ಯಾಮೆರಾ ಕಣ್ಣಿನಿಂದ ಮರೆ ಮಾಚುವುದನ್ನು ನೋಡಬಹುದು. ಇದರ ನಡುವೆಯೇ, ಕಳೆದ ವರ್ಷದಿಂದ ಐಶ್​ ಮತ್ತು ಅಭಿಷೇಕ್​ ನಡುವಿನ ಡಿವೋರ್ಸ್​ ಸುದ್ದಿ ಸಕತ್​ ಸದ್ದು ಮಾಡುತ್ತಲೇ ಇದೆ.

ಇದೀಗ ಐಶ್ವರ್ಯ ಅವರು, ತಮ್ಮ ಪುತ್ರಿ ಆರಾಧ್ಯ ಕುರಿತು ಹೇಳಿರೋ ಇಂಟರೆಸ್ಟಿಂಗ್​ ವಿಷ್ಯವೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಅದೇನೆಂದ್ರೆ, ಸಂದರ್ಶನವೊಂದರಲ್ಲಿ ನಟ ರಣಬೀರ್​ ಕಪೂರ್​ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿರೋ ಐಶ್ವರ್ಯ ಅವರು, ನಮ್ಮಿಬ್ಬರ ಸ್ನೇಹ ತುಂಬಾ ಚೆನ್ನಾಗಿದೆ. ನಾವಿಬ್ಬರೂ ಸದಾ ಒಳ್ಳೆಯ ಸ್ನೇಹಿತರೇ ಎಂದಿದ್ದಾರೆ. ಅದೇ ರೀತಿ, ಶೂಟಿಂಗ್​ ಸಮಯದಲ್ಲಿ ಹಿಂಬದಿಯಿಂದ ರಣಬೀರ್​ ಕಪೂರ್​ರನ್ನು ನೋಡಿದ್ದ ಮಗಳು ಆರಾಧ್ಯಾ, ತನ್ನ ಅಪ್ಪ ಅಭಿಷೇಕ್​ ಎಂದು ತಪ್ಪಾಗಿ ತಿಳಿದುಕೊಂಡು ತಬ್ಬಿಕೊಂಡು ಕೊನೆಗೆ ನಾಚಿ ನೀರಾದ ಘಟನೆಯನ್ನು ವಿವರಿಸಿದ್ದಾರೆ. "ರಣಬೀರ್ ಕಪೂರ್ ಅವರೊಂದಿಗಿನ ನನ್ನ ಸ್ನೇಹವನ್ನು ನಾನು ಯಾವಾಗಲೂ ಆನಂದಿಸಿದ್ದೇನೆ. ಒಮ್ಮೆ ರಣಬೀರ್ ಕಪೂರ್ ಶೂಟಿಂಗ್‌ನಲ್ಲಿದ್ದಾಗ ಅವರು ಅಭಿಷೇಕ್ ಬಚ್ಚನ್ ಅವರ ಟೋಪಿ ಮತ್ತು ಜಾಕೆಟ್ ಧರಿಸಿದ್ದರು. ಈ ಸಮಯದಲ್ಲಿ ಆರಾಧ್ಯ ಕೂಡ ಸೆಟ್‌ಗೆ ಬಂದು ರಣಬೀರ್ ಅವರನ್ನು ಅಭಿಷೇಕ್ ಎಂದು ಭಾವಿಸಿ, ಆರಾಧ್ಯ ಅವರನ್ನು ತಬ್ಬಿಕೊಂಡರು. ಆದರೆ ಆರಾಧ್ಯ ನಂತರ ತಿಳಿದುಕೊಂಡಾಗ, ಸಿಕ್ಕಾಪಟ್ಟೆ ನಾಚಿಕೆಪಟ್ಟುಕೊಂಡಳು" ಎಂದಿದ್ದಾರೆ.

ಆದರೆ, ಅಂದಿನಿಂದ ರಣಬೀರ್​ ಕಂಡ್ರೆ ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಲೇ ಇರುತ್ತಾಳೆ. ರಣಬೀರ್​ ಮೇಲೆ ಅವಳಿಗೆ ಕ್ರಷ್​ ಆಗಿದೆ. ಆ ಸಮಯದಲ್ಲಿ ವಿಷಯ ತಿಳಿದ ಅಭಿಷೇಕ್, ರಣಬೀರ್‌ ಕೂಡ ಇದೇ ಮಾತನ್ನು ಹೇಳಿದ್ದರು. ಆರಾಧ್ಯಗೆ ನನ್ನ ಮೇಲೆ ಕ್ರಶ್​ ಆಗಿದೆ ಎಂದಿದ್ದರು. ಈಗಲೇ ರಣಬೀರ್​ ಹೆಸರು ಕೇಳಿದರೆ ಆರಾಧ್ಯಳ ಮುಖ ಕೆಂಪಗಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ ಐಶ್ವರ್ಯ ರೈ. ಆ ಘಟನೆ ಬಳಿಕ, ರಣಬೀರ್ ಕಪೂರ್ ಅವರನ್ನು ಚಿಕ್ಕಪ್ಪ ಎಂದು ಕರೆಯಲು ನಾವು ಹೇಳಿದರೂ ಆಕೆ ನಿರಾಕರಿಸಿದಳು. ಆರ್​ಕೆ ಎಂದೇ ಕರೆಯುತ್ತಿದ್ದಾಳೆ. ಇದಕ್ಕಾಗಿಯೇ ಇವಳಿಗೆ ಕ್ರಷ್​ ಆಗಿರೋದು ತಿಳಿಯುತ್ತದೆ ಎಂದಿದ್ದಾರೆ.

ಇನ್ನು ಆರಾಧ್ಯಳ ಬಗ್ಗೆ ಗೂಗಲ್​ನಲ್ಲಿ ಇಂದಿಗೂ ಹಲವಾರು ವಿಷಯಗಳ ಬಗ್ಗೆ ಹುಡುಕಾಟ ನಡೆಯುತ್ತಲೇ ಇರುತ್ತದೆ. ಈ ಹಿಂದೆ ಆರಾಧ್ಯಳ ಶಾಲೆಯ ಶುಲ್ಕದ ವಿಷಯ ಸಕತ್​ ಸದ್ದು ಮಾಡಿತ್ತು. ಅಂದಹಾಗೆ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ಅವರು ದೇಶದ ಅತ್ಯಂತ ದುಬಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಧೀರೂಭಾಯಿ ಅಂಬಾನಿ ಇಂಟರ್​ನ್ಯಾಷನಲ್ ಶಾಲೆಯಲ್ಲಿ ಹೈಸ್ಕೂಲ್​ ಓದುತ್ತಿದ್ದು, ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಫೀಸ್ 1.70 ಲಕ್ಷ ರೂ., 8-10ನೇ ತರಗತಿಗೆ 4.48 ಲಕ್ಷ ರೂ. ಫೀಸ್ ಮತ್ತು 11 ಮತ್ತು 12ನೇ ತರಗತಿ 9.65 ಲಕ್ಷ ರೂ. ಶುಲ್ಕ ಇದೆ ಎನ್ನಲಾಗಿದೆ. ಆರಾಧ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಬಗ್ಗೆ ಇದುವರೆಗೆ ಬಚ್ಚನ್​ ಕುಟುಂಬಸ್ಥರು ಯಾವ ವಿಷಯವನ್ನೂ ಹೊರಕ್ಕೆ ಹಾಕಲಿಲ್ಲ.